ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಕೇರಳದ ಹೊಸ ವರ್ಷ ವಿಶು

Posted on: April 15, 2015

ವಿಶು ಕೇರಳದಲ್ಲಿ ಆಚರಿಸಲಾಗುವ ಜನಪ್ರಿಯ ಹಬ್ಬ. ಕೇರಳದವರಿಗೆ ವಿಶು ಎಂಬುದು ಹೊಸ ವರ್ಷದ ಆರಂಭದ ದಿನ. ಈ ವಿಶು ಹಬ್ಬದ ದಿನದಂದು ಕೇರಳದ ಜನರು ಹಣವನ್ನು, ಚಿಕ್ಕ ಮಕ್ಕಳಿಗೆ ಮತ್ತು ತಮಗೆ ಕೈಲಾದದ್ದನ್ನು ಇತರರಿಗೆ ನೀಡುವ ಸಂಪ್ರದಾಯವೂ ಇದೆ.

Vishu-1 Vishu-2

ಮುಂದಿನ ವರ್ಷದಲ್ಲಿ ಶುಭ ಮತ್ತು ಅದೃಷ್ಟವನ್ನು ತರುವುದೆಂಬ ಭರವಸೆ ಮತ್ತು ವಿಶ್ವಾಸವನ್ನು ಮೂಡಿಸುವ ‘ವಿಶುಕ್ಕನಿ’ಯನ್ನು ಜನತೆ ಮುಂಜಾನೆ ಬೇಗನೆ ಎದ್ದು ವೀಕ್ಷಿಸುವುದು ಸಂಪ್ರದಾಯವಾಗಿದೆ. ವಿಶು ದಿನಾಚರಣೆಯ ಸಾಂಪ್ರದಾಯದಂತೆ ಕೇರಳಿಗರು ಹಣ್ಣು, ತರಕಾರಿ, ಹೂವು, ಚಿನ್ನ ಮತ್ತು ಹೊಸ ಬಟ್ಟೆಗಳನ್ನು ಒಂದೆಡೆ ಇರಿಸಿ ಬೆಳಗ್ಗೆ ಎದ್ದ ಮೊದಲು ವೀಕ್ಷಿಸುವುದಾಗಿದೆ. ವಿಶು ಆಚರಣೆಯ ದಿನ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಯನ್ನು ಆರಂಭಿಸುವ ದಿನವೂ ಆಗಿದೆ.

ಸೌರಮಾನ ಪದ್ಧತಿಯ ಕಾಲಗಣನೆ ಅಳವಡಿಸಿಕೊಂಡಿರುವ ರಾಜ್ಯದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನ ಈ ಹಬ್ಬವನ್ನು “ವಿಶು” ಹಬ್ಬವನ್ನಾಗಿ ಆಚರಿಸುತ್ತಾರೆ. ಇದು ಸೌರಮಾನ ಯುಗಾದಿ. “ತುಳುವರ ಬಿಸು”. ಕೇರಳ ಅಲ್ಲದೆ, ಪಂಜಾಬ್ ಹಾಗೂ ಉತ್ತರ ಭಾರತದ ಹಲವೆಡೆ ವಿಶು ಹಬ್ಬದ ಆಚರಣೆ ಜಾರಿಯಲ್ಲಿದೆ. ತಮಿಳರಿಗೆ ಇದು ಬೈಸಾಕಿ ಅಥವಾ ಪುಥಾಂದು. ಪಂಜಾಬಿಗಳಲ್ಲಿ ಸಾಂಪ್ರದಾಯಿಕ ಬಾಂಗ್ಡಾ ನೃತ್ಯ ಬೈಸಾಕಿಯ ಪ್ರಮುಖ ಆಕರ್ಷಣೆ. ಸಿಖ್ಖರ ಸಹೋದರ ಪಂಥ ಖಾಲ್ಸಾ ಅನುಯಾಯಿಗಳು ಈ ದಿನವನ್ನು ಧರ್ಮ ಸಂಸ್ಥಾಪನಾ ದಿನವನ್ನಾಗಿ ಆಚರಿಸುತ್ತಾರೆ. ಗುರು ಗೋವಿಂದ ಸಿಂಗ್ ಈ ದಿನವೇ ಖಾಲ್ಸಾ ಪಂಥ ಹುಟ್ಟುಹಾಕಿದರೆಂಬುದು ಪ್ರತೀತಿ. ಬಂಗಾಳಿಗಳು ಈ ದಿನ ಲಕ್ಷ್ಮೀ ದೇವಿಯ ವಿಶೇಷ ಆರಾಧನೆ ಕೈಗೊಳ್ಳುತ್ತಾರೆ. ವ್ಯಾಪಾರಿಗಳು ಈ ದಿನದಿಂದ ಹೊಸ ಲೆಕ್ಕಪಟ್ಟಿ ಬರೆಯುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ನೆರೆಯ ಬಾಂಗ್ಲಾದೇಶದಲ್ಲಿ ಈ ದಿನ ರಾಷ್ಟ್ರೀಯ ರಜಾ ದಿನ.

Vishu-Kani

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *