ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಆ.3 ರಂದು ಕಕ್ಕಡ 18 : ಮನೆ ಮನೆಗಳಲ್ಲಿ ಘಮಘಮಿಸಲಿದೆ ಮದ್ದು ಸೊಪ್ಪಿನ ಪಾಯಸ

Posted on: August 3, 2015

ಮಡಿಕೇರಿ :

ಆಟಿ ಅಥವಾ ಕಕ್ಕಡ ಆಚರಣೆಯ 18 ನೇ ದಿನ ಆಗಸ್ಟ್ 3. ಕಕ್ಕಡ ಆರಂಭವಾಗಿ 18 ದಿನ ತುಂಬುತ್ತಿದ್ದು 18 ಔಷಧೀಯ ಗುಣಗಳನ್ನು ಹೊಂದಿರುವ ಮದ್ದು ಸೊಪ್ಪಿನ ಪಾಯಸ ಅಥವಾ ರುಚಿ ರುಚಿಯಾದ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸುವುದು ವಿಶೇಷ. ಕೊಡಗಿನ ಮನೆ ಮನೆಗಳಲ್ಲಿ ಇನ್ನೆರಡು ದಿನ ಮದ್ದು ಸೊಪ್ಪಿನ ಪಾಯಸ ಘಮಘಮಿಸಲಿದೆ.11781776_870499066358544_3561384893277560790_naaaa

ತುಳುನಾಡಿನಲ್ಲಿ ಆಟಿ 18 ಹೇಗೋ, ಹಾಗೇ ಕೊಡಗಿನಲ್ಲಿ ಕಕ್ಕಡ 18 ಕೂಡ ಒಂದು ವಿಶಿಷ್ಠ ಆಚರಣೆಯಾಗಿದೆ. ಹೇಳಿ ಕೇಳಿ ಹಸಿರ ಕಾನನದ ಗೂಡಾದ ಕೊಡಗಿನಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ಹಸಿರ ಗಿಡಗಳಿಗೇನು ಕೊರತೆ ಇಲ್ಲ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಯಥೇಚ್ಛವಾಗಿ ಸಿಗುವ ಮರ ಕೆಸ, ಕಣಿಲೆ, ಅಣಬೆ, ಮದ್ದು ಸೊಪ್ಪು ಮಳೆ ಚಳಿ ಗಾಳಿಗೆ ಮಾನವನ ದೇಹವನ್ನು ಬೆಚ್ಚಗಿಡಲು ಸಹಕಾರಿಯಾಗಿದೆ ಮಾತ್ರವಲ್ಲ ಇವುಗಳಲ್ಲಿ ಔಷಧೀಯ ಗುಣಗಳಿವೆ ಎನ್ನುವುದು ಹಿರಿಯರ ನಂಬಿಕೆ. ನಾಟಿ ಕೋಳಿ, ಏಡಿ, ಹೊಳೆ ಮೀನು ಕೂಡ ಕಕ್ಕಡ ತಿಂಗಳಿನಲ್ಲಿ ಮಾಂಸಹಾರಿಗಳ ಹೊಟ್ಟೆಯನ್ನು ಸೇರಿ ದೇಹವನ್ನು ಬೆಚ್ಚಗಿಡಲು ಹಾಗೂ ಆರೋಗ್ಯ ವರ್ಧಕವಾಗಿ ಕೆಲಸ ಮಾಡಲು ಸಹಕರಿಯಾಗಿದೆ.

ಆದರೆ ಇವುಗಳೆಲ್ಲದಕ್ಕಿಂತಲೂ ಭಿನ್ನವಾದ ಖಾದ್ಯವೆಂದರೆ ಮದ್ದು ಸೊಪ್ಪಿನಿಂದ ತಯಾರಿಸಿದ ಪಾಯಸ. ಈ ಪಾಯಸದಿಂದಲೇ ಕಕ್ಕಡ 18 ಕ್ಕೆ ಮಹತ್ವವಿದೆ. ವರ್ಷಕ್ಕೊಂದು ಬಾರಿ ಕಕ್ಕಡ 18 ರಂದು ಮದ್ದು ಸೊಪ್ಪಿನ ಪಾಯಸವನ್ನು ಸೇವಿಸುವ ಪದ್ಧತಿ ಕಳೆದ ಹಲವು ವರ್ಷಗಳಿಂದ ವಾಡಿಕೆಯಲ್ಲಿದೆ. ಕೊಡಗಿನಲ್ಲಿ ಯಥೇಚ್ಛವಾಗಿ ಸಿಗುವ ಈ ಸೊಪ್ಪನ್ನು ಅಥವಾ ಈ ಸೊಪ್ಪಿನಿಂದ ತೆಗೆದ ರಸವನ್ನು ಜಿಲ್ಲೆಯಿಂದ ಹೊರ ಭಾಗದಲ್ಲಿರುವ ಕೊಡಗಿನ ಜನ ಕಕ್ಕಡ 18 ರಂದು ತಮ್ಮ ನೆಂಟರಿಸ್ಟರ ಮೂಲಕ ತರಿಸಿಕೊಂಡು ಸೇವಿಸುವಷ್ಟು ಜನಪ್ರಿಯ ಈ ಮದ್ದಿನ ಸೊಪ್ಪು. ವಿಶಿಷ್ಟವಾದ ಸುವಾಸನೆಯನ್ನು ಹೊಂದಿರುವ ಸೊಪ್ಪಿನಿಂದ ತಯಾರಾದ ಪಾಯಸ, ತಟ್ಟೆ ಹಿಟ್ಟು, ಹಲ್ವ ಹೀಗೆ ಯಾವುದೇ ಖಾದ್ಯವಿದ್ದರೂ ಕೊಡಗಿನ ಜೇನು ಮತ್ತು ತುಪ್ಪದೊಂದಿಗೆ ಸವಿದರೆ ಇವುಗಳ ರುಚಿ ದುಪ್ಪಟ್ಟಾಗಿರುತ್ತದೆ.11781788_870499166358534_1654130051250290633_ns

ಕಕ್ಕಡ 18 ಕ್ಕೆ ಜಾನಪದ ಹಾಗೂ ಆಯುರ್ವೇದ ಸ್ಪರ್ಶವಿದೆ. ಈ ದಿನ ಸಂಪ್ರದಾಯದಂತೆ ಸಾಮೂಹಿಕವಾಗಿ ಮನೆಯವರೆಲ್ಲ ಸೇರಿ ಗದ್ದೆಯಲ್ಲಿ ನಾಟಿ ಮಾಡಿ ಆನಂತರ ಮದ್ದು ಸೊಪ್ಪಿನ ಪಾಯಸ ಸೇವಿಸುತ್ತಾರೆ. ಕಕ್ಕಡ ಆರಂಭವಾದ ದಿನದಿಂದ 18 ದಿನಗಳವರೆಗೆ ಪ್ರತಿದಿನ ಒಂದೊಂದು ಔಷಧಿಯಂತೆ ಒಟ್ಟು 18 ಔಷಧಿಗಳು ಈ ಸೊಪ್ಪಿನಲ್ಲಿ ಅಡಕವಾಗುತ್ತದೆ ಎನ್ನುವ ನಂಬಿಕೆ ಇದೆ. 18 ಔಷಧಿಗಳು ಸಂಪೂರ್ಣವಾಗಿ ಸೇರಿಕೊಂಡ ನಂತರವಷ್ಟೇ ಸೊಪ್ಪಿಗೆ ಪರಿಪೂರ್ಣ ಔಷಧೀಯ ಗುಣ ಬರುತ್ತದೆ ಎನ್ನುವ ಕಾರಣಕ್ಕೆ ಕಕ್ಕಡ 18 ರಂದೇ ಮದ್ದು ಸೊಪ್ಪನ್ನು ಕೊಯ್ದು ಖಾದ್ಯವನ್ನು ತಯಾರಿಸಲಾಗುತ್ತದೆ. ಈ ಸೊಪ್ಪನ್ನು ಮಧುಬನ ಎಂದು ಕೂಡ ಕರೆಯುತ್ತಾರೆ.

ಗ್ರಾಮೀಣ ಪ್ರದೇಶದ ಜನರು ತಮ್ಮ ಮನೆಯ ಅಕ್ಕಪಕ್ಕದಲ್ಲೇ ಇದನ್ನು ಬೆಳೆದುಕೊಂಡಿದ್ದರೆ ಪಟ್ಟಣದ ಜನ ಗ್ರಾಮಸ್ಥರು ತಂದು ಮಾರುವ ಸೊಪ್ಪಿಗೆ ಹಣ ನೀಡಿ ಕೊಂಡುಕೊಳ್ಳುತ್ತಾರೆ. ಒಟ್ಟಿನಲ್ಲಿ ಭಾರೀ ಮಳೆ ಗಾಳಿ ಚಳಿಯ ಕೊಡಗಿನಲ್ಲೀಗ ಘಮಘಮಿಸುವ ಬಿಸಿ ಬಿಸಿ ಮದ್ದು ಸೊಪ್ಪಿನ ಪಾಯಸದ್ದೇ ಮಾತು.P1700232 P1700234

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *