ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಸುವರ್ಣ ಸಂಭ್ರಮ ಸಮಿತಿಯಿಂದ ವಿವಿಧ ಸ್ಪರ್ಧೆ : ಗಮನ ಸೆಳೆದ ಗಾಳಿಪಟ, ರಂಗೋಲಿ

Posted on: September 28, 2014

ಮಡಿಕೇರಿ :

ಐತಿಹಾಸಿಕ ಮಡಿಕೇರಿ ದಸರಾ ಉತ್ಸವದ ದಸರಾ ಸಮಿತಿ ಸುವರ್ಣ ಸಂಭ್ರಮದಲ್ಲಿರುವ ಕಾರಣ ಸುವರ್ಣ ಸಂಭ್ರಮ ಸಮಿತಿ ಹಿರಿಯರಿಗೆ, ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಿತು. ಹಿರಿಯರ ನಡಿಗೆ, ಮಕ್ಕಳ ಗಾಳಿಪಟ ಮತ್ತು ಮಹಿಳೆಯರ ರಂಗೋಲಿ ಸ್ಪರ್ಧೆಗಳು ಗಮನ ಸೆಳೆದವು. ನಗರದ ಕಾಫಿ ಕೃಪ ಕಟ್ಟಡದ ಬಳಿಯಿಂದ ರಾಜಾಸೀಟಿನವರೆಗೆ ನಡೆದ ಹಿರಿಯರ ನಡಿಗೆ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಹಿರಿಯ ನಾಗರಿಕರು ಅತ್ಯುತ್ಸಾಹದಿಂದ ಪಾಲ್ಗೊಂಡರು.

ಸುವರ್ಣ ಸಂಭ್ರಮ ಸಮಿತಿಯ ಪ್ರಮುಖರಾದ ಎಂ.ಬಿ.ದೇವಯ್ಯ, ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಂ. ಗಣೇಶ್ ಅವರು ನಡಿಗೆ ಸ್ಪರ್ಧೆಗೆ ಚಾಲನೆ ನೀಡಿದರು. ಈ ಸಂದರ್ಭ ನಗರಸಭಾ ಅಧ್ಯಕ್ಷೆ ಜುಲೇಕಾಬಿ, ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಪೌರಾಯುಕ್ತೆ ಪುಷ್ಪಾವತಿ ಉಪಸ್ಥಿತರಿದ್ದರು.

ಮಕ್ಕಳ ಗಾಳಿಪಟ ::::
ನಗರದ ಎಪಿಎಂಸಿ ಮೈದಾನದಲ್ಲಿ ನಡೆದ ಗಾಳಿಪಟ ಸ್ಪರ್ಧೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡ ಮಕ್ಕಳು ವರ್ಣರಂಜಿತ ಗಾಳಿಪಟವನ್ನು ಹಾರಿಸಿ ಸಂಭ್ರಮ ಪಟ್ಟರು.
ಸುವರ್ಣ ಸಂಭ್ರಮ ಸಮಿತಿಯ ಸಂಚಾಲಕ ಮುನೀರ್ ಅಹಮ್ಮದ್, ಎಂ.ಬಿ.ದೇವಯ್ಯ, ಜಿ.ಚಿದ್ವಿಲಾಸ್, ನಗರಸಭಾ ಅಧ್ಯಕ್ಷೆ ಜುಲೇಕಾಬಿ, ಪೌರಾಯುಕ್ತರಾದ ಪುಷ್ಪಾವತಿ, ನಗರಸಭಾ ಸದಸ್ಯ ಉನ್ನಿ ಕೃಷ್ಣನ್ ಹಾಜರಿದ್ದರು.
ರಂಗು ರಂಗಿನ ರಂಗೋಲಿ :::
ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ನಡೆದ ಹೂವಿನ ರಂಗೋಲಿ, ಎಳೆ ರಂಗೋಲಿ, ಚುಕ್ಕಿ ರಂಗೋಲಿ ಸ್ಪರ್ಧೆಯಲ್ಲಿ ಮೂವತ್ತಕ್ಕೂ ಹೆಚ್ಚಿನ ಮಹಿಳೆಯರು ಪಾಲ್ಗೊಂಡು ಕಲಾ ಕೈಚಳಕದ ಮೂಲಕ ರಂಗು ರಂಗಿನ ರಂಗೋಲಿಗೆ ಜೀವ ತುಂಬಿದರು.

rang-4 rang rang-1 rang-2 ZA7 ZA ZA1 ZA2 ZA3 ZA4 ZA5 ZA6

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *