ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಸೋಲನ್ನು ಮೆಟ್ಟಿಲನ್ನಾಗಿ ಮಾಡಿಕೊಂಡ ‘ಮಿಸೈಲ್ ಮ್ಯಾನ್’

Posted on: July 31, 2015

Abdul-Kalam-3‘ಸಿಹಿ ನಿದ್ರೆಯಲ್ಲಿ ಕಾಣಿಸುವುದು ನಿಜವಾದ ಕನಸಲ್ಲ ನಮ್ಮನ್ನು ನಿದ್ರೆ ಗೆಡುವಂತೆ ಮಾಡುವುದು ನಿಜವಾದ ಕನಸು’ ಈ ನುಡಿ ಮುತ್ತುಗಳು ನಮ್ಮ ದೇಶದ ಹೆಮ್ಮ್ಮೆಯ ರಾಷ್ಟ್ರಪತಿಗಳ ಸವಿ ನುಡಿಗಳು ಜನ ಸಾಮಾನ್ಯರಲ್ಲಿ ಒಬ್ಬರಾಗಿ ಅವರ ಅನುಭವದ ನುಡಿಗಳೇ ಎಲ್ಲರಿಗೂ ಸ್ಪೂರ್ತಿದಾಯಕ.

‘ಭಾರತ ಕಂಡ ಅತ್ಯದ್ಬುತ ರಾಷ್ಟ್ರಪತಿ’ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ಭಾರತ ದೇಶ ಕಂಡ ಅಪ್ರತಿಮ ವ್ಯಕ್ತಿ! ಕ್ಷಿಪಣಿ ಮಾನದ ಅಗ್ನಿ ಹಾಗೂ ಕ್ಷಿಪಣಿಗಳ ಹರಿಕಾರ, ಸರಳ ಹಾಗೂ ಸಜ್ಜನಿಕೆಯ ಪ್ರಮಾಣಿಕ ವ್ಯಕ್ತಿತ್ವದ ಅಜಾಂತ ಶತ್ರ ಎಂದೇ ಕರೆಯಲ್ಪಡುತಿದ್ದ ಮಹಾ ಚೈತನ್ಯ ಇಂದು ಕೇವಲ ನೆನಪು ಮಾತ್ರ. 15-10-1931ರಲ್ಲಿ ತಮಿಳು ನಾಡಿನ ರಾಮೇಶ್ವರಂನ ಧನುಷ್‌ಕೋಡಿಯ ಬಡ ಕುಟುಂಬದಲ್ಲಿ ಜನಿಸಿದ ಅವುಲ್ ಪಕೀರ್ ಜೈನುಲಬ್ಧಿನ್ ಅಬ್ದುಲ್ ಕಲಾಂ ರವರ ಜೀವನವೆ ಸ್ಪೂರ್ತಿದಾಯಕವಾದದು!.

ದೃಡ ವ್ಯಕ್ತಿತ್ವದ ಕಾರ್ಯಕ್ಷಮತೆ ಸ್ಪೂರ್ತಿದಾಯಕ ಸಜ್ಜನಿಕೆಯ ವ್ಯಕ್ತಿ ಸಮಯ ಪಾಲನೆ, ಶ್ರದ್ದಾಭಕ್ತಿಯ ಮೂಲಕ ತಮ್ಮ ವಯಕ್ತಿತ್ವ ರೂಪಿಸಿಕೊಂಡ ಕಲಾಂರವರ ಜೀವನ ಅನುಭದ ಪಾಠ ತಮ್ಮ ಜೀವನದಲ್ಲೆ ಕಂಡ ಅನುಭವವನ್ನೆ ನುಡಿ ಮುತ್ತುಗಳಲ್ಲಿ ನುಡಿದರು. ಅವರ ಒಂದೊಂದು ನುಡಿ ಮುತುಗಳಲ್ಲಿ ಜೀವನದ ಸತ್ಯತೆ ಅಡಗಿದೆ ಒಂದೊಂದು ನುಡಿಗಳನ್ನು ಕೇಳಿದಾಗ ಸ್ಪೂರ್ತಿದಾಯಕ ಹಾಗೂ ರೋಮಾಂಚನಗೊಳ್ಳುತ್ತದೆ. ಕೇವಲ ಉಪನ್ಯಾಸಕಗಳ ಮೂಲಕ ತಮ್ಮ ಕನಸು ಆದರ್ಶಗಳನ್ನು ಹೇಳುತಿರಲಿಲ್ಲ ಅವರ ಜೀವನದಲ್ಲೂ ಹಾಗೆ ನಡೆದುಕೊಳ್ಳುತಿದ್ದರು.

Abdul-Kalam-2ಒಬ್ಬ ವಿಜ್ಞಾನಿ ರಾಷ್ಟ್ರದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ ಮೊದಲ ವ್ಯಕ್ತಿ ಕಲಾಂ. ಆದರೆ ನಾವು ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ, ಇಂಥ ಅದ್ಬುತ ಸಾಧನೆಯ ವ್ಯಕ್ತಿಯ ಹಿನ್ನೆಲೆ ತೆಗೆದುಕೊಂಡಾಗ ಇವರು ಕಡು ಬಡತನದಿಂದ ಬಂದು ಇವರು ಮಾಡಿದ ಸಾಧನೆ ನಿಜಕ್ಕೂ ರೋಚಕ ತಮ್ಮ ವಿದ್ಯಾಭ್ಯಾಸಕ್ಕೂ ಹಣವಿಲ್ಲದ ಸಂದರ್ಭದಲ್ಲಿ ಮನೆ ಮನೆಗೆ ದಿನ ಪತ್ರಿಕೆ ಹಾಕಿದ ಆ ಪುಟ್ಟ ಕೈಗಳು ಮುಂದೊಂದು ದಿನ ವಿಶ್ವವೆ ಬೆರಗಾಗಿಸುವ ರಾಕೇಟ್ ಹಾರಿಸಿದ ಕಥೆ ನಿಜಕ್ಕೂ ರೋಮಾಂಚನ, ಕಲಾಂರವರು ಬಾಲ್ಯದಿಂದಲೆ ಬಾಹ್ಯಕಾಶ ವಿಜ್ಞಾನದ ಬಗ್ಗೆ ಒಲವು ತೋರಿಸಿದವರು. ಅವರು ಕಂಡ ಕನಸನ್ನು ನನಸು ಮಾಡಲು ಶ್ರಮವಹಿಸಿ ಸೋಲಿನಲ್ಲಿ ಗೆಲುವಿನ ಮೆಟ್ಟಲೀರಿದ ಹರಿಕಾರರು.

ಭಾರತ ಬಡ ರಾಷ್ಟ್ರವಲ್ಲ ಜನರ ಭಾವನೆಗಳು ಬಡವಾಗಿವೆ. ಪ್ರತಿಯೊಬ್ಬ ವ್ಯಕ್ತಿಯು ಕಾರ್ಯಕ್ಷಮತೆ, ನಿಷ್ಠೆ ಒಂದು ಗುರಿ ಇಟ್ಟು ಕೆಲಸ ಮಾಡಿದಲ್ಲಿ ಯಶಸ್ಸು ನಮ್ಮದಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಯಶಸ್ಸನ್ನು ಯೋಚಿಸಬೇಕು ಆಗ ಯಶಸ್ಸು ನಮ್ಮದಾಗುತ್ತದೆ. ಸರ್ವರೀಗೂ ಶಿಕ್ಷಣ ಸಿಗಬೇಕು ಶಿಕ್ಷಣದಲ್ಲಿ ಬೇಧ-ಭಾವ ಇರಬಾರದು ಗ್ರಾಮೀಣ ಪ್ರದೇಶಗಳಿಗೆ ಸಕಲ ಸೌಲಭ್ಯ ನೀರು, ವಿದ್ಯುತ್ ಹೀಗೆ ಸಾಮಾನ್ಯ ಅವಶ್ಯಕತೆಗಳು ಸಿಗಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ ಕಲಾಂರವರು ನಮ್ಮ ರಾಷ್ಟ್ರಪಿತ ಮಹಾತ್ಮಗಾಂಧಿಯವರನ್ನು ನೆನಪಿಸುತ್ತಾರೆ. ಅದಕ್ಕೆ ಅವರನ್ನು ಗಾಂಧೀಜಿಯವರಿಗೆ ಹೊಲಿಸುತ್ತಾರೆ.

Abdul-Kalam-1ಇನ್ನೂ ವಿಜ್ಞಾನ ಲೋಕಕ್ಕೆ ಬಂದರೆ ಇಡೀ ಜಗತ್ತು ಭಾರತದ ಬಾಹ್ಯಕಾಶ ಸಾಧನೆಯ ಬಗ್ಗೆ ತಿರುಗಿ ನೋಡುವಲ್ಲಿ ಇವರ ಸಾಧನೆ ಮೇಲುಗೈ ವಿಜ್ಞಾನ ಲೋಕದ ‘ಧ್ರುವತಾರೆ’ಯಾಗಿ ಕ್ಷಿಪಣಿ ಹಾಗೂ ಅಣು ಬಾಂಬ್‌ಗಳ ಪಿತಾಮಹಾ ಕಲಾಂರವರು. ನಮ್ಮ ಮುಂದೆ ಆದರ್ಶರಾಗಿ ಕಾಣಲು ಅವರ ಕಾರ್ಯದಕ್ಷತೆಯೇ ಕಾರಣ. ಉಪಗ್ರಹ ಯಶಸ್ವಿ ಉಡಾವಣೆಯಲ್ಲಿ ಕಲಾಂರವರ ಪಾತ್ರ ಉನ್ನತವಾದದು. ಆದರೆ ಮೊದಲ ಎಸ್.ಎಲ್.ವಿ ಹಾಗೂ ಎರಡನೆಯ ಅಗ್ನಿ ಉಪಗ್ರಹಗಳಲ್ಲಿ ಸೋಲನ್ನು ಕಂಡಾಗ ಅಣುಕಿಸಿದವರೆ ಹೆಚ್ಚು ಆದರೆ ಕಲಾಂ ಯಾವುದೇ ಟೀಕೆಗೆ ಸೋಲದೆ ಸೋಲನ್ನು ಮೆಟ್ಟಿಲನ್ನಾಗಿ ಮಾಡಿಕೊಂಡು ರೋಹಿಣಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದಾಗ ಇಡೀ ಜಗತ್ತು ನಿಬ್ಬೆರಗಾಗುತ್ತದೆ. ಸ್ವತ ಇಂದಿರಾಗಾಂಧಿಯವರೇ ಇವರನ್ನು ಅಭಿನಂದಿಸುತ್ತಾರೆ. ಇದರಿಂದಾಗಿ ಇವರು ‘ಮಿಸೈಲ್ ಮ್ಯಾನ್’ ಎಂದು ಖ್ಯಾತರಾಗುತ್ತಾರೆ ಇದರಿಂದ ನಮಗೆ ತಿಳಿಯುವುದೇನೆಂದರೆ ಸೋಲಿಗೆ ಹೆದರಬಾರದು, ನಮ್ಮ ಯೋಚನೆ ಕನಸುಗಳನ್ನು ನನಸು ಮಾಡುವಲ್ಲಿ ಪ್ರಮಾಣಿಕ ಪ್ರಯತ್ನ ನಮ್ಮದಾದರೆ ಗೆಲುವು ನಿಶ್ಚಿತ.

ಯಾವುದೇ ಒಬ್ಬ ವ್ಯಕ್ತಿ ಜನ ಪ್ರಿಯವಾಗಬೇಕಾದರೆ ಅಷ್ಟು ಸುಲಭ ಸಾಧ್ಯವಿಲ್ಲ. ಯಾರು ಬೇಕಾದರು ಸಾಧನೆಗಳ ಬಗ್ಗೆ ಸುಲಭವಾಗಿ ಮಾತನಾಡಬಹುದು ಬರೆಯಬಹುದು ಆದರೆ, ಆ ದಾರಿಯಲ್ಲಿ ನುಡಿದಂತೆ ನಡೆಯಬೇಕೆಂದರೆ ಅವರಿಗೊಂದು ವಿಶೇಷತೆ, ದೈವಾನುಗ್ರಹ, ದಕ್ಷತೆ, ಪ್ರಮಾಣಿಕತೆ, ಕಾರ್ಯಕ್ಷಮತೆ ಇರಲೇಬೇಕು. ಇವೆಲ್ಲಾ ಕಲಾಂರವರಲ್ಲಿ ಇರುವುದರಿಂದಲೆ ಅವರು ಇಂದು ಪ್ರತಿಯೊಬ್ಬರ ಹೃದಯದಲ್ಲೂ ಸ್ಥಾನಪಡೆದಿದ್ದಾರೆ ವಿದ್ಯಾರ್ಥಿ ಹಾಗೂ ಯುವ ಜನಾಂಗದ ಮೇಲೆ ಅತೀವ ನಂಬಿಕೆ ಇಟ್ಟಿದ್ದು ಕಲಾಂರವರು ಇಂದಿನ ವಿದ್ಯಾರ್ಥಿಗಳೆ ಮುಂದಿನ ದೇಶದ ಕನಸುಗಳನ್ನು ನನಸು ಮಾಡಲು ಸಾಧ್ಯ ಎಂದು ಆದಷ್ಟು ಶಾಲಾ ಕಾಲೇಜುಗಳಿಗೆ ಹೋಗಿ ಉಪನ್ಯಾಸ ನೀಡುತ್ತಿದ್ದರು. ಕೊನೆಗೆ ಉಪನ್ಯಾಸ ನೀಡುತ್ತಲೆ ಅಗಲಿದರು ಎಂದರೆ ನಮಗರ್ಥವಾಗುವುದೊಂದೆ ಅದೇ ಅವರ ನಿಷ್ಕಲ್ಮಶ ಪ್ರೀತಿ, ಮನಸ್ಸು ದೇಶಪ್ರೇಮ. ದೇಶದ ಅತ್ಯುನ್ನತ ಪದವಿಯಾದ ರಾಷ್ಟ್ರಪತಿ ಪದವಿಯಲ್ಲಿದ್ದರು ಅವರು ಶಿಕ್ಷಕರಾಗಿ ಪ್ರವಚನ ಮಾಡುವ ರೀತಿ, ವಿದ್ಯಾರ್ಥಿಗಳನ್ನು ಭೇಟಿ ಮಾಡುವ ರೀತಿ ಅವರ ಸರಳ ಸಜ್ಜನಿಕೆಗೆ ಹಿಡಿದ ಕೈಗನ್ನಡಿಯಾಗಿದೆ. 2002ರಲ್ಲಿ ರಾಷ್ಟ್ರಪತಿಯಾದಾಗ, ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳನ್ನು ಭೇಟಿ ಮಾಡುತ್ತೇವೆ. ಆ ಮೂಲಕ ವಿದ್ಯಾರ್ಥಿಗಳಲ್ಲಿ ಭಾರತದ ಅಭಿವೃದ್ಧಿಯ ಕನಸನ್ನು ನನಸು ಮಾಡುವಲ್ಲಿ ಸ್ಪೂರ್ತಿದಾಯಕವಾಗುತ್ತೇನೆ ಎಂದು ಹೇಳುತಿದ್ದ ಕಲಾಂರವರು, ೨೦೦೫ರ ವೇಳೆಗೆ ಸರಿ ಸುಮಾರು 6 ಲಕ್ಷ ವಿದ್ಯಾರ್ಥಿಗಳನ್ನು ಭೇಟಿ ನೀಡಿ ಸ್ಪೂರ್ತಿದಾಯಕರಾಗಿದ್ದಾರೆ. 1981 ರಲ್ಲಿ ಪದ್ಮಭೂಷಣ 1990ರಲ್ಲಿ ಪದ್ಮವಿಭೂಷಣ, 1997ರಲ್ಲಿ ದೇಶದ ಅತ್ಯುನ್ನತ ನಾಗರೀಕ ಗೌರವವಾದ ‘ಭಾರತ ರತ್ನ’ 1997ರಲ್ಲಿ ಇಂದಿರಾ ಗಾಂಧಿ ಅವಾರ್ಡ್ ಫಾರ್ ನ್ಯಾಷನಲ್ ಇಂಟರ್‌ಗೇಷನ್, 2010ರಲ್ಲಿ ಡಾಕ್ಟರ್ ಆಫ್ ಇಂಜಿನಿಯರಿಂಗ್ ಸೇರಿದಂತೆ ಸುಮಾರು 17ಕ್ಕೂ ಹೆಚ್ಚು ಬಿರುದುಗಳನ್ನು ಗಳಿಸಿದ್ದಾರೆ. ಹಾಗೆ 30ಕ್ಕೂ ಹೆಚ್ಚು ವಿಶ್ವ ವಿದ್ಯಾನಿಲಯಗಳಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಇದು ಸುಲಭ ಸಾಧ್ಯದ ಮಾತಲ್ಲ.

Abdul-Kalam-4ತಂತ್ರಜ್ಞಾನ ಬಲ್ಲ ರಾಷ್ಟ್ರಪತಿಯಾಗಿದ್ದ ಇವರು ತಂತ್ರಜ್ಞಾನದಿಂದ ಬದುಕು ಮೇಲೆ ಬರಲು ಸಾಧ್ಯ. ತಂತ್ರಜ್ಞಾನದ ಮೂಲಕ ಹೇಗೆ ಮೇಲೆ ಬರಬಹುದೆಂದು ತಮ್ಮ ಇಂಡಿಯಾ 2020 ಪುಸ್ತಕದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ.
ಬಯೋ ಟೆಕ್ನಾಲಜಿಯ ಮೂಲಕ ಹೇಗೆ ಉತ್ಪಾದನೆಯನ್ನು ಹೆಚ್ಚಿಸಬಹುದು ಎಂದು ಕೃಷಿ ಕ್ಷೇತ್ರಕ್ಕೆ ಇವರು ತಮ್ಮ ಪುಸ್ತಕದಲ್ಲಿ ಉಲ್ಲೇಕಿಸುತ್ತಾರೆ.

ಶ್ರದ್ದಾಭಕ್ತಿ, ಕಾರ್ಯಕ್ಷಮತೆಯಿಂದ ಕೆಲಸ ಮಾಡಿದರೆ ನೀವು ಯಾರಿಗು ಹೆದರಬೆಕಾಗಿಲ್ಲ. ಕರ್ತವ್ಯದಲ್ಲಿ ನಿಷ್ಠೆ, ಸಜ್ಜನಿಕೆ ಇರಬೇಕು ಆ ಮೂಲಕ ನಮ್ಮ ಕನಸು ನನಸು ಮಾಡಿಕೊಳ್ಳಬಹುದೆಂಬ ಸತ್ಯವನ್ನು ತೋರಿಸಿಕೊಟ್ಟವರು ಇಂತ ಮಹಾ ಪುರುಷರ ಬಗ್ಗೆ ಬರೆಯುತ್ತಾ ಹೋದಂತೆ ಪುಟಗಳೇ ಸಾಕಾಗುವುದಿಲ್ಲ ಅವರ ಸಾಧನೆಗಳು ಅಷ್ಟೊಂದಿವೆ. ಕಲಾಂ ರವರು ಇಂದು ನಮ್ಮೊಂದಿಗಿಲ್ಲ, ಆದರೆ ಅವರು ಉಳಿಸಿ ಬೆಳೆಸಿ ಹೋದ ಆದರ್ಶ ನುಡಿ, ಕಾರ್ಯದಕ್ಷತೆ, ಅವರ ಕನಸಿನ ಅಭಿವೃದ್ದಿ ಭಾರತವನ್ನು ನನಸು ಮಾಡಲು ಪ್ರತಿಯೊಬ್ಬ ವ್ಯಕ್ತಿಗಳು ಅವರ ದಾರಿಯಲ್ಲಿ ನಡೆದರೆ ಇದೆ ಅವರಿಗೆ ನಾವು ಕೊಡುವ ಗೌರವ. ಈ ಮೂಲಕ ಅವರು ಪ್ರಪಂಚ ಇರುವವರೆಗೂ ಸದಾ ನಂದದೀಪವಾಗಿ ಅವಿಸ್ಮರಣೀಯರಾಗಿ ಇರುತ್ತಾರೆ.
ಮತ್ತೊಮ್ಮೆ ಹುಟ್ಟಿ ಬನ್ನಿ ನಿಮ್ಮ ಕನಸಿನ ಭಾರತವನ್ನು ನನಸು ಮಾಡಲು…

1ಗೀತಾಂಜಲಿ ಮಹೇಶ್
ಸೋಮವಾರಪೇಟೆ

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *