ಹುಟ್ಟುಹಬ್ಬದ ಶುಭಾಶಯಗಳು

Posted on: April 7, 2014

ನಮಸ್ಕಾರ..

Anatharajಕೊಡಗಿನ ಮೊಟ್ಟ ಮೊದಲ ಅಂತರ್ಜಾಲ ಸುದ್ದಿವಾಹಿನಿ ಕೊಡಗು ನ್ಯೂಸ್ ಡಾಟ್ ಕಾಮ್ ಗೆ ಒಂದು ವರ್ಷದ ಸಂಭ್ರಮ.. ಈ ಸುದ್ದಿ ಕೇಳಿ ನನಗೆ ತುಂಬಾ ಸಂತೋಷವಾಯಿತು. ಏಕೆಂದರೆ ಕೇವಲ ಸ್ಥಳೀಯ ದಿನಪತ್ರಿಕೆಗಳಿಗೆ ಅವಲಂಬಿತರಾಗಿದ್ದ ನಾವು, ತಕ್ಷಣ ಸುದ್ದಿ ಪಡೆಯುವಲ್ಲಿ ವಿಫಲವಾಗಿದ್ದೆವು. ಮಡಿಕೇರಿಯಲ್ಲೇ ಇದ್ದರೂ ಒಂದು ದಿನ ಕಾದು ಮರುದಿನ ಆ ಸುದ್ದಿಯನ್ನು ಓದಬೇಕಾಗಿತ್ತು.

ಆದರೆ ನಿಮ್ಮ ಕೊಡಗು ನ್ಯೂಸ್ ಡಾಟ್ ಕಾಮ್ ನಿಂದಾಗಿ ತಕ್ಷಣ ಸುದ್ದಿಯನ್ನು ಛಾಯಾಚಿತ್ರ ಮುಖಾಂತರ ತಿಳಿದುಕೊಳ್ಳಬಹುದಾಗಿದೆ. ನಾನು ಪ್ರತಿದಿನ, ಅರ್ಧಗಂಟೆಗೊಮ್ಮೆ ಕೊಡಗು ನ್ಯೂಸ್ ಡಾಟ್ ಕಾಮ್‌ನ್ನು ವೀಕ್ಷಿಸುತ್ತಾ ಇರುತ್ತೇನೆ. ತುಂಬಾ ಸುಂದರವಾಗಿ, ಶುದ್ಧವಾಗಿ ಮೂಡಿ ಬರುತ್ತಿದೆ.

ಕೊಡಗು ನ್ಯೂಸ್ ಡಾಟ್ ಕಾಮ್‌ಗೆ ನನ್ನದೊಂದು ಸಲಹೆ.. ಬ್ರೇಕಿಂಗ್ ನ್ಯೂಸ್ ಕೊಡುವ ವೇಳೆಯಲ್ಲಿ ಪೂರ್ಣ ಮಾಹಿತಿಯನ್ನು ಪಡೆದುಕೊಂಡು, ಆ ಸುದ್ದಿ ಗೊಂದಲ/ಸಂಶಯಕ್ಕೆ ಕಾರಣವಾಗದ ರೀತಿಯಲ್ಲಿ ಇರಬೇಕು. ಆಗ ಆ ಸುದ್ದಿಯ ದಕ್ಷತೆ ಹೆಚ್ಚುತ್ತದೆ. ಏನೇ ಆಗಲಿ ನ್ಯೂಸ್ ಡಾಟ್ ಕಾಮ್‌ನ ಅಭಿಮಾನಿಯಾಗಿ ನಿಮಗೆ ಶುಭಾಶಯವನ್ನು ಕೋರುತ್ತೇನೆ ಹಾಗೂ ಹೀಗೆ ಅದರ ಕಾರ್ಯವು ಮುಂದುವರಿಯಲಿ ಮತ್ತು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸುತ್ತೇನೆ.

ವಂದನೆಗಳೊಂದಿಗೆ,

ಅನಂತ್‌ರಾಜ್ ಪಿ.ಎಸ್.
ಮಡಿಕೇರಿ
ಮೊ: 9449475707

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *