ಬ್ರೇಕಿಂಗ್ ನ್ಯೂಸ್
ಧಗಧಗನೆ ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್ – ಓರ್ವ ಸಜೀವ ದಹನ 5ಕ್ಕೂ ಹೆಚ್ಚು ಮನೆಗಳು ಭಸ್ಮ , ವಸತಿ ರಹಿತ ಮತ್ತು ನಿವೇಶನ ರಹಿತರಿಂದ ಗ್ರಾ.ಪಂನಲ್ಲಿ ಅರ್ಜಿ ಸಲ್ಲಿಕೆ , ಸರಕಾರಿ ಆದೇಶದಲ್ಲೇ ಲೋಪ…! ಕೊಡಗು ಜಿಲ್ಲೆಯ ಬದಲಿಗೆ ಮಡಿಕೇರಿ ಜಿಲ್ಲೆ , ಗಾಳಿಬೀಡು ಶಿಕ್ಷಕರಿಗೆ ಸನ್ಮಾನ  ಸರಕಾರಿ ಶಾಲೆಗಳ ಸಾಧನೆಗೆ ಶಿಕ್ಷಕರ ಪರಿಶ್ರಮವೇ ಕಾರಣ ಲೆಕ್ಕಪರಿಶೋದಕ ಟಿ.ಕೆ.ಸುಧೀರ್ ಅಭಿಪ್ರಾಯ , ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆಗೆ ಪಿತೂರಿ ಸಂಘಟನಾ ಕಾರ್ಯದರ್ಶಿ ಧರ್ಮಪ್ಪ ಆರೋಪ , ಪೌರಕಾರ್ಮಿಕರಿಗೆ ಪ.ಪಂ ಅಧ್ಯಕ್ಷರಿಂದ ರೈನ್ ಕೋಟ್ ವಿತರಣೆ , ಚಲಿಸುತ್ತಿದ್ದ ವಾಹನದ ಮೇಲೆ ಮರ ಬಿದ್ದು ಕಾರ್ಮಿಕ ಸಾವು , ರೈತರ ಸಾಲ ಎಷ್ಟು ಕೋಟಿ ಇದ್ದರೂ ಸರಿ ಸಾಲ ಮನ್ನಾ ಮಾಡಿಯೇ ತೀರುತ್ತೇನೆ ಸಿಎಂ ಕುಮಾರಸ್ವಾಮಿ , ಜೂ.20 ರಂದು ಉದ್ಯೋಗ ಮೇಳ , ಜೂ.21 ರಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ,

ಅ.18 ರಿಂದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ

Posted on: October 13, 2015

ಮಡಿಕೇರಿ :

ನಾಡಹಬ್ಬ ದಸರಾ ಅಂಗವಾಗಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು ಅಕ್ಟೋಬರ್ 18ರಂದು ಕೂಡಿಗೆ ಸೈನಿಕ ಶಾಲೆಯ ಪ್ರಾಂಶುಪಾಲ ಕ್ಯಾಪ್ಟನ್ ಬೆನ್ ಹೆಚ್. ಬೆರ್ಸನ್ ಉದ್ಘಾಟಿಸಲಿದ್ದಾರೆ ಎಂದು ನಗರ ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಸದಾ ಮುದ್ದಪ್ಪ ತಿಳಿಸಿದರು.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ದಸರಾ ಸಮಿತಿ ಅಧ್ಯಕ್ಷ ಶ್ರೀಮತಿ ಬಂಗೇರಾ ವಹಿಸಲಿದ್ದು, ಜಿಲ್ಲಾಧಿಕಾರಿ ಮೀರ್ ಅನೀಸ್ ಅಹ್ಮದ್ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಖಾರಿ ಸತೀಶ್‌ಕುಮಾರ್, ದಸರಾ ಸಮಿತಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಅಕ್ಟೋಬರ್ 17ರಂದು ನಡೆಯಲಿರುವ ಮ್ಯಾರಥಾನ್‌ಗೆ ಶಕ್ತಿ ದಿನಪತ್ರಿಕೆ ಪ್ರಧಾನ ವ್ಯವಸ್ಥಾಪಕ ಚಿದ್ವಿಲಾಸ್ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಅಕ್ಟೋಬರ್ ೨೦ರಂದು ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟ ನಡೆಯಲಿದ್ದು, ಅಂದೇ ಸಮಾರೋಪ ಸಮಾರಂಭ ನಡೆಯಲಿದೆ. ಕ್ರೀಡಾಕೂಟದಲ್ಲಿ ಓಟ, ಮಕ್ಕಳಿಗೆ ಕಾಳು ಹೆಕ್ಕುವುದು, ಕಪ್ಪೆ ಜಿಗಿತ, ಭಾರದ ಗುಂಡು ಎಸೆತ, ಥ್ರೋಬಾಲ್, ಪುಟ್ಬಾಲ್, ಹಗ್ಗ-ಜಗ್ಗಾಟ ಮತ್ತಿತರ ಪಂದ್ಯಾವಳಿಗಳು ನಡೆಯಲಿದೆ ಎಂದು ತಿಳಿಸಿದರು. ದಸರಾ ಕ್ರೀಡಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಪಿಲ್ ಕುಮಾರ್, ಕಾರ್ಯದರ್ಶಿ ವಿನೋದ್‌ಕುಮಾರ್, ಪ್ರಮುಖರಾದ ಸುನಿಲ್ ನಂಜಪ್ಪ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

DSC_8717

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *