ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಜೂಜಾಟ : 9 ಮಂದಿ ಜೂಜು ಕೋರರ ಬಂಧನ

Posted on: July 19, 2013

ಸೋಮವಾರಪೇಟೆ:

ಇಲ್ಲಿನ ಲಾಡ್ಜ್ ವೊಂದರಲ್ಲಿ ಅಂದರ್ ಬಾಹರ್ ಇಸ್ಪೀಟ್ ಆಟ ಆಡುತಿದ್ದ ಒಂಭತ್ತು ಮಂದಿ ಜೂಜು ಕೋರರನ್ನು ಪೊಲೀಸರು ಬಂಧಿಸಿದ್ದಾರೆ.

18SPT2
ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಬಾಲಾಜಿ ಲಾಡ್ಜ್ ನ ರೂಂ ನಂಬರ್ 4ರಲ್ಲಿ, ಇಸ್ಪೀಟ್ ಆಟದಲ್ಲಿ ತೊಡಗಿದ್ದ ತಂಡದ ಕುರಿತು ಮಾಹಿತಿ ಪಡೆದ ಇಲ್ಲಿನ ಸರ್ಕಲ್ ಇನ್ಸ್ ಪೆಕ್ಟರ್ ಸಿದ್ದಯ್ಯ, ಠಾಣಾಧಿಕಾರಿ ರವಿಕಿರಣ್ ನೇತೃತ್ವದ ತಂಡ, ಧಾಳಿ ನಡೆಸಿ 9 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಓರ್ವ ತಪ್ಪಿಸಿಕೊಂಡಿದ್ದಾನೆ.
ಗ್ಯಾಂಬ್ಲಿಂಗ್ ನಲ್ಲಿ ತೊಡಗಿದ್ದ ಕಾಗಡಿಕಟ್ಟೆಯ ಅಶ್ರಫ್, ಪಟ್ಟಣದ ಬಸವೇಶ್ವರ ರಸ್ತೆಯ ಚಂದ್ರಶೇಖರ್, ಎಂ.ಡಿ.ಬ್ಲಾಕ್ ನ ಅಭಿಷೇಕ್, ಕಲ್ಕಂದೂರು ಗ್ರಾಮದ ಚನ್ನಯ್ಯ, ಚೌಡ್ಲು ಗ್ರಾಮದ ದಾಮೋಧರ್, ಶಶಿಕುಮಾರ್, ಬಳಗುಂದ ಮಿಥುನ್, ಕಾಗಡಿಕಟ್ಟೆ ಹೈದರ್, ಕರ್ಕಳ್ಳಿ ಕೃಷ್ಣಪ್ಪ, ಬಂಧಿತರು. ಸುರೇಶ್ ಎಂಬ ಹೆಸರಿನಲ್ಲಿ ಲಾಡ್ಜ್ ನ ರೂಂ ಪಡೆದಿದ್ದ ಕಾನ್ವೆಂಟ್ ಬಾಣೆಯ ರವಿ ಪರಾರಿಯಾಗಿದ್ದಾನೆ.
ಬಂಧಿತರಿಂದ ಗ್ಯಾಂಬ್ಲಿಂಗ್ ಗೆ ಬಳಸಿದ್ದ ರೂ.16,495ನಗದು, 8 ಸೆಲ್ ಫೋನ್ ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ. ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ನಾಗರಾಜ್, ಈರಪ್ಪ, ಲೋಹಿತ್, ಸಂದೇಶ್ ಭಾಗವಹಿಸಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *