ಶ್ರೀ ಕನ್ಯಕಾಪರಮೇಶ್ವರಿ ದೇವಿಯ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ

Posted on: January 28, 2014

ಮಡಿಕೇರಿ:
Sri Lalita Parameswari Deviಜ.31 ರಿಂದ ಫೆ. 2 ರ ವರೆಗೆ 3 ದಿನಗಳ ಕಾಲ ಮಡಿಕೇರಿಯ ಮಹದೇವಪೇಟೆ ಯಲ್ಲಿರುವ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಶ್ರೀ ಕನ್ಯಕಾಪರಮೇಶ್ವರಿ ದೇವಿಯ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವ ನಡೆಯಲಿದೆ.
ಕಾರ್ಯಕ್ರಮಗಳು:
ಜ.31ರಂದು ಬೆಳಗ್ಗೆ 9 ಘಂಟೆಗೆ ಗಣಪತಿ ಪ್ರಾರ್ಥನೆ, ಗಂಗಾ ಭಾಗೀರಥಿ ಪೂಜೆ, ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಮೇಳನ, ಬಿಂಬಶುದ್ಧಿ, ಸ್ಥಳ ಶುದ್ಧಿ, ದೇವನಾಂದಿ, ಋತ್ವಿಕ್ ವರಣ, ಸಹಸ್ರ ಮೋದಕ ಹೋಮ.
ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ.
ಸಂಝೆ 5.30ಕ್ಕೆ ಕಳಶ ಸ್ಥಾಪನೆ, ಅಂಕುರಾರ್ಪನೆ, ಧ್ವಜಾರೋಹಣ, ವಾಸ್ತುಶಾಂತಿ, ವಾಸ್ತು ಹೋಮ, ವಾಸ್ತು ಬಲಿ, ರಾಕ್ಷೊಘ್ನ ಹೋಮ, ಪರಿ ಅಗ್ನೀಕರಣ.
ರಾತ್ರಿ 9.30ಕ್ಕೆ ಮಹಾಮಂಗಳಾರತಿ , ಪ್ರಸಾದ ವಿನಿಯೋಗ.
ಫೆ. 1ರಂದು ಬೆಳಗ್ಗೆ 7 ಘಂಟೆಗೆ ಗಣಪತಿ ಪ್ರಾರ್ಥನೆ, ಗುರು ಪ್ರಾರ್ಥನೆ, ವೇದ ಪಾರಾಯಣ, ಕಳಶ ಆರಾಧನೆ.
8.30ಕ್ಕೆ ಶ್ರೀ ಕನ್ಯಕಾಪರಮೇಶ್ವರಿ, ಶ್ರೀ ನಗರೇಶ್ವರ, ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾಮತಿ, ಶ್ರೀ ಅನ್ನಪುರ್ಣೇಶ್ವರಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಮಣ್ಯಂ, ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಹಾಗೂ ಆದಿತ್ಯಾದಿ ನವಗ್ರಹ ದೇವತೆಗಳ, ನಕ್ಷತ್ರ ಮೃತ್ಯುಂಜಯ ಹೋಮಗಳು.
ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ.
ಸಂಜೆ 5.30ಕ್ಕೆ ಸಾಮೂಹಿಕ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ. 6 ಕ್ಕೆ ಮಹಾ ಸುದರ್ಶನ ಹೋಮ.
ರಾತ್ರಿ 8 ಕ್ಕೆ ಪ್ರತಿಷ್ಠಾಪನ ವಿಗ್ರಹಗಳ ಅಧಿವಾಸಗಳು- ಕ್ಷೀರಾಧಿವಾಸ, ಧಾನ್ಯವಾಸ, ಪುಷ್ಪಧಿವಾಸ, ಫಲಾಧಿವಾಸ, ರತ್ನಾಧಿವಾಸ, ಶಯ್ಯಾಧಿವಾಸ, ಇತ್ಯಾದಿಗಳು.
ರಾತ್ರಿ 9.30ಕ್ಕೆ ಕ್ಷೇತ್ರ ಬಲಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ.
ಫೆ.2 ರಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಬಿಂಬಗಳ ಪ್ರಾಣ ಪ್ರತಿಷ್ಠಾಪನೆ ಹಾಗೂ ನೇತ್ರೋನ್ಮಿಲನ ಕಲಾಕರ್ಷಣ, ಕಲಾ ಹೋಮಗಳು, ಪ್ರಧಾನ ಹೋಮಗಳು ಇತ್ಯಾದಿಗಳು.
8.30ಕ್ಕೆ ಗೋ ನಿರೀಕ್ಷಣೆ, 9 ಘಂಟೆಗೆ ದೇವತೆಗಳಿಗೆ ವಿಶೇಷ ಅಷ್ಟದ್ರವ್ಯಪೂವಕ ಪಂಚಾಮೃತ ಅಭಿಷೇಕ, 12 ಕ್ಕೆ ಮಹಾಪೂರ್ನಹುತಿ. 12.15ಕ್ಕೆ ಅಭಿಜಿತ್ ಲಗ್ನದಲ್ಲಿ ಕುಂಭ ವಿಸರ್ಜನೆ, ಕುಂಭಾಭಿಷೇಕ, ಮಹಾಬಲಿ ಪ್ರಧಾನ, ಕದಲೀ ವೃಕ್ಷ ಚೇದನ, ದರ್ಪಣ ನಿರೀಕ್ಷಣ, ಮದ್ಯಾಹ್ನ 1 ಘಂಟೆಗೆ ವಿಶೇಷ ಅಲಂಕಾರದೊಂದಿಗೆ ಮಹಾಮಾತೆಯ ದರ್ಶನ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆಯಲಿವೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *