ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಪಿಕ್‌ಅಪ್ ಜೀಪ್ ಡಿಕ್ಕಿ : ಬಾಲಕಿ ಸಾವು

Posted on: October 7, 2014

ಮೂರ್ನಾಡು :

ಪಿಕ್‌ಅಪ್ ಜೀಪ್ ಡಿಕ್ಕಿ ಹೊಡೆದು ಬಾಲಕಿ ದಾರುಣ ಸಾವನ್ನಪ್ಪಿದ ಘಟನೆ ಎಂ. ಬಾಡಗ ಗ್ರಾಮದಲ್ಲಿ ಸಂಭವಿಸಿದೆ. ಅಸ್ಸಾಂ ಮೂಲದ ಕೂಲಿ ಕಾರ್ಮಿಕ ಮಹಮ್ಮದ್ ಹನೀಪ್ ಹಾಗೂ ರಾಬಿಯಾ ದಂಪತಿಗಳ ಪುತ್ರಿ ರಿಯಾ(2) ದಾರುಣ ಸಾವನ್ನಪ್ಪಿದ ಬಾಲಕಿ. ಬಾಡಗ ಗ್ರಾಮದಲ್ಲಿರುವ ಅರುಣಾಚಲಂ ಎಂಬುವವರ ಕಾವೇರಿ ಎಸ್ಟೇಟ್‌ನಲ್ಲಿ ಪಿಕ್‌ಅಪ್ ವಾಹನದಲ್ಲಿ ಸೌದೆ ಸಾಗಿಸುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.

ಮೂರ್ನಾಡಿನ ಚಂಪವತಿ ಅವರಿಗೆ ಸೇರಿದ ಪಿಕ್‌ಅಪ್ (ಕೆಎ 12 ಎ 7210) ವಾಹನದಲ್ಲಿ ತೋಟದಲ್ಲಿದ್ದ ಸೌದೆ ತುಂಬಿಸಿಕೊಂಡು ಸಾಗುತ್ತಿದ್ದ ವೇಳೆಯಲ್ಲಿ ವಾಹನ ಹಿಂಬದಿ ಚಲಿಸಿದ ಸಂದರ್ಭ ಹಿಂಬದಿಯಲ್ಲಿದ್ದ ಬಾಲಕಿಗೆ ಡಿಕ್ಕಿ ಹೊಡೆದಿದೆ. ಬಾಲಕಿ ನೆಲಕ್ಕೆ ಬಿದ್ದ ಪರಿಣಾಮ ವಾಹನದ ಹಿಂಬದಿ ಚಕ್ರ ತಲೆಯ ಭಾಗಕ್ಕೆ ತಗುಲಿ ಗಾಯಗೊಂಡು ರಕ್ತಸ್ರಾವವಾಗಿದೆ. ಬಳಿಕ ಮೂರ್ನಾಡು ಸರಕಾರಿ ಆಸ್ಪತ್ರೆಗೆ ಬಾಲಕಿಯನ್ನು ಸಾಗಿಸುತ್ತಿರುವ ವೇಳೆಯಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ.

ಘಟನೆಯಿಂದ ರೊಚ್ಚಿಗೆದ್ದ ಕೂಲಿ ಕಾರ್ಮಿಕರು ಪಿಕ್‌ಅಪ್ ಚಾಲಕ ಕಣ್ಣನ್ ಅವರಿಗೆ ಥಳಿಸಿ ವಾಹನಕ್ಕೆ ಹಾನಿ ಉಂಟುಮಾಡಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಕರೀಂ ರಾವತರ್, ಉಪನಿರೀಕ್ಷಕ ಸುಬ್ರಮಣಿ ಸ್ಥಳಕ್ಕೆ ಭೇಟಿ ನೀಡಿ ಚಾಲಕನ ವಿರುದ್ದ ಮೊಕದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Baby

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *