ಅರ್ಜಿ ಆಹ್ವಾನ

Posted on: July 25, 2015

ಮಡಿಕೇರಿ :

Writingಜಿಲ್ಲಾಧಿಕಾರಿಯವರ ಕಚೇರಿ ನಗರದ ಜಿಲ್ಲಾ ಕಚೇರಿಯಲ್ಲಿರುವ ಕಂದಾಯ ಇಲಾಖೆಗೆ ಸಂಬಂಧಿಸಿದ ವ್ಯಾಜ್ಯಗಳಿಗೆ ಜಿಲ್ಲಾಧಿಕಾರಿಯವರ ಕಾನೂನು ಸಲಹೆ ನೀಡಲು ಕಾನೂನು ಪದವೀಧರರಾಗಿರುವ (ಎಲ್.ಎಲ್.ಬಿ) ಕಂದಾಯ ಇಲಾಖೆಯ ನಿವೃತ್ತ ವಿಶೇಷ ಜಿಲ್ಲಾಧಿಕಾರಿ, ನಿವೃತ್ತ ತಹಶೀಲ್ದಾರ್, ನಿವೃತ್ತ ಉಪ ತಹಶೀಲ್ದಾರ್, ನಿವೃತ್ತ ಸಿವಿಲ್ ನ್ಯಾಯಾಧೀಶರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗಳಿಗೆ ಸರ್ಕಾರದ ನಿಯಮಾವಳಿಗಳಂತೆ ಸಂಚಿತ ವೇತನವನ್ನು ಪಾವತಿಸಲಾಗುವುದು. ಆಸಕ್ತಿಯುಳ್ಳವರು ತಮ್ಮ ಸೇವೆಯ ವಿವರ ಹಾಗೂ ದಾಖಲೆಗಳನ್ನು ಪೂರ್ಣ ಮಾಹಿತಿಯೊಂದಿಗೆ ಜಿಲ್ಲಾಧಿಕಾರಿಗಳು, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಪ್ರಕಟಣೆ ದಿನಾಂಕದಿಂದ 15 ದಿನದೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರಗಳನ್ನು ಜಿಲ್ಲಾಧಿಕಾರಿಗಳ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಕಚೇರಿ ವೇಳೆಯಲ್ಲಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮದ್ ಅವರು ಕೋರಿದ್ದಾರೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *