ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಕನ್ನಡ ನಾಡಿನ ಜೀವನದಿ ದಕ್ಷಿಣ ಗಂಗೆ ಕಾವೇರಿ : ನದಿಯಾಗಿ ಹರಿದಳು ಲೋಪಮುದ್ರೆ

Posted on: October 17, 2015

ಮಡಿಕೇರಿ :

ಕೊಡಗಿನಲ್ಲಿ ಹುಟ್ಟುವ ಕಾವೇರಿ ಗಂಗೆಯಷ್ಟೇ ಪವಿತ್ರಳು, ಮಾತ್ರವಲ್ಲ ಭಕ್ತಿ ಪ್ರಧಾನಳು. ಕಾವೇರಿ ನದಿ ಕೊಡಗಿನಲ್ಲಿ ಹುಟ್ಟಿದ ಕಾರಣಕ್ಕೆ ಕೊಡಗು ಇಂದು ಇಡೀ ದೇಶದಲ್ಲೇ ಮನೆಮಾತು. ದಕ್ಷಿಣ ಗಂಗೆ ಎಂದೇ ಕರೆಯಲ್ಪಡುವ ಕೊಡಗಿನ ಕಾವೇರಿ ತಲಕಾವೇರಿಯ ಬ್ರಹ್ಮಗಿರಿಯಿಂದ ಬಂಗಾಳಕೊಲ್ಲಿಯವರೆಗೆ ಹರಿದು ಲಕ್ಷಾಂತರ ಜನರ ಬಾಯಾರಿಕೆ ಹಾಗೂ ಹಸಿವನ್ನು ನೀಗಿಸುತ್ತಿದ್ದಾಳೆ. ಕಾವೇರ ಮುನಿಯ ತಪಸ್ಸಿನಿಂದಾಗಿ ಜನ್ಮ ತಳೆದ ಕಾವೇರಿ ಕನ್ನಡ ನಾಡಿನ ಜೀವನದಿ. ತಲಕಾವೇರಿ ಕ್ಷೇತ್ರದ ಬ್ರಹ್ಮಗಿರಿಯ ಬುಡದಲ್ಲಿ ಪುಟ್ಟದಾದ ಒಂದು ಕುಂಡಿಕೆಯಲ್ಲಿ ನದಿಯ ರೂಪದಲ್ಲಿ ಹರಿದು ಬರುವ ಈಕೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕನ್ನಿಕೆ ಮತ್ತು ಸುಜ್ಯೋತಿಯೊಂದಿಗೆ ಸಂಗಮವಾಗುತ್ತಾಳೆ.

IMG_9082

ಭಾಗಮಂಡಲ ಕೂಡ ಪುರಾಣಪ್ರಸಿದ್ಧವಾದ ಪುಣ್ಯಕ್ಷೇತ್ರ. ಭಗಂಡ ಋಷಿಗಳು ತಪಸ್ಸು ಮಾಡಿ ಪ್ರತಿಷ್ಠಾಪಿಸಿರುವ ಶಿವಲಿಂಗ ಇಲ್ಲಿ ಭಗಂಡೇಶ್ವರ ಎಂದೇ ಪ್ರಸಿದ್ಧಿ. ಭಾಗಮಂಡಲದ ಮೂಲಕ ಹರಿಯುವ ಕಾವೇರಿ ಪಾಲೂರು, ಗುಹ್ಯ, ಕುಶಾಲನಗರ, ಶಿರಂಗಾಲದ ಮೂಲಗ ರಾಮನಾಥ ಪುರವನ್ನು ಸೇರುತ್ತಾಳೆ. ನಂತರ ಅಲ್ಲಿಂದ ಮುಂದೆ ಚುಂಚನ ಕಟ್ಟೆ, ಕನ್ನಂಬಾಡಿ, ಶ್ರೀರಂಗಪಟ್ಟಣ, ಶಿವನ ಸಮುದ್ರ, ಮೇಕೆದಾಟು ಊರುಗಳಿಗಾಗಿ ಹರಿದು ತಮಿಳುನಾಡನ್ನು ಸೇರಿತ್ತಾಳೆ. ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿಯ ಕೃಷ್ಟರಾಜ ಜಲಾಶಯ ಮತ್ತು ಮೆಟ್ಟೂರು ಆಣೆಕಟ್ಟು ನಿರ್ಮಾಣಗೊಂಡಿವೆ. ಕಾವೇರಿ ಹರಿಯುವ ಎಡ-ಬಲ ದಂಡೆಗಳಲ್ಲಿ ಆನೇಕ ಪುಣ್ಯಕ್ಷೇತ್ರಗಳನ್ನು ಕಾಣಬಹುದಾಗಿದೆ.

ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ದಿನಾಂಕ 16 ಅಥವಾ 17 ರಂದು ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಕಾವೇರಿ ತುಲಾಸಂಕ್ರಮಣ ಶ್ರದ್ಧಾ ಭಕ್ತಿಯಿಂದ ನಡೆಯುತ್ತದೆ. ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಪವಿತ್ರ ಮುಹೂರ್ತದಲ್ಲಿ ತಾಯಿ ಕಾವೇರಿ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುತ್ತಾಳೆ. ಈ ಪುಣ್ಯ ಕಾಲದಲ್ಲಿ ಸಹಸ್ರಾರು ಭಕ್ತರು ತೀರ್ಥಸ್ನಾನ ಮಾಡಿ ಪುನೀತರಾಗುತ್ತಾರೆ.

ಮಡಿಕೇರಿಯಿಂದ 32 ಕಿ.ಮೀ. ದೂರವಿರುವ ಭಾಗಮಂಡಲಕ್ಕೆ ಮೊದಲು ತೆರಳುವ ಭಕ್ತರು ತ್ರಿವೇಣೆ ಸಂಗಮದಲ್ಲಿ ಸ್ನಾನ ಮಾಡಿ, ಶ್ರೀ ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ತಲಕಾವೇರಿಗೆ ಪ್ರಯಾಣ ಬೆಳೆಸುವರು. ಭಾಗಮಂಡಲದಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ಅಥವಾ ವಾಹನಗಳ ಮೂಲಕವೂ ಭಕ್ತರು ತೆರಳಬಹುದಾಗಿದೆ.

ಕಾವೇರಿ ನದಿ ಹುಟ್ಟಿದ್ದು ಹೀಗೆ :::
ಪೂರ್ವಕಾಲದಲ್ಲಿ ಕವೇರನೆಂಬ ಋಷಿ ಬ್ರಹ್ಮ ಗಿರಿಯಲ್ಲಿ ತಪಸ್ಸು ಮಾಡಿ ಸಂತತಿಯನ್ನು ನೀಡುವಂತೆ ಬ್ರಹ್ಮದೇವನನ್ನು ಬೇಡುತ್ತಾನೆ. ಈ ಸಂದರ್ಭ ಪ್ರತ್ಯಕ್ಷನಾದ ಬ್ರಹ್ಮದೇವ ಲೋಪಮುದ್ರೇಯೆಂಬ ನಾಮಾಂಕಿತವನ್ನೊಳಗೊಂಡ ನನ್ನ ಮಾನಸ ಪುತ್ರಿಯನ್ನು ನಿನಗೆ ಮಗಳನ್ನಾಗಿ ನೀಡುವುದಾಗಿ ಭರವಸೆ ನೀಡುತ್ತಾರೆ. ಕವೇರ ಮುನಿ ಲೋಪಮುದ್ರೆಯನ್ನು ತನ್ನ ಮಗಳನ್ನಾಗಿ ಸ್ವೀಕರಿಸಿ ಬ್ರಹ್ಮಗಿರಿ ತಪ್ಪಲಿನಲ್ಲಿ ಜೀವನ ಸಾಗಿಸುತ್ತಿರುತ್ತಾರೆ. ಕಾವೇರಿ ಎಂದು ನಾಮಾಂಕಿತಗೊಂಡ ಲೋಪಮುದ್ರೆ ಬೆಳೆದು ದೊಡ್ಡವಳಾಗುತ್ತಾಳೆ. ಒಂದು ದಿನ ಕವೇರ ಮುನಿಗಳ ಆಶ್ರಮಕ್ಕೆ ಬಂದ ಅಗಸ್ತ್ಯ ಮಹರ್ಷಿಗಳು ಕಾವೇರಿಯನ್ನು ವಿವಾಹವಾಗಲು ಬಯಸುತ್ತಾರೆ. ಮಹರ್ಷಿ ಅಗಸ್ತ್ಯರ ಬಯಕೆಯನ್ನು ಒಪ್ಪಿಕೊಂಡ ಕಾವೇರಿ ‘ತನ್ನನ್ನು ಯಾವ ಕಾಲಕ್ಕೂ ಉಪೇಕ್ಷಿಸಿ ಹೊರಟು ಹೋಗಬಾರದು, ಹಾಗೊಂದು ವೇಳೆ ಹೋದರೆ ನದಿಯಾಗಿ ಹರಿದು ಸಮುದ್ರವನ್ನು ಸೇರುವುದಾಗಿ’ ತಿಳಿಸುತ್ತಾಳೆ. ಇದಕ್ಕೆ ಋಷಿ ಅಗಸ್ತ್ಯರು ಸಮ್ಮತಿ ಸೂಚಿಸಿದ ನಂತರ ವಿವಾಹ ಸಮಾರಂಭ ವೈಭವದಿಂದ ನಡೆಯಿತು. ನಂತರ ಕೆಲವು ಕಾಲ ದಂಪತಿ ಗೃಹಸ್ಥಾಶ್ರಮ ಜೀವನವನ್ನು ಸುಖಃವಾಗಿ ಸಾಗಿಸಿದರು. ಹೀಗಿರುವಾಗ ಒಂದು ದಿನ ಮಹರ್ಷಿ ಅಗಸ್ತ್ಯರು ಬ್ರಹ್ಮಗಿರಿಯ ಉತ್ತರ ತಪ್ಪಲಿನ ಕನಕಾ ನದಿಯ ತೀರಕ್ಕೆ ಸ್ನಾನಕ್ಕೆಂದು ತೆರಳಿದರು. ತೆರಳುವ ಮುನ್ನ ಕಾವೇರಿಯನ್ನು ತಮ್ಮ ಕಮಂಡಲುವಿಗೆ ಅವಾಹನೆ ಮಾಡಿ , ತಮ್ಮ ಶಿಷ್ಯರಿಗೆಲ್ಲ ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಸೂಚಿಸಿದರು.

IMG_9072

ಇದೇ ಸಂದರ್ಭವನ್ನು ಕಾಯುತ್ತಿದ್ದ ಕಾವೇರಿ ಪತಿ ಅಗಸ್ತ್ಯರು ನನ್ನ ನಿಬಂಧನೆಯನ್ನು ಉಲ್ಲಂಘಿಸಿದರೆಂದು ಮನಗಂಡು, ಕಮಂಡಲುವಿನಿಂದ ತಕ್ಷಣ ಹೊರಬಂದು ಪಕ್ಕದ ಬ್ರಹ್ಮ ಕುಂಡಿಕೆಯನ್ನು ಸೇರಿ ಅಲ್ಲಿಂದ ಜಲರೂಪಿಣಿಯಾಗಿ ಹರಿಯ ತೊಡಗಿದಳು. ಶಿಷ್ಯಂದಿರಿಗೆ ಕಾಣಿಸಿಕೊಳ್ಳದೆ ಗುಪ್ತ ಗಾಮಿನಿಯಾಗಿ ಸ್ವಲ್ಪ ದೂರ ಹರಿದು ಮತ್ತೆ ಕಾಣಿಸಿಕೊಂಡಳು. ಅದಾಗಲೇ ಸ್ನಾನ ಮುಗಿಸಿಕೊಂಡು ಬರುತ್ತಿದ್ದ ಪತಿ ಅಗಸ್ತ್ಯ ಮಹರ್ಷಿ ನದಿಯಾಗಿ ಮುಂದೆ ಹರಿಯದಂತೆ ಬೇಡಿದರಲ್ಲದೆ ಮರಳಿ ತನ್ನ ಪತ್ನಿಯಾಗಿ ಶರೀರಧಾರಿಯಾಗಿ ಬಾಳುವಂತೆ ಮನವಿಮಾಡಿದರು. ಆದರೆ ಇದಕ್ಕೊಪ್ಪದ ಕಾವೇರಿ ತಾಯಿ ನದಿಯಾಗಿ ಹರಿದು ಲಕ್ಷಾಂತರ ಜನರ ಜೀವನದಿಯಾಗಿ, ದೇವತೆಯಾಗಿ ಪೂಜಿಸಲ್ಪಟ್ಟಳು.

IMG_9075

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *