ಅಕ್ರಮ ಬಂದೂಕು ವಶ

Posted on: June 29, 2013

 ಮಡಿಕೇರಿ:

ಮನೆಯಲ್ಲಿ ಅಕ್ರಮವಾಗಿ ಇಡಲಾಗಿದ್ದ ಹಳೆಯ ಪಿಸ್ತೂಲ್ ಒಂದು ಪತ್ತೆಯಾಗಿದೆ , ನಾಪೋಕ್ಲು ಬಳಿಯ ಬೇತು ಗ್ರಾಮದಲ್ಲಿ ಎಂ.ಹೆಚ್. ಹಂಸ ಎಂಬುವವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಅಬೂಬಕರ್ ಎಂಬುವವರು ವಾಸವಿದ್ದು, ಮನೆ ಖಾಲಿ ಮಾಡುವ ಸಂದರ್ಭ ತುಕ್ಕು ಹಿಡಿದ ಸ್ಥಿತಿಯಲ್ಲಿದ್ದ ಹಳೆಯ ನಾಡ ಬಂದೂಕು ಪತ್ತೆಯಾಗಿದೆ.
ಪಿಸ್ತೂಲ್ ನನ್ನು ಅಬೂಬಕರ್ ಅವರು ಯಾವುದೇ ಪರವಾನಗಿಯನ್ನು ಪಡೆಯದೆ ಸಂಗ್ರಹಿಸಿಟ್ಟಿದ್ದು, ಅದನ್ನು ವಶಕ್ಕೆ ಪಡೆದುಕೊಂಡಿರುವ ನಾಪೋಕ್ಲು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *