ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಹಲಸಿನ ಬೇರಿನಲ್ಲಿ ಅನಾವರಣಗೊಂಡ ಜೀವ ವೈವಿಧ್ಯ

Posted on: May 30, 2014

ಕುಶಾಲನಗರ :

Kalakruthi-5ಸುಮಾರು ನೂರ ಐವತ್ತು ವರ್ಷಗಳ ಹಿಂದಿನದು ಎನ್ನಲಾದ ಹಲಸಿನ ಮರದ ಬೇರಿನಲ್ಲಿ ನಾನಾ ಜೀವ ವೈವಿಧ್ಯಗಳನ್ನು ಅರಳಿಸಿ ಅದನ್ನು ನೋಡುಗರ ಕಣ್ಣುಗಳಿಗೆ ಆನಂದವನ್ನು ನೀಡಲು ಪ್ರದರ್ಶನಕ್ಕೆ ಇಟ್ಟಿರುವ ಚಿತ್ರಣ ಇಲ್ಲಿಗೆ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಂಕಾರ ಬಡಾವಣೆಯ ಮನೆಯೊಂದರ ಅಂಗಳದಲ್ಲಿ ಮೂಡಿ ಬಂದಿದೆ.
ಬಡಾವಣೆಯ ನಿವಾಸಿ ಎಂ.ಕೆ.ಧನರಾಜ್ ಎಂಬವರೇ ಆ ಮರದ ಬೇರಿಗೆ ಜೀವ ಕೊಟ್ಟವರು. ಈ ಮರದ ಬೇರಿನಲ್ಲಿ ಹಲವು ಪ್ರಾಣಿ ಪಕ್ಷಿಗಳನ್ನು ಬಿಡಿಸಿ ನೋಡುಗರ ಕಣ್ಣುಗಳಿಗೆ ರಸದೌತಣ ನೀಡಿದ ಕಲಾವಿದ ಕೇರಳದ ದುರ್ಗಪ್ಪ ಎಂಬಾತ.

ಈತ ಸತ್ವವಿಲ್ಲದೆ ಭೂಮಿಯೊಳಗೆ ಸೇರಿ ನಿರುಪಯೋಗಿಯಾಗಿ ಇದ್ದ ಬೃಹತ್ ಗಾತ್ರದ ಮರದ ಬೇರುಗಳಿಗೆ ಜೀವ ನೀಡುವುದಾಗಿ ಮನೆ ಮಾಲಿಕ ಧನರಾಜ್ ಎಂಬವರಿಗೆ ಭರವಸೆ ನೀಡಿ ಅದರಂತೆ ಒಂದು ವರ್ಷಗಳ ಕಾಲ ಮರದ ಬೇರುಗಳಲ್ಲಿ ಒಂದೊಂದಾಗಿ ನಾನಾ ರೀತಿಯ ಪ್ರಾಣಿಪಕ್ಷಿಗಳನ್ನು ರಚಿಸಿದ್ದಾನೆ.

ಅದರಲ್ಲಿ ಪ್ರಮುಖವಾಗಿ ಶಿವಲಿಂಗ, ಶಿವಲಿಂಗಕ್ಕೆ ಸುತ್ತವರಿದು ಶಿವಲಿಂಗದ ಮೇಲೆ ತಲೆಯನ್ನಿಟ್ಟು ಮಲಗಿರುವ ಸರ್ಪ, ಅದರ ಪಕ್ಕ ಜಿಂಕೆಯ ಮರಿ, ಆನೆಮರಿ, ಕೋತಿಮರಿ, ಹಂಸಪಕ್ಷಿಗಳು, ಬಸವ, ಬಾತುಕೋಳಿ, ಗರುಡ ಪಕ್ಷಿ, ಪಾರಿವಾಳ, ಗಿಡುಗ, ಕೊಕ್ಕರೆ, ನವಿಲು ಹೀಗೆ ಅನೇಕ ಜೀವಗಳನ್ನು ಇಲ್ಲಿ ಸೃಷ್ಠಿಸಿದ್ದಾನೆ ಆ ಕಲಾವಿದ. ಉಪಯೋಗಕ್ಕೆ ಬಾರದ ಮರದ ಇನ್ನೂ ಕೆಲವು ಬೇರಿನ ರೆಂಬೆಗಳಲ್ಲಿ ಬಳ್ಳಿಗಳು ಹಾಗೂ ಬಂಡೆಗಳನ್ನು ರಚಿಸಿ ನೋಡುಗರಲ್ಲಿ ಅಚ್ಚರಿಯನ್ನು ಮೂಡಿಸಿದ್ದಾನೆ.

Kalakruthi-4ಈ ಸಂದರ್ಭ ಮನೆಯ ಮಾಲಿಕ ಧನರಾಜ್ ಅವರನ್ನು ಮಾತನಾಡಿಸಿದಾಗ, ಆ ಮರ ನನ್ನ ಮುತ್ತಾತ ನೆಟ್ಟು ಬೆಳೆಸಿದ ಮರ. ಅದು ಸಾಕಷ್ಟು ವರ್ಷ ಹಣ್ಣುಗಳನ್ನು ಮನುಜರಿಗೆ, ಪ್ರಾಣಿಪಕ್ಷಿಗಳಿಗೆ ನೀಡಿತ್ತು. ಅಲ್ಲದೆ ಬಿಸಿಲಲ್ಲಿ ಬಳಲಿ ತನ್ನತ್ತ ಬಂದವರಿಗೆ ನೆರಳನ್ನು ನೀಡುವ ಕಾಮಧೇನುವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಆ ಪ್ರದೇಶ ಪಟ್ಟಣವಾಗಿ ಮಾರ್ಪಡುತ್ತಿದ್ದ ಸಂದರ್ಭ ಮರದ ಬೇರು ಇದ್ದ ಸ್ಥಳದಲ್ಲಿ ನಿವೇಶನವನ್ನು ಮಾರ್ಪಡಿಸಲು ಈ ಬೇರನ್ನು ತೆಗೆಯುವ ತೀರ್ಮಾನಕ್ಕೆ ನಾನು ಬಂದೆ.
ಅದನ್ನು ತಿಂಗಳುಗಳ ಕಾಲ ಅಗೆದು ತೆಗೆದು ನೋಡಿದಾಗ ಸುಮಾರು ಒಂದು ಟ್ರಾಕ್ಟರ್ ಹಿಡಿಯುವಷ್ಟು ಬೃಹತ್ ಪ್ರಮಾಣದ ಬೇರು ಕಂಡುಬಂತು.

ಅದಕ್ಕೂ ಮುಂಚೆ ನಾನು ಹೊಸ ಮನೆಯ ಮರಗೆಲಸ ಮಾಡಿಸುತ್ತಿದ್ದ ಸಂದರ್ಭ ಕಾರ್ಪೆಂಟರ್ ಜಗನ್ನಾಥ್ ಎಂಬವರ ಮೂಲಕ ಈ ದುರ್ಗಪ್ಪ ಪರಿಚಿತನಾಗಿದ್ದ. ಆ ಮರದ ಬೇರನ್ನು ಸೌದೆಗೆಂದು ಅದನ್ನು ತಂದು ಮನೆಯಂಗಳದಲ್ಲಿಟ್ಟದ್ದನ್ನು ಕಂಡ ದುರ್ಗಪ್ಪ ಈ ಬೇರಿನಲ್ಲಿ ನಿಮಗೆ ಆಕರ್ಷಕವಾದ ಚಿತ್ರಣವನ್ನು ಮೂಡಿಸುತ್ತೇನೆ ಎಂದು ಹೇಳಿ ಅದಕ್ಕೆ ಒಂದು ವರ್ಷಗಳ ಕಾಲ ಜೀವ ಕೊಟ್ಟ. ಅದಕ್ಕೆ ತಗುಲಿದ ವೆಚ್ಚ ಬರೋಬ್ಬರಿ 2 ಲಕ್ಷ ರೂಗಳು ಎಂದು ಧನರಾಜ್ ವಿವರಿಸಿದರು. ಅಲ್ಲದೆ ಆ ಅಂದಚೆಂದವಾಗಿ ಮೂಡಿಬಂದಿರುವ ಈ ಬೇರಿನ ಕಲಾಕೃತಿಯನ್ನು ಮನೆಯ ಮುಂಬದಿ ಪ್ರತ್ಯೇಕ ಬಯಲು ಕೊಠಡಿಯನ್ನು ನಿರ್ಮಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಅದನ್ನು ನಾವೊಬ್ಬರೆ ನೋಡಿ ಆನಂದಿಸಿದರೆ ಸಾಲದು ಮನೆಗೆ ಬರುವ ಅತಿಥಿಗಳಿಗೆ ಅಕ್ಕಪಕ್ಕದ ನಿವಾಸಿಗಳು ಕೂಡ ನೋಡಿ ಕಣ್ತುಂಬಿಕೊಂಡರೆ ಅವರು ಪಡುವ ಆನಂದ ನಮ್ಮದಾಗಲಿ ಎಂಬ ಸಣ್ಣ ಪ್ರಯತ್ನ ನಮ್ಮದು ಎಂದು ಧನರಾಜ್ ತಾಯಿ ಸುಶೀಲಮ್ಮ ವಿವರಿಸಿದರು.

Kalakruthi-1 Kalakruthi-3 Kalakruthi-2

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *