ಬ್ರೇಕಿಂಗ್ ನ್ಯೂಸ್
ಧಗಧಗನೆ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್ – ಓರ್ವ ಸಜೀವ ದಹನ 5ಕ್ಕೂ ಹೆಚ್ಚು ಮನೆಗಳು ಭಸ್ಮ , ವಸತಿ ರಹಿತ ಮತ್ತು ನಿವೇಶನ ರಹಿತರಿಂದ ಗ್ರಾ.ಪಂನಲ್ಲಿ ಅರ್ಜಿ ಸಲ್ಲಿಕೆ , ಸರಕಾರಿ ಆದೇಶದಲ್ಲೇ ಲೋಪ…! ಕೊಡಗು ಜಿಲ್ಲೆಯ ಬದಲಿಗೆ ಮಡಿಕೇರಿ ಜಿಲ್ಲೆ , ಗಾಳಿಬೀಡು ಶಿಕ್ಷಕರಿಗೆ ಸನ್ಮಾನ  ಸರಕಾರಿ ಶಾಲೆಗಳ ಸಾಧನೆಗೆ ಶಿಕ್ಷಕರ ಪರಿಶ್ರಮವೇ ಕಾರಣ ಲೆಕ್ಕಪರಿಶೋದಕ ಟಿ.ಕೆ.ಸುಧೀರ್ ಅಭಿಪ್ರಾಯ , ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಿತೂರಿ ಸಂಘಟನಾ ಕಾರ್ಯದರ್ಶಿ ಧರ್ಮಪ್ಪ ಆರೋಪ , ಪೌರಕಾರ್ಮಿಕರಿಗೆ ಪ.ಪಂ ಅಧ್ಯಕ್ಷರಿಂದ ರೈನ್ ಕೋಟ್ ವಿತರಣೆ , ಚಲಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದು ಕಾರ್ಮಿಕ ಸಾವು , ರೈತರ ಸಾಲ ಎಷ್ಟು ಕೋಟಿ ಇದ್ದರೂ ಸರಿ ಸಾಲ ಮನ್ನಾ ಮಾಡಿಯೇ ತೀರುತ್ತೇನೆ ಸಿಎಂ ಕುಮಾರಸ್ವಾಮಿ , ಜೂ.20 ರಂದು ಉದ್ಯೋಗ ಮೇಳ , ಜೂ.21 ರಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ,

ಹಿಮಕರಡಿ ವಿಶ್ವದ ಅತೀ ದೊಡ್ಡ ಭೂಚರ ಮಾಸಾಂಹಾರಿ ಪ್ರಾಣಿ

Posted on: July 20, 2015

ಹಿಮಕರಡಿ ವಿಶ್ವದ ಅತೀ ದೊಡ್ಡ ಭೂಚರ ಮಾಂಸಾಹಾರಿ ಪ್ರಾಣಿ. ಆಕ್ಟೀಕ್ ಸಾಗರ ಮತ್ತದರ ಸುತ್ತಮುತ್ತಲ ಜಾಗ ಆಕ್ಟೀಕ್ ವೃತ್ತದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ತಣ್ಣನೆಯ ಉಷ್ಣಾಂಶಗಳಿಗೆ ಹೊಂದಿಕೊಳ್ಳುವ ಮತ್ತು ಹಿಮ ಇಬ್ಬನಿ ನೀರಿನಲ್ಲಿ ಸಂಚರಿಸುವ ಹಲವು ಸರೀರಿಕ ಲಕ್ಷಣಗಳನ್ನು ಹೊಂದಿರುವ ಹಿಮಕರಡಿ ಬಹಳಷ್ಟು ಸಮಯವನ್ನು ಸಮುದ್ರ ಭಾಗದಲ್ಲೇ ಕಳೆಯುತ್ತದೆ.

ವಯಸ್ಸ ಗಂಡು ಹಿಮಕರಡಿಗಳು 350 ರಿಂದ 680 ಕೆ.ಜಿ. ತೂಕ ಹೊಂದಿರುತ್ತದೆ. ಹೆಣ್ಣು ಹಿಮಕರಡಿಗಳು ಗಂಡು ಹಿಮಕರಡಿಯ ಅರ್ಧದಷ್ಟು ತೂಕವನ್ನು ಹೊಂದಿರುತ್ತದೆ. ನೀರುನಾಯಿ, ಹಿಮಸಾರಂಗ, ಪಕ್ಷಿಗಳು, ಮೊಟ್ಟೆ, ಚಿಪ್ಪು ಮೀನು, ಏಡಿಗಳನ್ನು ಆಹಾರವಾಗಿ ಬಳಸಿಕೊಳ್ಳುವ ಹಿಮಕರಡಿ ಬೇರು ಮತ್ತು ಕಡಲುಚೇಣಿ ಗಿಡಗಳನ್ನು ತಿನ್ನುತ್ತವೆ. ಏಪ್ರಿಲ್ ಮೇ ತಿಂಗಳಲ್ಲಿ ಸಂತಾನೋತ್ಪತಿ ನಡೆಸುವ ಹಿಮಕರಡಿ 100ಕಿ.ಮೀ. ದೂರದಲ್ಲಿರುವ ಹೆಣ್ಣು ಹಿಮಕರಡಿಗಳ ಜಾಡನ್ನು ಪತ್ತೆಹಚ್ಚಬಲ್ಲದು.  ಹಿಮಕರಡಿ ಜನ್ಮ ನೀಡಿದ ಮರಿಗಳು ಸಾಕಷ್ಟು ದುರ್ಬಲವಾಗಿರುತ್ತದೆ. ತಾಯಿ ಕರಡಿ ಸುಮಾರು 1-2 ವರ್ಷಗಳ ಕಾಲ ಮರಿಗಳಿಗೆ ಕಾವು ಕೊಡುತ್ತದೆ.

polar-bear-2 polar-bear-4 polar-bear-3

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *