ರಾಜ್ಯ ಮಟ್ಟದ ಹಿಪ್-ಹಾಪ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಮೋಕ್ಷ್ ಕೀರ್ತಿಗೆ ಚಿನ್ನದ ಪದಕ

Posted on: October 25, 2014

ಸೋಮವಾರಪೇಟೆ :

ಮೈಸೂರಿನ ಐಡಿಯಲ್ ಜಾವ ಸಂಸ್ಥೆಯ ವತಿಯಿಂದ ಮೈಸೂರು ರೋಟರಿ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಹಿಪ್-ಹಾಪ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಸೋಮವಾರಪೇಟೆ 5 ವರ್ಷದ ಬಾಲಕ ಮೋಕ್ಷ್ ಕೀರ್ತಿ ಚಿನ್ನದ ಪದಕ ಗಳಿಸಿದ್ದಾನೆ.

ನ.1ರಿಂದ ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆಯುವ ಹಿಪ್-ಹಾಪ್ ಡ್ಯಾನ್ಸ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾನೆ. ರಾಜ್ಯ ಸ್ಪೋರ್ಟ್ಸ್ ಯುರೋಬಿಕ್ಸ್ ಮತ್ತು ಫಿಟ್‌ನೆಸ್ ಅಸೋಸಿಯೇಶನ್ ರವಿ.ಸಿ. ಅವರಿಂದ ತರಬೇತಿ ಪಡೆಯುತ್ತಿದ್ದಾನೆ. ಮೋಕ್ಷ್ ಕೀರ್ತಿ ನೃತ್ಯದಲ್ಲಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ್ದು, ಸೋಮವಾರಪೇಟೆ ರೇಂಜರ್ ಬ್ಲಾಕ್ ನಿವಾಸಿ ಕೀರ್ತಿಕುಮಾರ್, ಶಮಿತ ಅವರ ಪುತ್ರ.

Dance-1 Dance-2 Dance-3

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *