ಚಿತ್ರನಟಿ ಗೀತಾ ಬಾಸ್ರಾ ಜತೆ ದಾಂಪತ್ಯಕ್ಕೆ ಕಾಲಿಟ್ಟ ಹರಭಜನ್ ಸಿಂಗ್

Posted on: October 30, 2015

bajji-1ಭಾರತ ಕ್ರಿಕೆಟ್ ತಂಡದ ಆಫ್‌ಸ್ಪಿನ್ನರ್ ಹರಭಜನ್ ಸಿಂಗ್ ಚಿತ್ರನಟಿ ಗೀತಾ ಬಾಸ್ರಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಳೆದ ಮೂರು ದಿನಗಳಿಂದ ಪಂಜಾಬಿ ಸಂಪ್ರದಾಯದಂತೆ ವಿವಿಧ ಕಾರ್ಯಕ್ರಮಗಳು ನಡೆದಿದ್ದವು.

ಈ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್, ಅವರ ಪತ್ನಿ ಅಂಜಲಿ, ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ನೀತಾ ಅಂಬಾನಿ, ಕ್ರಿಕೆಟಿಗರಾದ ಪಾರ್ಥೀವ್ ಪಟೇಲ್, ಆರ್.ಪಿ. ಸಿಂಗ್, ಪ್ರಗ್ಯಾನ್ ಓಜಾ ಅವರು ಹರಭಜನ್-ಗೀತಾ ದಂಪತಿಗೆ ಶುಭ ಕೋರಿದರು. ವಸ್ತ್ರವಿನ್ಯಾಸಕಿ ಅರ್ಚನಾ ಕೊಚ್ಚರ್ ವಿನ್ಯಾಸಗೊಳಿಸಿದ ಕೆಂಪು ವರ್ಣದ ಮದುವೆ ಲೆಹೆಂಗಾ ಚೋಲಿಯನ್ನು ಗೀತಾ ಧರಿಸಿದ್ದರು. ಹರಭಜನ್ ಶೇರವಾನಿ ಮತ್ತು ಕೆಂಪು ಬಣ್ಣದ ಪೇಟಾ ಧರಿಸಿದ್ದರು.

bajji-2

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *