ಬ್ರೇಕಿಂಗ್ ನ್ಯೂಸ್
ಜಿಲ್ಲೆಯಲ್ಲಿ ಶತಶತಮಾನಗಳಿಂದ ನೆಲೆ ನಿಂತಿರುವ ಬಲಿಜ ಸಮುದಾಯ ಸದೃಢರಾಗಬೇಕಿದೆ ಎಂ.ಆರ್.ಸೀತಾರಾಮ್ , ದುಬಾರೆಯಲ್ಲಿ ಮಳೆಗಾಲದ ಮೂರು ತಿಂಗಳು ಮಾತ್ರ ರಾಫ್ಟಿಂಗ್ ಪ್ರವಾಸಿ ಅತಿರೇಕಕ್ಕೆ ಕಡಿವಾಣ ಹಾಕಲು ತಂತ್ರ , ವಿರಾಜಪೇಟೆ ನೂತನ ತಾಲ್ಲೂಕು ಆಡಳಿತ ಭವನ ಉದ್ಘಾಟನೆ , ಸಂಚಾರಿ ಡಿಜಿಟಲ್ ತಾರಾಲಯಕ್ಕೆ ಎಂ.ಆರ್.ಸೀತಾರಾಂ ಚಾಲನೆ , ದುಬಾರೆ ಪ್ರವಸಿಗನ ಕೊಲೆ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಎಸ್‍ಡಿಪಿಐ ಆಗ್ರಹ , ಕೊಡವ ಸ್ಟೂಡೆಂಟ್ ಅಸೋಸಿಯೇಶನ್ 18 ನೇ ವಾರ್ಷಿಕ ಸಮಾರಂಭ , ಎಸ್ಸೆಸ್ಸೆಫ್ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಾನ್ಫಿಡೆಂಟ್ ಟೆಸ್ಟ್ , ಮೋದಿ ವಿರುದ್ಧ ಪಕೋಡ ತಯಾರಿಸಿ ಪ್ರತಿಭಟನೆ , ರೈತ ಮುಖಂಡ, ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಇನ್ನಿಲ್ಲ , ಸ್ವ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ಅದ್ವಿತೀಯ ಶಕ್ತಿಯನ್ನು ಅರಿತುಕೊಳ್ಳುವ ಅಗತ್ಯವಿದೆ ಶ್ರೀನಿವಾಸ್ ಅರ್ಕ ,

ಅಬುದಾಬಿಯಲ್ಲಿ ಕೊಡಗಿನ ಬಾಲಕಿ ದುರ್ಮರಣ

Posted on: October 8, 2014

ಮಡಿಕೇರಿ :

ಕೊಡಗು ಜಿಲ್ಲೆಯ ಮಡಿಕೇರಿ ಮೂಲದ ಪುಟ್ಟ ಬಾಲಕಿಯೊಬ್ಬಳು ಹವಾನಿಯಂತ್ರಿತ ಶಾಲಾ ವಾಹನದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಅಬುದಾಬಿಯಲ್ಲಿ ನಡೆದಿದೆ. ಮಡಿಕೇರಿಯ ಆಜಾದ್ ನಗರದ ನಿವಾಸಿ ಜೆ.ಎಂ.ನಾಸಿರ್ ಅಹಮ್ಮದ್ ಹಾಗೂ ನಬೀಲಾ ದಂಪತಿಗಳ ಪುತ್ರಿ ಎಲ್ಕೆಜಿ ವಿದ್ಯಾರ್ಥಿನಿ ಆಲ(4) ಮೃತ ದುರ್ದೈವಿ ಜೆ.ಎಂ.ನಾಸಿರ್ ಅಹಮ್ಮದ್ ಅಬುದಾಬಿಯಲ್ಲಿ ಉದ್ಯೋಗದಲ್ಲಿದ್ದ ಕಾರಣ ಆಲ ಕೂಡ ಅದೇ ಪ್ರದೇಶದಲ್ಲಿ ಎಲ್ಕೆಜಿ ವ್ಯಾಸಾಂಗ ಮಾಡುತ್ತಿದ್ದಳು.

ಶಾಲಾ ವಾಹನದಲ್ಲಿ ಶಾಲೆಗೆ ತೆರಳಿದ ಆಲ ವಾಹನದಲ್ಲೇ ನಿದ್ದೆಗೆ ಜಾರಿದ್ದೇ ಈ ಘಟನೆಗೆ ಕಾರಣವಾಗಿದೆ. ಆಲ ವಾಹನದಿಂದ ಕೆಳಗೆ ಇಳಿದಿರಬಹುದೆಂದು ಭಾವಿಸಿದ ಚಾಲಕ ವಾಹನದ ಬಾಗಿಲನ್ನು ಭದ್ರಪಡಿಸಿದ್ದರಿಂದ ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಮೃತ ದೇಹದ ಅಂತ್ಯಕ್ರಿಯೆ ಅಬುದಾಬಿಯಲ್ಲೇ ನಡೆದಿದೆ. ರಜೆಯಲ್ಲಿ ಮಡಿಕೇರಿಗೆ ಆಗಮಿಸಿದ್ದ ಜೆ.ಎಂ.ನಾಸಿರ್ ಅಹಮ್ಮದ್ ಕುಟುಂಬ 4 ದಿನಗಳ ಹಿಂದೆಯಷ್ಟೆ ಅಬುದಾಬಿಗೆ ಮರಳಿತ್ತು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *