ಬ್ರೇಕಿಂಗ್ ನ್ಯೂಸ್
ಮಳೆ ಹಾನಿ ನಿಖರ ಮಾಹಿತಿ ಒದಗಿಸಲು ಪಿ.ಐ.ಶ್ರೀವಿದ್ಯಾ ಸೂಚನೆ , ಜುಲೈ 19 ರಂದು ಮಡಿಕೇರಿಗೆ ಮುಖ್ಯಮಂತ್ರಿ ಭೇಟಿ ಸಾ.ರಾ.ಮಹೇಶ್ , ಜು.19 ರಂದು ಕೊಡಗು ಜಿಲ್ಲೆಗೆ ಕುಮಾರ ಸ್ವಾಮಿ – ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಸಂಕೇತ್ , ದಿನೇಶ್ ಗುಂಡುರಾವ್‍ಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದಿಂದ ಅಭಿನಂದನೆ , ಕೊಡಗಿನ ಧ್ವನಿಯಾದ ಫತ್ತಾಹ್ ಸಾಮಾಜಿಕ ಕಳಕಳಿ ಶ್ಲಾಘನಾರ್ಹ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮೆಚ್ಚುಗೆ , ಸುಂದರನಗರ ಬಳಿ ಪಂಚಾಯಿತಿ ವತಿಯಿಂದ ಚರಂಡಿ ಸ್ವಚ್ಚತಾ ಕಾರ್ಯಕ್ರಮ , ಸಧ್ಯದಲ್ಲಿಯೇ ಕೊಡಗಿಗೆ ಭೇಟಿ ಕೊಡವ ಸಾಹಿತ್ಯ ಅಕಾಡೆಮಿ ನಿಯೋಗಕ್ಕೆ ಸಿಎಂ ಭರವಸೆ , ಶಿಕ್ಷಕಿ ಲಾಸ್ಯ ತೇಜಸ್ವಿ ಮರಣ ಪ್ರಕರಣ – ಸಂಘ ಸಂಸ್ಥೆಗಳಿಂದ ಪ್ರತಿಭಟನೆ , ಪ್ರವಾಸಿ ಸ್ಥಳಗಳಿಗೆ ಬಸ್ ಸೌಲಭ್ಯ ಕಲ್ಪಿಸಿ ಸುನಿಲ್ ಸುಬ್ರಮಣಿ , ಮೈಸೂರು-ತಲಚೇರಿ ರೈಲ್ವೆ ಮಾರ್ಗ ಸ್ಥಗಿತಕ್ಕೆ ಸುನಿಲ್ ಸುಬ್ರಮಣಿ ಒತ್ತಾಯ ,

ಮೇರಿ ಮಾತೆಯ ಜನ್ಮಾ ದಿನಾಚರಣೆ

Posted on: September 8, 2015

ಮಡಿಕೇರಿ:

ಸೆ. 8 ಮೇರಿ ಮಾತೆಯ ಜನ್ಮದಿನವನ್ನಾಗಿ ಪ್ರಪಂಚಾದಾದ್ಯಂತ ಇರುವ ಎಲ್ಲಾ ಕ್ರಿಶ್ಚಿಯನ್ನರು ಆಚರಿಸುತ್ತಾರೆ. ಮೇರಿ ಮಾತೆಯ ಜನ್ಮ ದಿನದ ಬಗ್ಗೆ ಯಾವುದೇ ಪೂರ್ವ ದಾಖಲೆಗಳಿಲ್ಲದಿದ್ದರೂ ರೋಮನ್ ಕ್ಯಾಥೋಲಿಕ್ ಮತ್ತು ಆಂಗ್ಲಿಕನ್ ಧರ್ಮಾಚರಣೆಯ ಕ್ಯಾಲೆಂಟರ್ ನಲ್ಲಿ ಮೇರಿ ಮಾತೆಯ ಬಗ್ಗೆ ಉಲ್ಲೇಖವಿರುವುದರಿಂದ ಈ ದಿನವನ್ನು ಮೇರಿ ಮಾತೆಯ ಜನ್ಮ ದಿನವನ್ನಾಗಿ ಆಚರಿಸಲಾಗುತ್ತದೆ.

ಸೆ. 1 ರಿಂದ ಸೆ. 8 ರವರೆಗೆ ಅಂದರೆ ಸತತ 8 ದಿನಗಳ ಕಾಲ ಎಲ್ಲಾ ರೋಮನ್ ಕ್ಯಾಥೋಲಿಕ್ ಚರ್ಚ್ ಗಳಲ್ಲಿ ನವೆನೋ ಎಂಬ ವಿಶೇಷ ಪೂಜೆ ಪ್ರಾರ್ಥನೆ ಜರುಗುತ್ತವೆ. ನಂತರ ಮಕ್ಕಳು ಮೇರಿ ಮಾತೆಗೆ ಹೂವುಗಳನ್ನು ಅರ್ಪಿಸಿ ಪ್ರಾರ್ಥಿಸುತ್ತಾರೆ. ೮ನೇ ದಿನ ಅಂದರೇ ಸೆ.8 ರಂದು ಮುಂಜಾನೆಯಿಂದಲೇ ಬಲಿ ಪೂಜೆಗಳು ನಡೆಯುತ್ತವೆ. ಹುತ್ತರಿ ಹಬ್ಬದಂತೆ ಬೆಳೆಯನ್ನು ಮಂತ್ರಿಸಿ ಪ್ರಾರ್ಥಿಸುವುದು ವಿಶೇಷ. ಆದರೆ ಕೊಡಗಿನಾದ್ಯಂದ ಈ ವೇಳೆಗೆ ಪೈರು ಬರದಿರುವ ಹಿನ್ನೆಲೆ ವಿಶೇಷ ಭತ್ತದ ಕದಿರನ್ನು ಮಂಗಳೂರಿನಿಂದ ತರಿಸಲಾಗುತ್ತದೆ. ಈ ದಿನದಂದು ಮದ್ಯ ಮಾಂಸಾಹಾರ ತ್ಯೆಜಿಸಿ ಪ್ರಾರ್ಥನೆ ಮಾಡುವುದು ವಿಶೇಷವಾಗಿದೆ. ಪ್ರಾರ್ಥನೆಯ ನಂತರ ಚರ್ಚ್‌ಗಳಲ್ಲಿ ಮಧ್ಯಾಹ್ನದ ಭೋಜನವನ್ನು ಏರ್ಪಡಿಸಲಾಗುತ್ತದೆ.

M M-1 M-2

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *