ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ರಾಮಾಯಣದ ಇತಿಹಾಸವನ್ನು ಬೆಸೆದುಕೊಂಡ ಅಡವಿರಾಣಿ ‘ಸೀತೆಹೂವು’

Posted on: August 5, 2015

ಮಡಿಕೇರಿ :

SEETE-1ಮಲೆನಾಡಾದ ಕೊಡಗಿನಲ್ಲಿ ಮಳೆಗಾಲ ಆರಂಭವಾಗುವುದೇ ತಡ, ಭೂಮಿ ಮೇಲಿನ ಪರಿಸರ, ಪ್ರಕೃತಿಯಲ್ಲಿ ಮಳೆ ನೀರಿನಿಂದ ತೊಯ್ದು ಅಲ್ಲಲ್ಲಿ ನಾನಾ ಬಗೆಯ ಜಾತಿ ಸೇರಿದಂತೆ ಕಾಡು ಹೂಗಳು ಮತ್ತು ಹಣ್ಣುಗಳು ನಳನಳಿಸುತ್ತ ವಿಜೃಂಭಿಸುತ್ತವೆ. ಪ್ರಕೃತಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದಂತೆ, ಕಾನನದೊಳಗೆ ಹೂ, ಹಣ್ಣುಗಳು ಅಲಂಕಾರಿಕವಾಗಿ ಮನಸ್ಸನ್ನು ಸೂರೆಗೊಳ್ಳುತ್ತವೆ. ಇಂತಹ ಆಕರ್ಷಣಿಯನ್ನು ಹೊಂದಿರುವ ‘ವನದೇವತೆ’ಯಾದ ‘ಸೀತೆ ಹೂ’ ಒಂದಾಗಿದೆ.
ಅಭಯಾರಣ್ಯ ಹಾಗೂ ಸಾಧಾರಣ ಕುರುಚಲು ಕಾಡುಗಳಲ್ಲಿ ನಳನಳಿಸುತ್ತ ಕಂಡು ಬರುವ ಈ ವನ ರಾಣಿ ‘ಸೀತೆ ಹೂ’ವಿನ ಗೊಂಚಲು ಬಹಳಷ್ಟು ಮಂದಿಯ ಮನೆಯ ಹಿತ್ತಲಿನ ಸೀಬೆ ಮರ, ಮಾವಿನ ಮರ, ದಾಸವಾಳ ಸಹಿತ ಇತರ ಗಿಡಗಳ ಕೊಂಬೆಗಳಲ್ಲಿ ಗೋಚರಿಸುತ್ತಿವೆ.

ಈ ಸೀತೆ ಹೂವಿನ ಗುಣವೆಂದರೆ ಮತ್ತೊಂದು ಗಿಡವನ್ನು ಅವಲಂಬಿಸಿ ಬೆಳೆಯುವ ಗಿಡಗಳ ಪೈಕಿ ಸೀತೆ ಹೂವಿನ ಗೊಂಚಲು ಒಂದಾಗಿದ್ದು ಇದು ‘ಆರ್ಕಿಡ್ ಪ್ರಬೇಧ’ಕ್ಕೆ ಸೇರಿದ ವೈಶಿಷ್ಟ್ಯಪೂರ್ಣ ಪುಷ್ಪವಾಗಿದೆ. ಸೀತೆಹೂವಿನ ವೈಜ್ಞಾನಿಕ ಹೆಸರು ‘ರಿಂಕೋ ಸ್ಟ್ರೇಲಿಸ್ ರೆಟೊಸ್’ ಎಂದು ಕರೆಯಲ್ಪಡುವ ‘ಸೀತೆಹೂವು’ ಹೆಚ್ಚಾಗಿ ಮಳೆಗಾಲದಲ್ಲಿ ಮಾತ್ರ ಕಾಣಸಿಗುವುದಾಗಿದೆ. ನೋಡುಗರನ್ನು ಈ ಹೂವು ಸೌಂದರ್ಯ ರಾಣಿಯಾಗಿ ಕಂಗೊಳಿಸುತ್ತ, ಆಕರ್ಷಿಸುವ ಚೆಲುವೆಯಾಗಿದ್ದಾಳೆ. ಈ ಸೀತೆ ಹೂವು ಗಿಡದಲ್ಲಿ ಸುಮಾರು ನಾಲ್ಕೈದು ಹೂವುಗಳು ಗುಂಪು ಗುಂಪಾಗಿ ಅರಳಿ ಸುಮಾರು ಹತ್ತರಿಂದ ಹನ್ನೆರಡು ದಿನಗಳ ಕಾಲ ತನ್ನ ತಾಜಾತನವನ್ನು ಕಾಪಾಡಿಕೊಂಡು ಸೌಂದರ್ಯವನ್ನು ನೋಡುಗರಿಗೆ ಉಣಬಡಿಸುತ್ತದೆ. ಗೊಂಚಲು ಸೀತೆ ಹೂವು ಸಾಮಾನ್ಯವಾಗಿ ತಿಳಿ ನೀಲಿ, ನೇರಳೆ, ಬಿಳಿ ಬಣ್ಣಗಳಿಂದ ಕೂಡಿದ್ದು, ಹೆಂಗೆಳೆಯರ ಕೂದಲಿನಂತೆ ನೀಳವಾಗಿ ಕಂಡು ಬರುವ ಈ ಸೀತೆ ಹೂವು ಮೊದಲ ನೋಟಕ್ಕೆ ಪ್ರತಿಯೊಬ್ಬರ ಮನಸೂರೆಗೊಳಿಸುತ್ತದೆ.

SEETE-2ಇದರ ಮೋಹಕ ಸೌಂದರ್ಯದಿಂದಾಗಿ ಕಾಡಿನಲ್ಲಿ ಮರಗಳ ಕೊಂಬೆಗಳಲ್ಲಿ ಪ್ರತ್ಯಕ್ಷವಾಗುವ ಸೀತೆ ಹೂವಿನ ಗಿಡವನ್ನು ತಮ್ಮ ಮನೆಯ ಹಿತ್ತಲ ಹೂತೋಟದಲ್ಲಿ ನೆಡುವ ಮೂಲಕ ಅದರ ಸೌಂದರ್ಯ ಆರಾಧಕರಾಗಿ ಸೀತೆ ಹೂವಿಗೊಂದು ಸ್ಥಾನ ಕಲ್ಪಿಸಿರುವುದು ವಿಶೇಷ. ಈ ಕಾರಣಗಳಿಂದ ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುವ ಸೀತೆ ಹೂವನ್ನು ಮುಂದಿನ ದಿನಗಳಲ್ಲಿ ಉಳಿಸಿಕೊಂಡು ಹೋಗಬೇಕಾದ ಅನಿವಾರ್ಯವೂ ಬರಬಹುದು.

ಈ ಮನಮೋಹಕ ಸೀತೆ ಹೂವಿನ ಬಗ್ಗೆ ರಾಮಾಯಣದ ಪ್ರಕಾರ ಒಂದು ಇತಿಹಾಸವೇ ಇದೆ. ಅರಣ್ಯ ಖಂಡದಲ್ಲಿ ಬರುವಂತೆ ರಾಮ ಸೀತೆ ವನವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಸೀತಾ ದೇವಿಯ ಮುಡಿಗೇರಿ ಆಕೆಯ ನೀಳ ಕೇಶಕ್ಕೆ ಸೀತೆ ಹೂ ಅಲಂಕಾರವನ್ನು ನೀಡಿತ್ತು .ಈ ಕಾರಣದಿಂದಲೇ ಈ ಹೂವಿಗೆ ‘ಸೀತೆ ಹೂ’ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಇದೆ.
ಸೀತೆ ತನ್ನ ತುರುಬುಗೆ ಮುಡಿದುಕೊಂಡ ಹೂವಾದರೂ ಸಹ ಇಂದಿನ ಹೆಣ್ಣು ಮಕ್ಕಳು ಸೀತೆಹೂವನ್ನು ತಮ್ಮ ಮುಡಿಗೇರಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಕಾರಣ, ಹಿರಿಯರ ಪ್ರಕಾರ ಸೀತೆ ವನವಾಸದಲ್ಲಿದ್ದ ಆ ಕಷ್ಟಕರವಾದ ದಿನಗಳಲ್ಲಿ ಸೀತೆ ಹೂವನ್ನು ಮುಡಿದುಕೊಂಡಿದ್ದರಿಂದ ಹೆಣ್ಣು ಮಕ್ಕಳು ಸೀತೆ ಹೂವನ್ನು ಮುಡಿದುಕೊಂಡರೆ ಸಂಕಷ್ಟಕ್ಕೀಡಾಗುತ್ತಾರೆ ಎಂಬ ನಂಬಿಕೆಗಳು ಕಾಡುತ್ತವೆ. ಹೀಗೆ ನಂಬಿಕೆಯಿರುವುದರಿಂದ ಸೀತೆ ಹೂವನ್ನು ಈಗಿನ ಹೆಣ್ಣು ಮಕ್ಕಳು ಮುಡಿದುಕೊಳ್ಳಲು ಅನುಮಾನ ಪಡುತ್ತಾರೆ. ನೋಡಲು ಆಕರ್ಷಕವಾಗಿ ಕಂಡುಬಂದರೂ ಇದನ್ನು ಮನೆಯ ಸುತ್ತ ಮುತ್ತಲು ನೆಟ್ಟು ಕೇವಲ ಆನಂದಿಸಲು ಮಾತ್ರ ಸಾಧ್ಯ!.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *