ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಜೀವನದ ಅಮೂಲ್ಯ ಅರ್ಥವನ್ನು ವಿಶ್ವಕ್ಕೆ ಸಾರಿದ ವಿಶ್ವಗುರು ಬಸವಣ್ಣ

Posted on: April 21, 2015

11‘ಕಾಯಕವೆ ಕೈಲಾಸ’ ‘ಧಯವೇ ಧರ್ಮದ ಮೂಲವಯ್ಯ’, ‘ಆಚಾರವೇ ಸ್ವರ್ಗ ಅನಾಚಾರವೇ ನರಕ’, ‘ನುಡಿದಂತೆ ನಡೆ, ‘ಅದೇ ಜನ್ಮ ಕಡೆ’, ಹೀಗೆ ತಮ್ಮ ಅನುಭವದಿಂದ ಕಂಡುಂಡ ನುಡಿ ಮುತ್ತುಗಳಿಂದ ವಚನಗಳನ್ನು ರಚಿಸಿ ಆ ಮೂಲಕ ವಿಶ್ವಗುರು ವೆನಿಸಿದರು. ಆ ವಚನಗಳೇ ಇಂದು ವಿಶ್ವಕ್ಕೆ ಬೆಳಕನ್ನು ಕೊಡುವ ಜ್ಞಾನ ಜ್ಯೋತಿಗಳಾಗಿ ಅವರನ್ನು ಜಗಜ್ಯೋತಿಯನ್ನಾಗಿ ಪ್ರಖ್ಯಾತಿಗೊಳಿಸಿವೆ.

12ನೇ ಶತಮಾನದಲ್ಲಿ ಬ್ರಾಹ್ಮಣನಾಗಿ ಜನಿಸಿ ವೀರಶೈವ ದೀಕ್ಷೆ ಪಡೆದು ಕಾಯಕ ದಾಸೋಹಗಳ ಮೂಲಕ ವೀರಶೈವ ಧರ್ಮವನ್ನು ವಿಶ್ವ ಧರ್ಮದ ಉತ್ತುಂಗ ಶ್ರೇಣಿಗೇರಿಸಿದ, ಮಹಾನುಭಾವಿ ಬಸವಣ್ಣನವರು ಶರಣ ಸಮೂಹದ ಕೇಂದ್ರ ಬಿಂದುವೆನಿಸಿದ ಮಹಾನ್ ಮಾನವಾತಾವಾದಿ ಬಸವಣ್ಣನವರು ಚಿಂತನಾಶೀಲರು! ಮೂಡನಂಬಿಕೆ ಅರ್ಥಹೀನ ಗೊಡ್ಡು ಸಂಪ್ರದಾಯಗಳ ನಿರ್ಮೂಲನೆಗಾಗಿ ಶ್ರಮಿಸಿದವರು, ಅಸಹಾಯಕರ, ದೀನ ದಲಿತರ ಉದ್ಧಾರಕ್ಕಾಗಿ ತಮ್ಮ ತನು ಮನ ಧನವನ್ನು ಅರ್ಪಿಸಿದ ಮಹಾನ್ ತ್ಯಾಗಿಗಳು.

ಮಾದರಸ, ಮಾದಲಾಂಬಿಕೆ ಎಂಬ ಬ್ರಾಹ್ಮಣ ದಂಪತಿಗಳ ಮಗನಾಗಿ ಇಂಗಳೇಶ್ವರದಲ್ಲಿ ಜನಿಸಿದ ಬಸವಣ್ಣನವರು ಬಾಲ್ಯದಲ್ಲಿಯೆ ಉಪನಯನವನ್ನು ದಿಕ್ಕರಿಸಿ ಅಕ್ಕ ನಾಗಲಾಂಬಿಕೆಯೊಂದಿಗೆ ಕೂಡಲ ಸಂಗಮಕ್ಕೆ ಒಂದು ಜಾತಬೇದ ಮುನಿಗಳ ಬಳಿ ವಿದ್ಯಾಭ್ಯಾಸ ಮುಗಿಸಿ ಬಿಜ್ಜಳ ಜನ ಆಸ್ಥಾನದಲ್ಲಿ ಮಂತ್ರಿಯಾಗಿ ಗಂಗಾಬಿಕೆ ಮತ್ತು ನಿಲಾಂಬಿಕೆಯರನ್ನು ಮದುವೆಯಾಗಿ ಬಾಲ ಸಂಗಯ್ಯನೆಂಬ ಪುತ್ರನನ್ನು ಪಡೆದು ಆರ್ಥಿಕ, ಸಾಮಾಜಿಕ, ಧಾರ್ಮಿಕ, ನೈತಿಕ, ಸಾಹಿತ್ಯ ಕ್ರಾಂತಿಗಳ ಮೂಲಕ ಜಗತ್ಪ್ರಸಿದ್ಧರಾದರು.

ಈ ಎಲ್ಲಾ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಲಂಡನ್ನಿನ ಕೇಂಬ್ರಿಡ್ಜ್ ಯೂನಿರ್ವಸಿಟಿ 1902 ರಲ್ಲಿ ಜಗಜ್ಯೋತಿ ಎಂಬ ಬಿರುದುಕೊಟ್ಟು ಗೌರವಿಸಿದೆ. ಕೂಡಲ ಸಂಗಮದೇವ ಎಂಬ ಅಂಕಿತನಾಮದೊಂದಿಗೆ ಜನಸಾಮಾನ್ಯರ ಸರಳ ಆಡುಭಾಷೆಯ ಮೂಲಕ ವಚನಗಳನ್ನು ರಚಿಸಿ ಜೀವನದ ಅಮೂಲ್ಯ ಅರ್ಥ ಆಳವನ್ನು ವಿಶ್ವಕ್ಕೆ ತಿಳಿಸಿದ ವಿಶ್ವಗುರು ಜನತೆಯ ಕಲ್ಯಾಣಕ್ಕಾಗಿ ಅನುಭವ ಮಂಟಪ ಸ್ಥಾಪಿಸಿ, ಶಿವಾನುಭವ ಜ್ಞಾನಾನುಭವ, ದಿವ್ಯಾನುಭವ, ಶಿವಾನುಭವ ನಿತ್ಯವೂ ನಡೆಯುತ್ತಿತ್ತು.

12ಕೇವಲ ಇವರು ತಮ್ಮ ಸಾಹಿತ್ಯ ನುಡಿಗಳಲ್ಲಿ ಆಚಾರ, ವಿಚಾರಗಳನ್ನು ಹೇಳಲಿಲ್ಲ ಉಪದೇಶಿಸಲಿಲ್ಲ ಸ್ವಂತ ತಮ್ಮ ಜೀವನದಲ್ಲಿ ಅಳವಡಿಸಿ ಪಾಲಿಸಿ ನುಡಿದಂತೆ ನಡೆದು ಅನುಷ್ಠಾನಕ್ಕೆ ತಂದು ಸನ್ಮಾರ್ಗದ ದಾರಿ ತೋರಿಸಕೊಟ್ಟ ದೇವಿ ದೈವಿ ಪುರುಷ ಬಸವಣ್ಣನವರು ವಿಶ್ವ ಪ್ರೇಮಿ ಎನಿಸಿದರು.

ಸಾಹಿತ್ಯ ಕ್ರಾಂತಿ :::
ಜ್ಞಾನ ಭಂಡಾರಿ ಬಸವಣ್ಣನವರು ಸರಳ ಭಾಷೆಯ ಮೂಲಕ ವಚನಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆ ವಚನಗಳ ಮೂಲಕ ಜನರನ್ನು ಕತ್ತಲಿನಿಂದ ಬೆಳಕಿನಡೆಗೆ ಅನ್ಯಾಯದಿಂದ ನ್ಯಾಯದೆಡೆಗೆ ಬೆಳಕು ಹರಿಸಿದ ಜ್ಞಾನಿಗಳು ಕನ್ನಡ ಭಾಷೆ, ಸಂಸ್ಕೃತದ ಮನೆಯಲ್ಲಿ ತನ್ನತನವನ್ನು ಕಳೆದುಕೊಂಡಿದ್ದ ಕಾಲದಲ್ಲಿ ವಚನಗಳ ಮೂಲಕ ಸಾಹಿತ್ಯ ಕ್ರಾಂತ್ರಿಗೆ ಮುಂದಾದರು. ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಹೊಸ ಬೆಳಕು ಹರಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿ ಸಾಹಿತ್ಯ ಕ್ಷೇತ್ರದಲ್ಲಿ ಚಿರಸ್ಥಾಯಿಯಾದರು. ಈ ಮೂಲಕ ವಚನಗಳು ವೀರಶೈವಧರ್ಮಕ್ಕೆ, ವಿಶ್ವಕ್ಕೆ, ಸಮಾಜಕ್ಕೆ ಹಿಡಿದ ಕೈಗನ್ನಡಿಯಂತಾಯಿತು. ವಚನಗಳಲ್ಲೆ ಜೀವನದ ಸಾರಾಂಶವನ್ನು ಸರಳವಾಗಿ ಹೇಳಿ ಅದರಂತೆ ನಡೆ ನುಡಿಗಳೊಂದಾಗಿ ಬಾಳಿ ತೋರಿಸಿದರು. ವಚನ ಸಾಹಿತ್ಯದ ಮೂಲಕ ವಿಶ್ವ ವಿಖ್ಯಾತರಾದ ಬಸವಣ್ಣನವರು ಸಾಹಿತ್ಯ ಕ್ಷೇತ್ರ ಕಂಡ ಮಹಾನ್ ಪುರುಷ ಜ್ಞಾನ ಭಂಡಾರಿ.

2ಆರ್ಥಿಕ ಕ್ರಾಂತಿ :::
‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೆ ಲೇಸು’ ‘ಕಾಯಕವೇ ಕೈಲಾಸ’ ಎಂಬ ವಚನದ ಸಾಲುಗಳಿಗೆ ಜೀವ ತುಂಬಿ ಪ್ರತಿಯೊಬ್ಬ ವ್ಯಕ್ತಿಯು ದುಡಿಮೆಯಿಂದ ಬದುಕಬೇಕು, ಸೋಮಾರಿಗಳಾಗಬಾರದು. ನಿರುದ್ಯೋಗಿಯಾಗಬಾರದು. ಇದುವೆ ಆರ್ಥಿಕ ಕ್ರಾಂತಿಗೆ ಕಾರಣ ಬಡತನದ ನಿರ್ಮೂಲನೆ ಮಾಡಲು ಸಾಧ್ಯ ಎಂಬ ಸತ್ಯತೆಯನ್ನು ೧೨ನೇ ಶತಮಾನದಲ್ಲೇ ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ. ಪ್ರತಿಯೊಬ್ಬ ವ್ಯಕ್ತಿಗೂ ಒಂದು ದುಡಿಮೆ ಇರಬೇಕು. ಆ ದುಡಿಮೆಯಿಂದಲೇ ದೇವರನ್ನು ಕಾಣಬೇಕು ಎಂಬ ಅಮೂಲ್ಯ ವಿಚಾರವನ್ನು ಜನಗಳಿಗೆ ಹೇಳಿದ ಮಹಾಪುರುಷ ಬಸವಣ್ಣ.

ಧಾರ್ಮಿಕ ಕ್ರಾಂತಿ :::
12ನೇ ಶತಮಾನದಲ್ಲಿ ವೈಷ್ಣವ ಧರ್ಮದ ಪ್ರಾಬಲ್ಯ ಪ್ರಬಲವಾದಾಗ ಬಸವಣ್ಣ ಸರ್ವಧರ್ಮಗಳಿಗೂ ಸಮಾನವಾದ ದೇಶ ಕಾಲ, ಪರಿಸರಕ್ಕೆ ಹೊಂದಿಕೊಳ್ಳುವಂತಹ ತತ್ವಗಳನ್ನು ಏಕೀಕರಿಸಿ ಶೈವದರ್ಮದ ಎಲ್ಲಾ ಪ್ರಭೇದಗಳನ್ನು ಒಗ್ಗೂಡಿಸಿ ವೀರಶೈವ ಧರ್ಮವನ್ನು ಸ್ಥಾಪಿಸಿ, ಮೇಲು ಕೀಳೆಂಬ ಬೇಧವಿಲ್ಲ ಎಲ್ಲರೂ ಸಮಾನರು ನಮ್ಮ ಸಮಾಜ ಜಾತ್ಯಾತೀತ ಸಮಾಜವಾಗಬೇಕೆಂದು, ಶ್ರಮವಹಿಸಿದರು. ಎಲ್ಲಾ ಧರ್ಮಿಗಳು ತಮ್ಮದೆ ಆದ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಆದರೆ ಬಸವಣ್ಣನವರು ಜಾತಿ ಮತ, ಪಂಗಡ, ಪಕ್ಷ ಸ್ತ್ರೀ, ಪುರುಷ ಎಂಬ ಬೇದ ಮಾಡದೆ ಸರ್ವರಿಗೂ ಸಮಬಾಳು, ಧಾರ್ಮಿಕ ಸ್ವಾತಂತ್ರ್ಯ ಸಿಗಬೇಕೆಂದು ವೀರಶೈವ ಧರ್ಮದ ಮೂಲಕ ಸಾರಿ ಹೇಳಿದರು. ಆದರೆ ಇಂದಿಗೂ ಜಾತ್ಯಾತೀತ ಸಮಾಜ ಕನಸಾಗಿಯ ಉಳಿದಿರುವುದು ವಿಪರ್ಯಾಸವೆ ಸರಿ.

ಸಾಮಾಜಿಕ ಕ್ರಾಂತಿ :::
ಸಾಮಾಜಿಕ ಕ್ರಾಂತಿಗೆ ಇವರ ಕೊಡುಗೆ ಅತ್ಯಮೂಲ್ಯವಾದದ್ದು ಗೊಡ್ಡು ಸಂಪ್ರದಾಯ, ಮೂಡನಂಬಿಕೆ, ಅರ್ಥವಿಲ್ಲದ ಆಚಾರ ವಿಚಾರಗಳು, ಆಳವಾಗಿ ಬೇರುಬಿಟ್ಟು ಸಮಾಜದ ಆರೋಗ್ಯವನ್ನು ಹಾಳು ಮಾಡುತ್ತಿದ್ದ ಕಾಲದಲ್ಲಿ ಅದನ್ನು ತೊಡೆದುಹಾಕಲು ಸಾಹಸವನ್ನು ಮಾಡಿದ್ದಾರೆ. ಧರ್ಮ ಧರ್ಮಗಳ ಹೆಸರಿನಲ್ಲಿ ಕಚ್ಚಾಡಬೇಡ, ಮಾನವ ಧರ್ಮ ಶ್ರೇಷ್ಠವಾದದ್ದು, ಜಗಳ ಕಚ್ಚಾಟದ ಮೂಲಕ ಧರ್ಮದ ಹೆಸರಿನಲ್ಲಿ ಸಮಾಜವನ್ನು ಹಾಳು ಮಾಡಬಾರದು ಎಂಬ ಸತ್ಯವನ್ನು ಹೇಳಿದರು. ‘ಹೊಲಸು ತಿನ್ನುವನೇ ಹೊಲೆಯ’ ಇಬ್ಬರಾಡುವ ಗುಟ್ಟು ಕದ್ದು ಕೇಳುವವ ಹೊಲೆಯ’ ಎಂಬ ವಚನದ ಮೂಲಕ ಎಲ್ಲರೂ ಸಮಾನರು, ಮೇಲುಜಾತಿ, ಕೀಳುಜಾತಿ ಎಂಬುದಿಲ್ಲ ಇದೆಲ್ಲ ನಾವೆ ಮಾಡಿಕೊಂಡಿರುವ ಅರ್ಥಹೀನ ಪದ್ಧತಿ ಎಂದು ದಲಿತರ ಮನೆಗೆ ಹೋಗಿ ಊಟ ಮಾಡಿ ತಾವೇ ಇಂಥ ತಪ್ಪು ಕಲ್ಪನೆಯನ್ನು ತಿದ್ದಲು ಮುಂದಾದರು. ಅಷ್ಟೇ ಅಲ್ಲದೆ ಬ್ರಾಹ್ಮಣ ಹಾಗೂ ದಲಿತರ ಹುಡುಗ ಹುಡುಗಿಯರಿಗೆ ಮದುವೆ ಮಾಡಿಸಿದರು. ದಲಿತರಿಗೆ ಲಿಂಗದಾರಣೆ ಮಾಡಿ ಜಾತಿ, ಬೇಧಕ್ಕೆ ಕಡಿವಾಣ ಹಾಕಿದರು. ಮಡಿ, ಮೂಲಿಗೆ ಶಕುನ, ಇವುಗಳಿಂದ ಸಮಾಜಕ್ಕೆ ಹಾನಿ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯ ಸಮಾಜಿಕ ಬೆಳವಣಿಗೆ ಎಂದು ಸಾರಿದ ದೀಮಂತ ವ್ಯಕ್ತಿ ಬಸವಣ್ಣನವರು.

1ನೈತಿಕ ಕ್ರಾಂತಿ :::
ಸ್ತ್ರೀ ಅಬಲೆ ಎಂದು ಹೇಳುತ್ತ ಹೆಣ್ಣಿನ ಬಗ್ಗೆ ಒಂದು ಹುಸಿ ಸಿದ್ಧಾಂತ ಹುಟ್ಟು ಹಾಕಿದ ಪುರುಷರ ಚರಿತ್ರೆಯನ್ನು ಪ್ರಶ್ನಿಸುವ ಧೈರ್ಯ ಮಾಡಿದವರು ಬಸವಣ್ಣನವರು ಸ್ತ್ರೀಯರಿಗೆ ಸಮಬಾಳು, ಸ್ತ್ರೀ ಶೋಷಣೆಯ ವಿರುದ್ಧ ಹೋರಾಡಿದವರು, ಸ್ತ್ರೀಕುಲ ಎಂದೆಂದು ಸ್ಮರಿಸುವ ಮಹಾವ್ಯಕ್ತಿ ಮಹಾತ್ಯಾಗಿಗಳು, ನೈತಿಕತೆಯ ನೆಲೆಗಟ್ಟಿನಲ್ಲಿ ಸ್ತ್ರೀ ತನ್ನ ಸ್ಥಾನವನ್ನು ಕಳೆದುಕೊಂಡು ಶೋಷಿತಳಾಗುತ್ತಿರುವುದನ್ನು ಗಮನಿಸಿದ ಸ್ತ್ರೀಯರಿಗೆ ಧ್ವನಿಯಾಗಿ ಸಮಾಜದಲ್ಲಿ ಸ್ತ್ರೀ ಸಮಾನತೆಗಾಗಿ ಹೋರಾಡಿದರು. ಅಸಮಾನತೆ, ಅಶಾಂತಿ ಧರ್ಮದ ಕಠಿಣತೆ ಇವುಗಳ ತಾಕಲಾಟದಲ್ಲಿ ಸಂದಿಗ್ಧ ಸಮಯದಲ್ಲಿ ಧರ್ಮ ಜ್ಞಾನದಿಂದ ವಂಚಿತರಾಗಿದ್ದವರಿಗೆ ತಮ್ಮ ಉಜ್ವಲ ಆತ್ಮಶಕ್ತಿಯಿಂದ ಹೊಸ ಸಮಾಜ ನಿರ್ಮಿಸುವಲ್ಲಿ ಜನರ ನೈತಿಕ ವಿಚಾರಗಳಿಗೆ ದಕ್ಕೆ ಬರದ ರೀತಿಯಲ್ಲಿ ಜನರನ್ನು ತಿದ್ದಿದರು.

ಬಿಜ್ಜಳ ರಾಜನ ಆಸ್ಥಾನದಲ್ಲಿ ಮಂತ್ರಿಯಾಗಿ ಸಾರಥ್ಯ ವಹಿಸಿದ ಬಸವಣ್ಣನವರು ಅನೇಕಾನೇಕ ಜನಪರ ಕಾರ್ಯಗಳನ್ನು ಮಾಡಿ ಜನಾನುರಾಗಿಯಾದರು. ಇವರ ವಿರೋಧಿಗಳು ಇವರ ಏಳಿಗೆಯನ್ನು ಸಹಿಸದೆ ಅಪಪ್ರಚಾರ ಮಾಡಿದರು. ಆದರೆ ಯಾವುದಕ್ಕೂ ದೈರ್ಯಗೆಡದೆ ನೈತಿಕ ದೈರ್ಯದಿಂದ ಎಲ್ಲ ಅಡ ತಡೆಗಳನ್ನು ದಾಡಿ ಯಶಸ್ವಿಯಾದರು.

ಈ ಎಲ್ಲಾ ಕ್ರಾಂತಿಗಳ ಮೂಲಕ ಇಡೀ ಸಮಾಜವನ್ನೇ ತಿದ್ದಿ ಸ್ವಸ್ಥ ಸಮಾಜ ನಿರ್ಮಿಸಿ ಜ್ಞಾನ ಬಂಡಾರಿಯಾಗಿ ಜಗಜ್ಯೋತಿಯಾಗಿ ಜಾತ್ಯಾತೀತ ಸಮಾಜವನ್ನು ರೂಪಿಸುವಲ್ಲಿ ತಮ್ಮ ತನು ಮನ ಧನ ವಿನಿಯೋಗಿಸಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಬಸವಣ್ಣನವರನ್ನೇ ಜಾತಿಯ ರಾಡಿಯಲ್ಲಿ ಹೊರಾಡಿಸುತ್ತಿರುವುದು ನಿಜಕ್ಕೂ ನಾಗರೀಕರ ಸಮಾಜ ತಲೆ ತಗ್ಗಿಸಬೇಕಾಗದ ವಿಷಯ

ಬಸವಣ್ಣನವರ ತತ್ವ ಆದರ್ಶಗಳನ್ನು ಪಾಲಿಸಿ ಸುಂದರ ಸಮಾಜದ ನಿರ್ಮಾಣ ಮಾಡಿ ಅವರ ಕನಸಿನ ಸಮಾಜವನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಹೋರಾಡೋಣ ಪ್ರತಿಯೊಬ್ಬ ವ್ಯಕ್ತಿಯ ಬಲಾವಣೆಯೆ ಕುಟುಂಬದ ಬದಲಾವಣೆ ಕುಟುಂಬ ಬದಲಾವಣೆಯೆ ಸಮಾಜದ ಬದಲಾವಣೆ ಎಂಬ ಸತ್ಯತೆ ಅರಿವಾದರೆ ನಾವು ಬಸವಣ್ಣನವರು ಕಂಡು ಕನಸಿನ ಸಮಾಜವನ್ನು ನನಸು ಮಾಡಬಹುದು. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸೋಣ.

‘ಗಿಳಿಯೋದಿ ಫಲವೇನು? ಬೆಕ್ಕು ಬಹುದು ಹೇಳಲರಿಯದು !
ಜಗವೆಲ್ಲಕಾಂಬ ಕಣ್ಣ ತನ್ನ ಕೊಂಬ ಕೊಯಿಲೆಯ
ಕಾಣಲರಿಯದು
ಇದಿರಗುಹವ ಬಲ್ಲೆವೆಂಬರು
ತಮ್ಮ ಗುಣವನಿಯರು, ಕೂಡಲಸಂಗಮದೇವಾ’

ಅರ್ಥ :::
ಗಿಳಿಗೆ ಮಾತು ಕಲಿಸಿದರೇನು? ಬೆಕ್ಕು ಬರುವ ಮುನ್ಸೂಚನೆಯನ್ನು ಅದಕ್ಕೆ ಕೊಡಲು ಸಾಧ್ಯವೇ? ಜಗತ್ತನ್ನೇ ಕಾಣುವ ಕಣ್ಣು ಮೊದಲು ತನ್ನನ್ನು ಕಾಣಬೇಕು ತಮ್ಮಲ್ಲಿರುವ ಗುಣಗಳ ಬಗ್ಗೆ ಎಲ್ಲರಿಗೂ ಅರಿವು ಇರಬೇಕು

Geethanjali-Mahesh* ಗೀತಾಂಜಲಿ ಮಹೇಶ್
ಸೋಮವಾರಪೇಟೆ

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *