ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಮಡಿಕೇರಿಯಲ್ಲಿ ಹೈಟೆಕ್ ಮಾರುಕಟ್ಟೆ ಕಾಮಗಾರಿ ಆರಂಭ : ರೂ.3 ಕೋಟಿ ವೆಚ್ಚದಲ್ಲಿ 42 ಮಳಿಗೆಗಳ ನಿರ್ಮಾಣ

Posted on: May 28, 2014

ಮಡಿಕೇರಿ :

ಮಡಿಕೇರಿ ಮಾರುಕಟ್ಟೆಗೆ ಕೊನೆಗೂ ಅಭಿವೃದ್ಧಿಯ ಭಾಗ್ಯ ಲಭಿಸಿದೆ. ಕಳೆದ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರೂ. 3 ಕೋಟಿ ವೆಚ್ಚದ ಯೋಜನೆಗೆ ಚಾಲನೆ ದೊರೆತ್ತಿದೆ. ಹಳೆಯ ಕಟ್ಟಡವನ್ನು ನೆಲಸಮಗೊಳಿಸಲಾಗುತ್ತಿದ್ದು, ಇನ್ನು ಒಂದು ವರ್ಷದಲ್ಲಿ ನೂತನ ಮಾರುಕಟ್ಟೆ ತಲೆ ಎತ್ತಲಿದೆ. ಮಡಿಕೇರಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದರೂ ಮಾರುಕಟ್ಟೆಗೆ ಮಾತ್ರ ಅಭಿವೃದ್ಧಿಯ ಭಾಗ್ಯ ಇಲ್ಲಿಯವರೆಗೆ ಬಂದಿರಲಿಲ್ಲ. ಮಾರುಕಟ್ಟೆಗೆ ಹೈಟೆಕ್ ಸ್ಪರ್ಷ ನೀಡುವ ಉದ್ದೇಶದಿಂದ ಕಳೆದ 3 ವರ್ಷಗಳ ಹಿಂದೆಯೇ ರೂ.3 ಕೋಟಿಗಳ ಬೃಹತ್ ಯೋಜನೆಯೊಂದನ್ನು ರೂಪಿಸಲಾಗಿತ್ತಾದರೂ ಯಾವುದೇ ಗುತ್ತಿಗೆದಾರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಇದೀಗ ನೆನೆಗುದಿಗೆ ಬಿದ್ದಿರುವ ಯೋಜನೆಗೆ ಮರು ಜೀವ ಬಂದಿದ್ದು, ಟೆಂಡರ್ ಪ್ರಕ್ರಿಯೆ ಮೂಲಕ ಬೆಂಗಳೂರಿನ ಗುತ್ತೆಗೆದಾರರೊಬ್ಬರು ಕಾಮಗಾರಿಯನ್ನು ಆರಂಭಿಸಿದ್ದಾರೆ.

Market-6

ಮುಖ್ಯಮಂತ್ರಿಗಳ ಸಣ್ಣ ಪಟ್ಟಣ ಮತ್ತು ನಗರಾಭಿವೃದ್ಧಿ ಯೋಜನೆಯ ನಿಧಿಯ ಮೂಲಕ ಮಾರುಕಟ್ಟೆ ಅಭಿವೃದ್ಧಿಯಾಗುತ್ತಿದ್ದು, ಸುಮಾರು 42 ಸುಸಜ್ಜಿತ ಮಳಿಗೆಗಳು ನಿರ್ಮಾಣಗೊಳ್ಳಲಿವೆ. ಮಾಂಸ, ಮೀನು, ತರಕಾರಿ ಹಾಗೂ ಹಣ್ಣಿನ ಪ್ರತ್ಯೇಕ ಮಾರುಕಟ್ಟೆ ಮಳಿಗೆಗಳು ತಲೆ ಎತ್ತಲಿವೆ. ಈ ಮಹಾತ್ವಾಕಾಂಕ್ಷೆಯ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ನಗರಸಭೆ ಉತ್ಸುಕವಾಗಿದ್ದು, ಮಾರುಕಟ್ಟೆ ಆವರಣದ ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸುತ್ತಿರುವುದರಿಂದ ಪರ್ಯಾಯ ವ್ಯವಸ್ಥೆಗೆ ವರ್ತಕರು ಸಹಕರಿಸುವಂತೆ ನಗರಸಭೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಪೌರಾಯುಕ್ತರಾದ ಪುಷ್ಪವತಿ ಹಾಗೂ ಇತರ ಅಧಿಕಾರಿಗಳು ಮಾರುಕಟ್ಟೆಗೆ ಭೇಟಿ ನೀಡಿ ಈ ಹಿಂದೆಯೇ ಮಳಿಗೆಗಳನ್ನು ತೆರವುಗೊಳಿಸುವ ಕುರಿತು ವರ್ತಕರ ಮನವೊಲಿಸಿದ್ದರು. ಗಬ್ಬೆದ್ದು ನಾರುತ್ತಿರುವ ಮಾರುಕಟ್ಟೆಯ ಅವ್ಯವಸ್ಥೆಯಿಂದ ಬೇಸತ್ತಿರುವ ವರ್ತಕರು ಕೂಡ ಹೊಸ ವ್ಯವಸ್ಥೆಗೆ ಸಹಕರಿಸಲು ಸಮ್ಮತಿ ಸೂಚಿಸಿದ್ದರು.

ಮಾರುಕಟ್ಟೆ ಅಭಿವೃದ್ಧಿ ತುಂಬಾ ಹಳೆಯ ಯೋಜನೆಯಾಗಿದ್ದರೂ ಕಾಮಗಾರಿಗೆ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಅಡ್ಡಿಯಾಗಿತ್ತು. ಇದೀಗ ಕಾಮಗಾರಿ ಆರಂಭವಾಗಿದ್ದು, ಪೌರಾಯುಕ್ತರ ಮಾರ್ಗದರ್ಶನದಲ್ಲಿ ಅಧಿಕಾರಿಗಳಾದ ರವಿಕುಮಾರ್, ಶಬರಿನಾಥ್, ಸತೀಶ್, ನೀಲಾಧರ ಗುಣಮಟ್ಟದ ಮೇಲೆ ನಿಗಾ ಇಡಲಿದ್ದಾರೆ. ನಗರಸಭಾ ಅಧ್ಯಕ್ಷೆ ಜುಲೆಕಾಬಿ, ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಸದಸ್ಯರುಗಳಾದ ಪಿ.ಡಿ.ಪೊನ್ನಪ್ಪ, ಕೆ.ಎಂ.ಬಿ.ಗಣೇಶ್, ನೆರವಂಡ ಅನಿತಾ ಹಾಗೂ ಶ್ರೀಮತಿ ಬಂಗೇರ ಸ್ಥಳ ಪರಿಶೀಲನೆ ನಡೆಸಿದರು. ಕುಡಿಯುವ ನೀರು, ಮಾಂಸ-ಮೀನಿನ ಸ್ವಚ್ಛತೆಗಾಗಿ ನೀರು, ಸುಸಜ್ಜಿತವಾದ ಶೌಚಾಲಯ, ಚರಂಡಿ, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಕೊಳಚೆ ಪ್ರದೇಶದಂತ್ತಿದ್ದ ಬ್ರಿಟಿಷರ ಕಾಲದ ಮಾರುಕಟ್ಟೆಗೆ ಕೊನೆಗೂ ಕಾಯಕಲ್ಪ ದೊರೆಯುತ್ತಿರುವುದಕ್ಕೆ ವ್ಯಾಪಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Market-3 Market-2

Market-5 Market-4 Market-1

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *