ದಸರಾ ಪ್ರಯುಕ್ತ ಕಬ್ಬಡಿ ಪಂದ್ಯಾಟ

Posted on: October 21, 2015

ಮಡಿಕೇರಿ :

ದಸರ ಅಂಗವಾಗಿ ದಸರ ಕ್ರೀಡಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟಕ್ಕೆ ಮೂಡಾ ಅಧ್ಯಕ್ಷೆ ಸುರೇರಾ ಅಬ್ರಾರ್ ಚಾಲನೆ ನೀಡಿದರು.
ಬಳಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗಣ್ಯರು ಕ್ರೀಡಾಪಟುಗಳಿಗೆ ಶುಭಕೋರಿದರು. ಇದೇ ಸಂದರ್ಭ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಂತರಾಷ್ಟ್ರೀಯ ಹಾಕಿ ಕ್ರೀಡಾಪಟು ಸುನಿಲ್ ಅವರನ್ನು ಸನ್ಮಾನಿಸಲಾಯಿತು.
ಪ್ರದರ್ಶನ ಪಂದ್ಯದ ಬಳಿಕ ಜಿಲ್ಲೆಯ ವಿವಿಧಡೆಗಳಿಂದ ಆಗಮಿಸಿದ್ದ ಕಬ್ಬಡಿ ತಂಡಗಳು ಪ್ರಶಸ್ತಿಗಾಗಿ ಸೆಣೆಸಾಡಿದವು.
ಸಮಾರಂಭದಲ್ಲಿ ಪೌರಾಯುಕ್ತೆ ಪುಷ್ಪಾವತಿ, ನಗರಸಭಾ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ಸದಸ್ಯೆ ಸಂಗೀತಾ ಪ್ರಸನ್ನ, ಡಿವೈಎಸ್‌ಪಿ ಮೇದಪ್ಪ, ನಗರ ಠಾಣಾಧಿಖಾರಿ ಸುರೇಶ್ ಬೋಪಣ್ಣ, ಉದ್ಯಮಿ ಪ್ರಸನ್ನ ಭಟ್ ಸೇರಿದಂತೆ ದಸರ ಕ್ರೀಡಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

DSC_0770 DSC_0771 DSC_0782 DSC_0785 DSC_0791

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *