ಕಾವೇರಿ ತೀರ್ಥೋದ್ಭವಕ್ಕೆ ಕ್ಷಣ ಗಣನೆ

Posted on: October 17, 2013

ಮಡಿಕೇರಿ:
ಜಲರೂಪಿಣಿ ಕಾವೇರಿಯು ತುಲಾ ಸಂಕ್ರಮಣದಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳಲಿದ್ದಾಳೆ.Thalakaveri-2

ತೀರ್ಥರೂಪಿಣಿ ಕಾವೇರಿಯ ದರ್ಶನಕ್ಕೆ ಸಾಗರೋಪಾದಿಯಲ್ಲಿ ಭಕ್ತಾಧಿಗಳು ಹಾಗೂ ಪ್ರವಾಸಿಗರು ಆಗಮಿಸುತ್ತಿದ್ದು, ಮುಂಜಾನೆಯಿಂದಲೇ ಶ್ರೀ ತಲಕಾವೇರಿ ಕ್ಷೇತ್ರದ ಅರ್ಚಕರು ಕಾವೇರಿ ಮಾತೆಯ ಪೂಜಾ ವಿಧಿ ವಿಧಾನಗಳಲ್ಲಿ ನಿರತರಾಗಿದ್ದು, ಸುಜಾ ಕುಶಾಲಪ್ಪ ಅವರ ನೇತೃತ್ವದಲ್ಲಿ ಚಂಡಿಕಾಹೋಮವನ್ನು ನೆರವೇರಿಸಲಾಗಿದೆ. ಇಂದು ಮಧ್ಯಾಹ್ನ 12.01ಕ್ಕೆ ಜಲರೂಪಿಣಿಯಾಗಿ ದರ್ಶನ ನೀಡುವ ಕಾವೇರಿ ಮಾತೆಯ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ.
ವಿಶೇಷ:
ಕಾವೇರಿ ಮಾತೆಯು ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುವ ವೇಳೆ ಈ ಪ್ರದೇಶದ ಎಲ್ಲಾ ಕೆರೆ, ಕಟ್ಟೆ, ಬಾವಿಗಳಲ್ಲಿ ನೀರಿನ ಪ್ರಮಾಣದ ಹೆಚ್ಚಾಗುವುದರ ಮೂಲಕ ಕಾವೇರಿ ಮಾತೆ ಜಲರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *