ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಗಣೇಶೋತ್ಸವ : ಹಿಂದೂ ಸಂಸ್ಕೃತಿಯಲ್ಲಿ ಗಣೇಶನ ವೈಶಿಷ್ಟ್ಯ

Posted on: September 17, 2015

ಭಾರತೀಯ ಸಂಸ್ಕೃತಿಯಲ್ಲಿ ಗಣೇಶನಿಗೆ ಅಗ್ರಸ್ಥಾನವಿದೆ. ಅನೇಕ ಧರ್ಮ ಜಾತಿ, ಜನಾಂಗಕ್ಕೆ ಸೇರಿದವರೂ ಗಣೇಶನನ್ನು ಪೂಜಿಸುತ್ತಾರೆ. ಭಾರತೀಯರಿಗೆ ಗಣೇಶ್ ‘ಯೂನಿವರ್ಸಲ್ ಗಾಡ್’ ಎಂದೇ ಚಿರಪರಿಚಿತ. ಮನುಷ್ಯ ತನ್ನ ನಂಬಿಕೆಗಳ ಮೇಲೆ ಅವಲಂಬಿತನಾಗುವುದು ಸಹಜ. ಯಾವುದೇ ಒಂದು ಕೆಲಸ ಹಮ್ಮಿಕೊಂಡಾಗ ಅದು ನಿರ್ವಿಘ್ನವಾಗಿ ನಡೆಯಬೇಕೆಂಬುದು ಅವನ ಹಂಬಲ. ಇಂದಿಗೂ ಸಮಾಜದಲ್ಲಿ ಕೆಲಸ ಪ್ರಾರಂಭಿಸುವ ನಿರ್ವಿಘ್ನವಾಗಿ ನಡೆಯಲೆಂದು ವಿಘ್ನೇಶ್ವರನನ್ನು ಪೂಜಿಸುವುದು ವಾಡಿಕೆ.

God-Ganesh-2

ಗಣೇಶನ ಭಾವ, ಭಂಗಿ ಹಲವಾರು ಹಾಗೆಯೇ ಕತೆಗಳೂ ಅನೇಕ ನೃತ್ಯ, ವೀರ, ಅಷ್ಟ, ಪಂಚ, ಸಿದ್ಧ-ಬುದ್ಧಿ, ಹೀಗೆ ಹಲವಾರು ಗಣಪತಿಗಳುಂಟು. ದೇವ ಒಬ್ಬನೇ ಆದರೂ ಕರೆಯುವ ಪರಿ ಹಲವು ವಿಧಗಳಿಲ್ಲಿ ಅಷ್ಟೇ. ಹಾಗೆಯೇ ಗಣಪತಿಯನ್ನೊಳಗೊಂಡ ಕತೆಗಳೂ ಹಲವಾರು. ಪುರಾಣಗಳು, ಜಾನಪದ ಕತೆಗಳೂ ಹಲವಾರು. ಪುರಾಣಗಳು, ಜಾನಪದ ಕತೆಗಳು ಏನೇ ಹೇಳಲಿ ಅದೂ ಸಂಸ್ಕೃತಿಯ ಇಂದಿನ ಆಚರಣೆಯಲ್ಲಿ ಗಣಪತಿ ಬ್ರಹ್ಮಚಾರಿ. ವೈಶಿಷ್ಟಪೂರ್ಣ ಕಲ್ಪನೆಯ ಆರ್ಕಣೆಯ ದೈವ. ‘ಗಣ’ಗಳ ‘ಒಡೆಯ’ ಎಂಬುದನ್ನು ವಿದ್ವಾಂಸರೂ, ಪುರಾಣಗಳೂ, ಬೌದ್ಧರೂ ಗಣಪತಿಯನ್ನು ಸುತ್ತಿಸಿರುವುದು ಕೆಲವು ಶಾಸನಗಳಿಂದ ತಿಳಿಯುತ್ತದೆ. ಗಣಪತಿಯನ್ನು ಜೈನರು ‘ಜೀನೇಂದ್ರ ಶಾಸನ ರಕ್ಷಕ’ ಎಂದು ಭಾವಿಸಿದ್ದಾರೆ. ಅವರ ಪ್ರಕಾರ ಗಣಪತಿ ದೇವರಲ್ಲದಿದ್ದರೂ ವಿಘ್ನಗಳ ನಿವಾರಕ ಎಂಬ ಭಾವನೆಯಂತೂ ಇದೆ.

ಭಾರತದೇಶದಲ್ಲೇ ಅಲ್ಲದೆ ಜಪಾನ್, ಸಿಂಹಳ, ನ್ಯೂಯಾರ್ಕ್, ಕಾಂಬೋಡಿಯಾ ಮುಂತಾದ ಕಡೆಗಳಲ್ಲಿ ಗಣಪತಿಯ ಆರಾಧನೆಯನ್ನು ಕಾಣಬಹುದು. ಗಜಮುಖ ಆನೇಕ ಕಡೆಗಳಲ್ಲಿ ಅನೇಕ ರೀತಿಯಲ್ಲಿ ವೈಭವಯುತವಾಗಿ ಪೂಜಿಸುವುದುಂಟು. ಗಣೇಶ ವಿಶ್ವವ್ಯಾಪ್ತಿ ಎಂದೂ ತಪ್ಪಲ್ಲ. ವೇಧಗಳಲ್ಲಿ ಗಣಪತಿ ಸುತ್ತಿ ಪ್ರಾರಂಭವಾಗುವುದೇ ‘ಗಣಾನಾಂತ್ವಾ ಗಣಪತಿ ಹವಾಮಯೀ ಕವಿಂಕವೀನಾಂ ಮುಪಪುಶ್ರಮಸ್ತವಂ..’ ಎಂದು. ಹೀಗೆ ವೇದಗಳ ಕಾಲದಿಂದ ಇಂದಿನವರೆಗೂ ಗಣಪತಿಯ ಆರಾಧನೆ ಮತ್ತು ಜನಪ್ರಿಯತೆ ಗಣೇಶನ ಮಹಿಮೆಗೊಂದು ಸಾಕ್ಷಿಯಾಗಿದೆ.

ಕವಿಗಳು ತಮ್ಮ ಕಾವ್ಯದ ಆರಂಭದಲ್ಲಿ ತಮ್ಮ ಕುಲದೈವಕಕೆ ಗೌರವ ಸಲ್ಲಿಸಿ ಗಣಪತಿಯನ್ನು ಸ್ತುತಿಸಿರುವುದು ಹಲವಾರು ಸಾಹಿತ್ಯ ಪ್ರಕಾರದಲ್ಲಿ ಕಾಣಬಹುದು. ಮಾರ್ಕಂಡೇಯ ರಾಮಾಯಣದಲ್ಲಿ ಗಣಪತಿಯನ್ನು ನವರಸಗಳಿಂದ ವರ್ಣಿಸಿರುವ ರಿತಿ ಅಮೋಘವಾಗಿದೆ. ಗಣಪತಿಯ ಕಿರೀಟಗಳು ಶೃಂಗಾರ ರಸವನ್ನು ಕವಿಗಳ ಅಲುಗಾಟ ಹಾಸ್ಯರಸನ್ನು ಪರಶಪಾರಂಗಳು ರೌದ್ರರಸವನ್ನೂ, ಸುರಿಯುವ ಮದಜಲವು ಕರುಣರಸವನ್ನು ಸೊಂಡಿಲಿನ ತುಂತುರು ಹನಿ ಶಾಂತರಸವನ್ನು, ಹೊಟ್ಟೆಗೆ ಸುತ್ತಿದ ಹಾವು ಭಯರಸವನ್ನು, ಮುರಿದು ದಂತವು ಭೀಬತ್ಸವನ್ನು ಸೂಸುತ್ತಿರಲು ‘ನವರಸ’ ಭರಿತನಾದ ಗಣಪತಿಯೂ ನಮಗೆ ಬುದ್ದಿಯನ್ನು ನೀಡಲಿ ಎನ್ನುತ್ತಾನೆ ಕವಿ. ಅನುಭವ ಶಿಖಾಮಣಿಯಲ್ಲಿ ಒಂದು ಪ್ರಾರ್ಥನೆಯಲ್ಲಿ ಗಣಪತಿಯನ್ನು ಒಬ್ಬಂಟಿಗನಾಗಿ ಕವಿ ಕಂಡಿಲ್ಲ. ಗಣಪ-ಇಲಿ-ಹಾವು ಹೀಗೆ ಮೂರು ಚಿತ್ರಗಳನ್ನು ಇಡಿಯಾಗಿ ನೋಡಿ ವರ್ಣಿಸಿದ್ದಾರೆ. ಅದೊಂದು ರೀತಿಯ ಚಮತ್ಕಾರ ಶ್ಲೋಕ.

God-Ganesh-3

ಗಣಪತಿ ಒಬ್ಬೊಬ್ಬ ಕವಿಗೆ ಒಂದೊಂದು ರೀತಿಯಲ್ಲಿ ಕಾಣಿಸಿಕೊಂಡಿರುವುದು ಸಾಹಿತ್ಯ ಕ್ಷೇತ್ರದ ವೈಶಿಷ್ಟ್ಯ. ಷಡಕ್ಷರ ಕವಿಗೆ ಮಂದಾರ ಪರ್ವತದಂತೆ ಕಾಣಿಸಿದರೆ, ಲಕ್ಷ್ಮೀಶನಿಗೆ ಉದಯಾಚಲದಂತೆ ಕಾಣಿಸಿಕೊಂಡಿದ್ದಾನೆ. ಹೀಗೆ ಹಿಂದಿನ ಮತ್ತು ಇಂದಿನ ಕವಿಗಳಿಗೆ ಗಣಪತಿ ಹಲವಾರು ದೃಷ್ಟಿಯಲ್ಲಿ ಕಾಣಿಸಿಕೊಂಡು ಕಾವ್ಯ ಪ್ರಪಂಚದಲ್ಲಿ ರಾರಾಜಿಸಿದ್ದಾನೆ. ಕವಿಗಳಲ್ಲಿ ಆನೇಕರು ಆನೇಕ ವಿಧದಲ್ಲಿ ಸ್ತುತಿಸಿರುವುದನ್ನು ಕಾಣಬಹುದು. ವ್ಯಾಸಮಹರ್ಷಿ ಮಹಾಭಾರತವನ್ನು ರಚಿಸುವಾಗ ಶೀಘ್ರವಾಗಿ ಬರುವಾಲೋಸುಗ ಗಣಪತಿಯನ್ನು ಪ್ರಾರ್ಥಿಸಿ ಲಿಪಿಕಾರ ನನ್ನಾಗಿಟ್ಟುಕೊಂಡು ಮಹಾಭಾರತದ ಕೃತಿಯ ಸೃಟ್ಟಿಗೆ ಕಾರಣವಾದ. ಲಿಪಿ ಬೇರೆಯಾದರೂ ‘ಶೀಘ್ರಲಿಪಿ’ ಯಾಗಿ ಬರೆದ ಗಣಪನನ್ನು ಇಂದಿನ ಶೀಘ್ರಲಿಪಿಗಾರರು ತಮ್ಮ ಆರಾಧ್ಯದೈವನೆಂದು ಪೂಜಿಸುತ್ತಾರೆ. ಕವಿ ಕುಮಾರವ್ಯಾಸ ತನ್ನ ನೇಮಿಸಿ ಭಾರತದಲ್ಲಿ ಗಣಪತಿಯನ್ನು ವರ್ಣಿಸಿದ್ದಾನೆ. ಕುವೆಂಪು, ಬೇಂದ್ರೆ, ಪು.ತಿ.ನ., ಜಿ.ಪಿ.ರಾಜರತ್ನಂ ಅವರಿಂದ ಇಂದಿನ ಯುವಕವಿಗಳವರೆಗೆ ಆನೇಕರು ಗಣಪತಿ ತಮ್ಮ ಕೃತಿಯ ಪ್ರಾರಂಭಿಕ ಚರಣವನ್ನು ಅರ್ಪಿಸಿದ್ದಾರೆ.

ಸಂಸ್ಕೃತ ಸ್ತೋತ್ರ ಸಾಹಿತ್ಯದಲ್ಲಿಯೂ ಗಣಪತಿ ವರ್ಣನೆ ಕಂಡು ಬರುತ್ತದೆ. ದಾಸರ ಪಂಥದಲ್ಲಿಯೂ ಗಣಪ ಅಗ್ರಗಣ್ಯ. ಗಜವದನಾ ಬೇಡುವೆ..ಗೌರಿ ತನಯ ತ್ರಿಜಗ ವಂದಿಸನೆ, ಸುರವರ ಪೊರೆವನೆ..’ ಎಂದರೆ, ಜಗನ್ನಾಧಿದಾಸರು ಹರಿಕಥಾಮೃತ ಸಾರದಲ್ಲಿ ಗಣಪತಿಯ ಸ್ತುತಿಗೆಂದು ವಿಶಿಷ್ಟ ಸರದಿಯನ್ನು ಮೀಸಲಾಗಿಟ್ಟಿದ್ದಾರೆ. ಹೀಗೆ ಅನೇಕ ದಾಸರು ಗಣಪನಿಗೆ ಅಗ್ರಸ್ಥಾನ ನೀಡಿಕೊಂಡಿದ್ದಾರೆ. ಜನಪದ ಸಾಹಿತ್ಯದಲ್ಲಿಯೂ ಗಣಪನ ವರ್ಣನೆ ವೈವಿಧ್ಯಪೂರ್ಣವಾಗಿದೆ. ಶರಣು ಶರಣುವಯ್ಯ ಗಣನಾಯ್ಕ, ನಮ್ಮ ಕರುಣದಿಂದಲಿ ಕಾಯೋ ಗಣನಾಯ್ಕ, ನಮ್ಮ ಕರುಣದಿಂದಲಿ ಕಾಯೋ ಗಣನಾಯ್ಕ..ಹಾಡು ಇಂದಿಗೂ ಪ್ರಚಲಿತದಲ್ಲಿದೆ. ಬಯಲಾಟ ಪ್ರಾರಂಭವಾಗುವುದು ಗಣಪತಿಯೂ ಆಗಮನದಿಂದಾದರೆ ಯಕ್ಷಗಾನದಲ್ಲಿ ‘ಗಣೇಶಸ್ತವನ’ ಒಳಗೊಂಡಿರುವುದನ್ನು ಕಾಣಬಹುದು.

ಗಣೇಶನ ಶಿಲ್ಪಗಳು ಅಪಾರ ಸುಂದರ ಹಾಗೂ ಅದ್ಭುತ. ಗಣಪನ ಶಿಲ್ಪಗಳನ್ನು ಹೆಚ್ಚಾಗಿ ಹೊಯ್ಸಳರ ಶಿಲ್ಪಕಲೆಯಲ್ಲಿ ಕಾಣಬಹುದು. ಕರ್ನಾಟಕದ ಇತಿಹಾಸವನ್ನು ಅವಲೋಕಿಸಿದಾಗ ಸಂಖ್ಯೆ ಹಗೂ ವೈವಿಧ್ಯತೆಯಲ್ಲಿ ಹೊಯ್ಸಳರ ಯುಗದಲ್ಲಿ ಗಣೇಶನ ಬಿಂಬಗಳನ್ನು ಚಿನ್ನದ ಬೆಳಕಲ್ಲಿ ಇರುವುದನ್ನು ಕಾಣಬಹುದು. ಆನೇಕ ಕಡೆ ಬಯಲು ಗಣಪ ಇರುವುದು ಕಾಣಬಹುದು. ಅದಕ್ಕೆ ಕಾರಣಗಳು ಆಯಾ ಕ್ಷೇತ್ರದ ಸಾಮಾಜಿಕ ಪೌರಾಣಿಕ ಹಿನ್ನೆಲೆ ಇದೆ. ಅಂತಹದರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಬಯಲು ಗಣಪ ಏಕಶಿಲಾ ವಿಗ್ರಹವೂ ಒಂದು. ಆ ಹಣಪನಿಗೆ ಗುಡಿ-ಗೋಪುರ ನಿರ್ಮಿಸಲು ವಿಫಲರಾದ ಸಂಗತಿಯಲ್ಲಿ ಅಲ್ಲಿಯ ಜನ ಹೇಳುತ್ತಾರೆ. ಹೀಗಾಗಿ ಇಂದಿಗೂ ಆ ಗಣಪ ಬಯಲಿನಲ್ಲಿ ನಿಂತಿದ್ದಾನೆ. ಹೀಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೆ ಆದ ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿರುವ ಗಣೇಶನನ್ನು ಆರಾಧಿಸದವರು ಯಾರು?

God-Ganesh-1

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *