ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ

Posted on: July 23, 2015

ಮಡಿಕೇರಿ :

Dravinig2015-16 ನೇ ಸಾಲಿನಲ್ಲಿ ಪ.ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿ ಸಾರಿಗೆ ಇಲಾಖೆಯಿಂದ ಶೇ: 75 ರಷ್ಟು ಆರ್ಥಿಕ ಸಹಾಯ ಧನ ನೀಡಿ ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳಿಗೆ ಹೇಳಲಾಗಿರುವಂತೆ ವಾಹನ ಚಾಲನಾ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ.ಜಾತಿಗೆ ಸೇರಿದ ಅಭ್ಯರ್ಥಿಗಳಲ್ಲಿ ಆಟೋರಿಕ್ಷಾ ವಾಹನ ಚಾಲನೆಗೆ 4 ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಾಕಿ ಇರುತ್ತದೆ. ಅದೇ ರೀತಿ ಪ.ಪಂಗಡದ ಅಭ್ಯರ್ಥಿಗಳಲ್ಲಿ ಲಘು ಮೋಟಾರು ವಾಹನ ಚಾಲನೆಗೆ 5, ಆಟೋರಿಕ್ಷಾ ವಾಹನ ಚಾಲನೆಗೆ 2, ಭಾರೀ ವಾಹನ ಚಾಲನೆಗೆ 2 ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಾಕಿ ಇರುವುದು.

ಆಸಕ್ತ ಅಭ್ಯರ್ಥಿಗಳು ವಿಳಾಸ ಧೃಡೀಕರಣ, ಜನ್ಮ ದಿನಾಂಕ ಧೃಡೀಕರಣ, ಮತ್ತು 2 ಇತ್ತೀಚಿನ ಭಾವ ಚಿತ್ರಗಳೊಂದಿಗೆ ಈ ಕಛೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಟೋರಿಕ್ಷಾ ಮತ್ತು ಭಾರೀ ವಾಹನ ಚಾಲನೆಗೆ ಅರ್ಜಿ ಸಲ್ಲಿಸುವವರು, ಈಗಾಗಲೇ ಹೊಂದಿರುವ ಲೈಸನ್ಸ್ ಧೃಡೀಕೃತ ಜರಾಕ್ಸ್ ಪ್ರತಿಯನ್ನು ಸಹ ಲಗತ್ತಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲೆಯಲ್ಲಿರುವ ವಿವಿಧ ತರಬೇತಿ ಶಾಲೆಗಳಿಗೆ ತರಬೇತಿಗಾಗಿ ನಿಯೋಜಿಸಲಾಗುವುದು. ಶೇ: 25 ರಷ್ಟು ಶುಲ್ಕ ಪಾವತಿಸಿ, ಅರ್ಜಿದಾರರು ಆಯಾ ಶಾಲೆಗಳಲ್ಲಿ ತರಬೇತಿಗೆ ಹಾಜರಾಗಬೇಕಾಗುತ್ತದೆ. ಆಯ್ಕೆಯಾದ ಅರ್ಜಿದಾರರು ಕಡ್ಡಾಯವಾಗಿ ತರಬೇತಿಗೆ ಹಾಜರಾಗಬೇಕಾಗಿದ್ದು, ವಾಹನ ಚಾಲನಾ ತರಬೇತಿ ಪಡೆಯಲು ಆಸಕ್ತರಾಗಿರುವವರು ಜುಲೈ .31 ರ ಒಳಗೆ ಅರ್ಜಿ ಸಲ್ಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ನಫೀಸ್ ಅಹಮದ್ ಅವರು ತಿಳಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *