ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ : ಕಿರಿಯ ಪತ್ರಕರ್ತ ವಿಘ್ನೇಶ್ ಭೂತನಕಾಡಿಗೆ ಪ್ರಶಸ್ತಿಯ ಗರಿ

Posted on: May 20, 2014

ಮಡಿಕೇರಿ:

ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಘೋಷಿಸಲಾಗಿದೆ. 9 ಪತ್ರಕರ್ತರು ಪ್ರಶಸ್ತಿಗೆ ಭಾಜನರಾಗಿದ್ದು, ಮೇ.25 ರಂದು ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸಂಘದ ಪ್ರಧಾನ ಕಾರ್ಯದರ್ಶಿ ಎ.ಆರ್.ಕುಟ್ಟಪ್ಪ ತಿಳಿಸಿದ್ದಾರೆ.

ಹಾಕತ್ತೂರಿನ ಆಪ್ತ ಸಮಾಲೋಚಕಿ ತೇಲಪಂಡ ಆರತಿ ಸೋಮಯ್ಯ ತಮ್ಮ ತಾತ ಕೋಟೇರ ಮುತ್ತಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಆರೋಗ್ಯ ವರದಿ ಪ್ರಶಸ್ತಿಗೆ ಶಕ್ತಿಯಲ್ಲಿ ಪ್ರಕಟವಾದ ವಿಘ್ನೇಶ್ ಭೂತನಕಾಡು ಬರೆದಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ನಿತ್ಯನರಕ ವರದಿ ಆಯ್ಕೆಯಾಗಿದೆ. ಮಡಿಕೇರಿ ನಗರದ ಫೀ.ಮಾ.ಕಾರ್ಯಪ್ಪ ಕಾಲೇಜಿನಲ್ಲಿ ಪತ್ರಿಕಾ ವಿಷಯಲ್ಲಿ ಪದವಿ ಗಳಿಸಿ ಅಂತರ್ಜಾಲ ಸುದ್ದಿ ವಾಹಿನಿ “ಕೊಡಗು ನ್ಯೂಸ್ ಡಾಟ್ ಕಾಮ್” ನ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ವಿಘ್ನೇಶ್ ಭೂತನಕಾಡು “ಶಕ್ತಿ” ಪತ್ರಿಕೆಯ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲೇ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಿಲ್ಲಾ ಪತ್ರಕರ್ತರ ಸಂಘದಿಂದ ಅತ್ಯುತ್ತಮ ಗ್ರಾಮೀಣ ವರದಿಗೆ ನೀಡುವ ಪ್ರಶಸ್ತಿಗೆ ಶಕ್ತಿಯಲ್ಲಿ ಪ್ರಕಟವಾಗಿರುವ ಸೋಮವಾರಪೇಟೆಯ ವಿಜಯ ಹಾನಗಲ್ ಅವರ ಸ್ವಾಮಿ… ಮಲಗೋಕಾದ್ರೂ ನಮಗೊಂದು ಮನೆ ಮಾಡಿಕೊಡಿ ವರದಿ ಆಯ್ಕೆಯಾಗಿದೆ. ಸೋಮವಾರಪೇಟೆಯ ಪತ್ರಕರ್ತ ಕೋವರ್‌ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಕೋವರ್‌ಕೊಲ್ಲಿ ಚಂದ್ರಶೇಖರ್ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ವಿಜಯವಾಣಿಯಲ್ಲಿ ಪ್ರಕಟವಾಗಿರುವ ಹಿರಿಕರ ರವಿ ಬರೆದಿರುವ ಮುಂಗಾರು ಮಳೆಗೆ ಕಮರಿದ ಗಿರಿಜನರ ಬದುಕು ವರದಿ ಆಯ್ಕೆಯಾಗಿದೆ.

ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಕಾಧ್ಯಕ್ಷ ಮಂದ್ರೀರ ಮೋಹನ್‌ದಾಸ್ ಪ್ರಗತಿಪರ ಹಾಲು ಉತ್ಪಾದಕ ಉಳುವಾರನ ಶೇಷಗಿರಿ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಹೈನುಗಾರಿಕಾ ವರದಿ ಪ್ರಶಸ್ತಿಗೆ ಕನ್ನಡಪ್ರಭಾದಲ್ಲಿ ಪ್ರಕಟವಾಗಿರುವ ಎಚ್.ಟಿ. ಅನಿಲ್ ಅವರ ಕ್ಷೀರ ಭಾಗ್ಯಕ್ಕೆ ಕೊಡಗಿನ ಗ್ರಾಹಕರಿಂದ ಭಾರೀ ಬೇಡಿಕೆ ವರದಿ ಆಯ್ಕೆಯಾಗಿದೆ.
ರಾಜ್ಯ ಪತ್ರಕರ್ತರ ಸಂಘ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ ತಮ್ಮ ತಾಯಿ ಮಂಡಿಬೆಲೆ ದ್ಯಾವಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ ವನ್ಯಜೀವಿ ಪ್ರಶಸ್ತಿಗೆ ಕೊಡಗು ಚಾನಲ್‌ನಲ್ಲಿ ಬಿತ್ತರಗೊಂಡ ಎಚ್.ಟಿ. ಅನಿಲ್ ಅವರ ಮತ್ತಿಗೋಡು ಆನೆ ಶಿಬಿರ ವರದಿ ಆಯ್ಕೆಯಾಗಿದೆ.

ರಾಜ್ಯ ಪತ್ರಕರ್ತರ ಸಂಘ ನಿರ್ದೇಶಕ ಎಚ್.ಎ. ಮುರಳೀಧರ್ ತಮ್ಮ ತಾಯಿ ಪಾರ್ವತಮ್ಮ ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕೃಷಿ ವರದಿ ಪ್ರಶಸ್ತಿಗೆ ವಿಜಯವಾಣಿಯಲ್ಲಿ ಪ್ರಕಟವಾಗಿರುವ ಗೋಣಿಕೊಪ್ಪಲಿನ ಸಣ್ಣುವಂಡ ಕಿಶೋರ್ ನಾಚಪ್ಪ ಬರೆದಿರುವ ಇದು ತುಂಬು ಕೃಷಿ ಕುಟುಂಬ ವರದಿ ಆಯ್ಕೆಯಾಗಿದೆ. ಜಿಲ್ಲಾ ಪತ್ರಕರ್ತರ ಸಂಘದಿಂದ ಸಂಘದ ಅಧ್ಯಕ್ಷರಾಗಿದ್ದ ಕೆ.ಕೆ. ಶಶಿಧರ್ ಹೆಸರಿನಲ್ಲಿ ನೀಡುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಗೆ ವಿಜಯವಾಣಯಲ್ಲಿ ಪ್ರಕಟವಾಗಿರುವ ವಿರಾಜಪೇಟೆಯ ಪಳೆಯಂಡ ಪಾರ್ಥ ಚಿಣ್ಣಪ್ಪ ಬರೆದಿರುವ ಜೈ ಹೋ… ಅಂಜಪರವಂಡ ವರದಿ ಆಯ್ಕೆಯಾಗಿದೆ.

ಹರಿಹರ ಗ್ರಾಮದ ಕೊಡುಗೈ ದಾನಿ ಕೈಬಿಲಿರ ಪಾರ್ವತಿ ಬೋಪಣ್ಣ ಅವರು ಮೇದುರ ಸುಬ್ಬವ್ವ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಪರಿಸರ ನೈರ್ಮಲ್ಯ ವರದಿಗೆ ಕನ್ನಡಪ್ರಭಾ ವರದಿಗಾರ ಎಚ್.ಟಿ. ಅನಿಲ್ ಬರೆದಿರುವ ಕಾಯಕಲ್ಪಕ್ಕೆ ಕಾದಿದೆ ಪೆರುಂಬಾಡಿ ಸರೋವರ ವರದಿ ಆಯ್ಕೆಯಾಗಿದೆ. ಜಿಲ್ಲಾ ಬೆಳೆಗಾರರ ಒಕ್ಕೂಟ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ತಮ್ಮ ತಂದೆ ತಾಯಿ ಅಜ್ಜಮಾಡ ಸುಬ್ಬಯ್ಯ & ಬೊಳ್ಳಮ್ಮ ಸ್ಥಾಪಿಸಿರುವ ಅತ್ಯುತ್ತಮ ತೋಟಗಾರಿಕೆ ವರದಿಗೆ ಕನ್ನಡಪ್ರಭಾ ವರದಿಗಾರ ಎಚ್.ಟಿ. ಅನಿಲ್ ಬರೆದಿರುವ ಕರಿಚಿನ್ನಕ್ಕೆ ಬಂಗಾರದ ಬೆಲೆ ವರದಿ ಆಯ್ಕೆಯಾಗಿದೆ.

ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ತಮ್ಮ ತಾಯಿ ಬಲ್ಲಾರಂಡ ಮಾಚಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ರಾಜಕೀಯ ವರದಿ ಪ್ರಶಸ್ತಿಗೆ ಶಕ್ತಿಯಲ್ಲಿ ಪ್ರಕಟವಾಗಿರುವ ಕುಡೆಕಲ್ ಸಂತೋಷ್ ಅವರ ಹಲವಷ್ಟು ಪ್ರಗತಿ, ಹಲೆವೆಡೆ ಮಂದಗತಿ… ಇದು ಮಡಿಕೇರಿ ನಗರಸಭೆ ವರದಿ ಆಯ್ಕೆಯಾಗಿದೆ. ಸ್ವಸ್ಥ ಸಂಸ್ಥೆ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ತಮ್ಮ ಮಾವ ಕಾಕಮಾಡ ನಾಣಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಶಿಕ್ಷಣ ವರದಿ ಪ್ರಶಸ್ತಿಗೆ ವಿಜಯವಾಣಿಯಲ್ಲಿ ಪ್ರಕಟ ವಾಗಿರುವ ಅಜ್ಜಮಾಡ ರಮೇಶ್ ಕುಟ್ಟಪ್ಪ ಬರೆದಿರುವ ವಿಕಲಚೇತನರಿಗೆ ದಾರಿದೀಪ ಸ್ವಸ್ಥ ಸಂಸ್ಥೆ ವರದಿ ಆಯ್ಕೆಯಾಗಿದೆ.

ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶ್ಯಾಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ ವನ್ಯಜೀವಿ ಪ್ರಶಸ್ತಿಗೆ ವಿಜಯವಾಣಿ ಯಲ್ಲಿ ಪ್ರಕಟವಾಗಿರುವ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರ ಆನೆ& ಮಾನವ ಸಂಘರ್ಷದ ಹಾದಿ ಹುಡುಕುತ್ತಾ ವರದಿ ಆಯ್ಕೆಯಾಗಿದೆ. ಶಕ್ತಿ ಸಂಪಾದಕ ಬಿ.ಜಿ. ಅನಂತಶಯನ ತಮ್ಮ ಹೋಂಸ್ಟೇ ಆಲ್ಫ್‌ನ್ ಗ್ಲೋ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಚಿತ್ರ ಸುದ್ದಿ ಪ್ರಶಸ್ತಿಗೆ ಶಕ್ತಿಯಲ್ಲಿ ಪ್ರಕಟವಾಗಿರುವ ಶ್ರೀಮಂಗಲದ ಅಣ್ಣೀರ ಹರೀಶ್ ಮಾದಪ್ಪ ಅವರ ಅಮ್ಮಾ ಏಳಮ್ಮ ಏಳು… ಕಂದಮ್ಮನ ಗೋಲು ಚಿತ್ರ ವರದಿ ಆಯ್ಕೆಯಾಗಿದೆ.

ಜಿಲ್ಲಾ ವಾರ್ತಾಧಿಕಾರಿಯಾಗಿದ್ದ ಪಳೆಯಂಡ ಪಿ. ಪೊನ್ನಪ್ಪ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಗೆ ಕೊಡಗು ವಾರ್ತೆಯಲ್ಲಿ ಪ್ರಕಟವಾಗಿರುವ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಅವರ ವರದಿ ಪೊನ್ನಂಪೇಟೆ ವಿಎಸ್‌ಎಸ್‌ಎನ್‌ನಲ್ಲಿ ದಂಪತಿ ದರ್ಬಾರ್ ವರದಿ ಆಯ್ಕೆಯಾಗಿದೆ.

Vignesh Z-Anil_H.T

Z-Chammatira_Pravin_Uthappa Z-Annira_Harish_Madappa

Z-H.E._Ravi Z-Kudekal_Santhosh Z-Partha_Chinnappa Z-Ramesh-Kuttappa Z-Sannuvanda_Kishore_Nachappa Z-Vijay

 

 

2 thoughts on “ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ : ಕಿರಿಯ ಪತ್ರಕರ್ತ ವಿಘ್ನೇಶ್ ಭೂತನಕಾಡಿಗೆ ಪ್ರಶಸ್ತಿಯ ಗರಿ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *