ತ್ಯಾಗ ಬಲಿದಾನಗಳ ಸಂಕೇತ ಬಕ್ರೀದ್ : ಎಲ್ಲೆಲ್ಲೂ ಹಬ್ಬದ ಸಡಗರ

Posted on: September 25, 2015

ಮಡಿಕೇರಿ :

ಬಕ್ರೀದ್ ಇದು ಮುಸ್ಲಿಮರ ಎರಡು ಪ್ರಮುಖ ಹಬ್ಬಗಳಲ್ಲಿ ಶ್ರೇಷ್ಠವಾದದು. ಇದನ್ನು ಈದುಲ್ ಅಝ್ ಹಾ ಎಂದು ಕರೆಯಲಾಗುತ್ತದೆ. ಮುಸ್ಲಂ ದಿನದರ್ಶಿಯ ಕೊನೆಯ ತಿಂಗಳಾದ ದುಲ್ ಹಜ್ಜ್ 10 ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಮತ್ತೊಂದು ಹಬ್ಬ ರಂಝಾನ್ ಎಂದೇ ಜನನಜಿತವಾಗಿರುವ ಈದಿಲ್ ಫಿತರ್ ಹಬ್ಬ. ಬಕ್ರೀದ್ ಹಬ್ಬ ರಂಝಾನ್ ಹಬ್ಬ ಕಳೆದ ಎರಡು ತಿಂಗಳು ಹತ್ತು ದಿನಗಳ ಬಳಿಕ ಬರುತ್ತದೆ. ಬಕ್ರೀದ್ ತ್ಯಾಗ ಮತ್ತು ಬಲಿದಾನಗಳ ಹಬ್ಬ. ಈ ಹಬ್ಬದ ಹಿಂದೆ ನಾಲ್ಕು ಸಾವಿರ ವರ್ಷಗಳ ಹಿಂದಿನ ಸಂಬಂಧವೊಂದಿದೆ. ಸತ್ಯ ಸಂದರಾದ ದೈವಭಕ್ತ ಅಲ್ಲಾಹನ ಮಿತ್ರನೆಂದೆ ಬಿಂಬಿತವಾಗಿರುವ ಪ್ರವದಿ ಇಬ್ರಾಹಿಂ(ಅಲೈಹಿಸ್ಸಾಂ) ಸಾರಾ ದಂಪತಿಗಳಿಗೆ ಬಹಳ ವರ್ಷ ಮಕ್ಕಳಿರಲಿಲ್ಲ. ಬಳಿಕ ಹಾಜರಾ ಎಂಬವರನ್ನು ವಿವಾಹಿತರಾದ ಇಬ್ರಾಹಿಂ ಅವರಿಗೆ ಗಂಡು ಮಗುವಿಗೆ ಭಾಘ್ಯ ದೊರಕುತ್ತದೆ. ಹುಟ್ಟಿದ ಮಗುವಿಗೆ ಅವರು ಇಸ್ಲಾಈಲ್ ಎಂದು ನಾಮಕರಣ ಮಾಡುತ್ತಾರೆ. ಆಪುಟ್ಟ ಕುಟುಂಬ ಸಂತಸದ ಸಾಗರದಲ್ಲಿ ತೇಲಾಡಿತು.

3

ಸರ್ವಶಕ್ತನಾದ ಅಲ್ಲಾಹನು ಹೇಳಿದ್ದೆಲ್ಲವನ್ನೂ ಶಿರಸಾವಹಿಸಿ ಪಾಲಿಸುತ್ತಿದ್ದವರು ಪ್ರವಾದಿ ಇಬ್ರಾಹಿಂ. ಮಗು ಬೆಳೆಯುತ್ತಾ ಬಂದಂತೆ ಸದ್ಗುಣ ಸಂಪನ್ನತೆಯನ್ನು ಮೈಗೂಡಿಸಿಕೊಳ್ಳುತ್ತದೆ. ಕಂದ ಇಸ್ಮಾಈಲ್ ಇನ್ನೂ ಬಾಲಕನಾಗಿರುವಾಗಲೇ ಪ್ರವಾದಿ ಇಬ್ರಾಹಿಂ ಅವರಿಗೆ ದೈವ ಸಂದೇಶವೊಂದು ಸಿಗುತ್ತದೆ. ಪತ್ನಿ ಬೀವಿ ಹಾಜರಾ ಮತ್ತು ಕಂದ ಇಸ್ಮಾಈಲ್‌ರನ್ನು ಮರುಭೂಮಿಯಲ್ಲಿ ತೊರೆದು ಬರುವಂತೆ ದೈವಾಜ್ಞೆಯಾಗುತ್ತದೆ. ಪ್ರವಾದಿ ಇಬ್ರಾಹಿಂ ಅವರು ಅಲ್ಲಾಹನ ಆದೇಶವನ್ನು ಪಾಲಿಸುತ್ತಾರೆ. ಮಡದಿ ಮತ್ತು ಮಗುವನ್ನು ನಿರ್ಜನ ಮರುಭೂಮಿಯಲ್ಲಿ ಬಿಟ್ಟು ಬರುತ್ತಾರೆ. ಬಳಿಕ ಪವಿತ್ರ ಕಬಾಲಯದಲ್ಲಿ ಭಗವಂತನಲ್ಲಿ ಪ್ರಾರ್ಥಿಸುತ್ತಾ ಮಡದಿಗೂ-ಮಗುವಿಗೂ ರಕ್ಷಣೆ ನೀಡು ಎಂದು ಕೇಳಿಕೊಳ್ಳುತ್ತಾರೆ.

ಇತ್ತ ಮರುಭೂಮಿಯಲ್ಲಿ ಸುಡು ಬಿಸಿಲಿನಲ್ಲಿ ಬೆಂದು ಬಳಲಿದ ಬೀವಿ ಹಾಜರಾ ಹನಿ ನೀರಿಗಾಗಿ ಪರಿತಪಿಸುತ್ತಾರೆ. ಮಗು ಕೂಡ ಬಾಯಾರಿ ನೀರಿಗಾಗಿ ಅಳುತ್ತಿರುತ್ತದೆ. ಅಲ್ಲೇ ಅನತಿ ದೂರದಲ್ಲಿ ಸಫಾ ಮತ್ತು ಮರ್ವಾ ಎಂಬ ಬೆಟ್ಟಗಳಿರುತ್ತದೆ. ಹಾಜರಾ ಅವರು ನೀರನ್ನು ಅರಸುತ್ತಾ ಸಫಾ-ಮರ್ವಾಗಳ ನಡುವೆ ಓಡುತ್ತಾರೆ. ಎಲ್ಲೂ ನೀರು ಕಾಣಾದಾದಾಗ ಮತ್ತಷ್ಟು ವಿಚಲಿತಾರಾಗುತ್ತಾರೆ. ಅಲ್ಲಾಹುನ ಮೊರೆ ಹೋಗುತ್ತಾರೆ. ಮಗು ಇಸ್ಮಾಈಲ್ ನೀರಿಗಾಗಿ ಹಾತೋರೆಯುತ್ತಾ ಕಾಲು ಬಡಿಯುತ್ತಿರುತ್ತದೆ. ಹಾಜರಾ ದಿಕ್ಕು ಕಾಣದೆ ಮಗುವಿನ ಬಳಿಗೆ ಧಾವಿಸಿದಾಗ ಅವರಿಗೆ ಅಲ್ಲೊಂದು ಅದ್ಬುತ ಗೋಚರವಾಗುತ್ತದೆ. ತನ್ನ ಕಂದ ಕಾಲು ಬಡಿದ ಸ್ಥಳದಲ್ಲಿ ನೀರಿನ ಬುಗ್ಗೆ ಮೇಳೇಳುತ್ತದೆ. ಅದನ್ನು ಕಂಡ ಹಾಜರಾ ಸಂತುಷ್ಟರಾಗುತ್ತಾರೆ. ಮಗುವಿಗೆ ನೀರು ಕುಡಿಸಿ ತಾನೂ ನೀರು ಕುಡಿದು ದಣಿವಾರಿಸಿಕೊಳ್ಳುತ್ತಾರೆ. ಬಳಿಕ ನೀರನ್ನು ನಿಲ್ಲುವಂತೆ ಝಂ. . .ಝಂ ಎಂದು ಹೇಳತ್ತಾರೆ. ನೀರಿನ ಬುಗ್ಗೆಯ ರಭಸ ಶಾಂತವಾಗುತ್ತದೆ. ಬೇಕಾದಷ್ಟು ನೀರು ಹರಿಯುತ್ತದೆ. (ಅಂದಿನ ನೀರು ಇಂದಿಗೂ ನಿಲ್ಲದೆ ಹರಿಯುತ್ತಲೇ ಇದ್ದರೂ ಅದಕ್ಕೆ ಬೇಕಾದ ಎಲ್ಲಾ ತಾಂತ್ರಿಕ ಆಧುನಿಕ ವ್ಯವಸ್ಥೆಗಳನ್ನು ಇಂದು ಮಾಡಲಾಗಿದೆ) ಇದು ಇಡಿಯ ಜಗತ್ತಿಗೆ ಪವಿತ್ರ ಜಲವಾಗಿದೆ. ಜಗತ್ತಿನ ಉದ್ದಗಲದಿಂದ ಪ್ರತಿವರ್ಷ ಮಕ್ಕಾಕ್ಕೆ ತೆರಳುವ ಭಕ್ತಾದಿಗಳು ಈ ಜವವನ್ನು ಬೇಕಾದಷ್ಟು ಕುಡಿದು ತಮ್ಮ ಮನೆಗಳಿಗೂ ತರುವ ಪದ್ಧತಿ ಇಂದಿಗೂ ಮುಂದುವರಿದಿದೆ.

2

ಪ್ರವಾದಿ ಇಬ್ರಾಹಿಂ ಅವರಿಗೆ ಕನಸೊಂದು ಬೀಳುತ್ತದೆ. ಇಬ್ರಾಹಿಂ ನಿಮ್ಮ ಮಗನನ್ನು ನನಗಾಗಿ ಬಲಿ ಅರ್ಪಿಸಿ. ಅಲ್ಲಾಹನ ಆದೇಶವನ್ನು ಉಲ್ಲಂಘಿಸಲು ಸಿದ್ದರಿಲ್ಲದ ಇಬ್ರಾಹಿಂ ಅವರು ಮಗನನ್ನು ಕರೆದುಕೊಂಡು ಬಲಿ ಅರ್ಪಣೆಗೆ ಮುಮದಾಗುತ್ತಾರೆ. ಈ ಸಂದರ್ಭದಲ್ಲಿ ಇಬ್ರಾಹಿಂ ಅವರ ದೈವಭಕ್ತಿಗೆ ಮೆಚ್ಚಿದ ಅಲ್ಲಾಹುನು ಸ್ಥಳದಲ್ಲೇ ಒಂದು ಕುರಿಯನ್ನು ಪ್ರತ್ಯಕ್ಷಗೊಳಿಸುತ್ತಾನೆ. ಮಗನ ಬದಲಿಗೆ ಕುರಿಯನ್ನು ಕುಯ್ಯುವಂತೆ ದೈವಾದೇಶವಾಗುತ್ತದೆ. ಪ್ರವಾದಿ ಇಬ್ರಾಹಿಂ ಆಜ್ಞೆ ಪಾಲಿಸುತ್ತಾರೆ. ಆ ಸ್ಮರಣಾರ್ಥ ಮುಸ್ಲಿಮರು ಈ ದಇನ ಬಕ್ರೀದ್ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ. ಸೌದಿ ಅರೇಬಿಯಾದಲ್ಲಿ ನಿನ್ನೆ ಹಬ್ಬಾಚರಣೆ ನಡೆದಿದ್ದು, ವಿಶ್ವದ ಉಳಿದೆಲ್ಲ ಕಡೆಗಳಲ್ಲಿ ಇಂದು ಹಬ್ಬವನ್ನು ಆಚರಿಸಲಾಗುತ್ತಿದೆ.

ಹಬ್ಬದ ಅಂಗವಾಗಿ ಮುಂಜಾನೆ ಬೇಗನೆ ಮಿಂದು ಹೊಸ ಉಡುಪು ಧರಿಸಿ ಸುಗಂಧ ಸಿಂಪಡಿಸಿ ಎಲ್ಲರೂ ಮುಸೀದಿಗೆ ತೆರಳುತ್ತಾರೆ. ಮಸೀದಿಗಳಲ್ಲಿ ಬೆಳಿಗ್ಗೆ ವಿಶೇಷ ನಮಾಝ್‌ಗಳು (ಈದ್ಗಾದಲ್ಲೂ ಪ್ರಾರ್ಥನೆ) ನಡೆಯುತ್ತದೆ. ಬೆಳಿಗ್ಗೆ ಆಡು-ಕುರಿ ಮುಂತಾದ ಪ್ರಾಣಿಗಳನ್ನು ಕುಯ್ದು ಮಾಂಸದಾನ(ಕುರ್ಬಾನಿ) ಮಾಡಲಾಗುತ್ತದೆ.

ಹಬ್ಬದ ದಿನ ಬಡವ-ಬಲ್ಲಿದರೆಲ್ಲರ ಮನೆಗಳಲ್ಲೂ ಮಾಂಸದೂಟ ಇದ್ದೇ ಇರುತ್ತದೆ. ಇದ್ದವರು ಇಲ್ಲದವರಿಗೆ ಸಹಾಯ ಮಾಡುತ್ತಾರೆ. ದೂರ ಸರಿದಿರುವ ಕೌಟುಂಬಿಕ ಬಾಂಧವ್ಯದ ಬೆಸುಗೆಗೂ ಇದು ಶುಭ ದಿನವಾಗಿದೆ. ಬಹಳ ಕಾಲ ಕಾರಣಾಂತರಗಳಿಂದ ಮುನಿಸಿಕೊಂಡಿರುವವರು ಮತ್ತೆ ಒಂದು ಒಂದು ಕೂಡುತ್ತಾರೆ. ಹಬ್ಬದಂದು ಈದ್ಗಾ ಮೈದಾನಕ್ಕೆ ತೆರಳುವ ಮುಸ್ಲೊಂ ಬಾಂಧವರು ಅಗಲಿದ ತಮ್ಮ ಬಂಧುಗಳ ಪರಲೋಕ ಉನ್ನತಿಗಾಗಿ ಪ್ರಾರ್ಥಿಸುತ್ತಾರೆ. ಬಂಧುಮಿತ್ರರು ಪರಸ್ಪರ ಹಸ್ತದಾನ, ಆಲಿಂಗನ ಮಾಡಿಕೊಳ್ಳುವ ಮೂಲಕ ಹಬ್ಬದ ಸಂದೇಶಗಳನ್ನು ಹಂಚಿಕೊಳ್ಳುತ್ತಾರೆ.

ಕೊಡಗು ಜಿಲ್ಲೆಯಲ್ಲಿ ಈ ಬಾರಿ ಶಾಫಿ ಹನಫಿ ಎಂಬ ಬೇಧವಿಲ್ಲದೆ ಎಲ್ಲಾ ಮುಸ್ಲಿಂ ಬಂಧುಗಳು ಒಂದೇ ದಿನ ಹಬ್ಬ ಆಚರಿಸುತ್ತಿರುವುದು ಸಂತಸಕರ ಸಂಗತಿ. ಬಕ್ರೀದ್ ಎಂಬ ಈದಿಲ್ ಅಝ್ ಹಾ ನಾಡಿನ ಸರ್ವ ಜನತೆಗೆ ಸನ್ಮಂಗಳವನ್ನು ತರಲಿ ಎಂದು ಹಾರೈಸೋಣ.

1

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *