ಪ್ರಬಲ ಭೂಕಂಪಕ್ಕೆ 231ಕ್ಕೂ ಹೆಚ್ಚು ಬಲಿ

Posted on: October 27, 2015

Pಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಕೆಲವು ಭಾಗಗಳಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪಕ್ಕೆ 231ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ. ದೆಹಲಿ, ಪಂಜಾಬ್, ಉತ್ತರಪ್ರ ದೇಶದಲ್ಲಿಯೂ ಭೂಕಂಪದ ಅನುಭವ ವಾಗಿದ್ದರಿಂದ ಜನರು ಭಯಭೀತರಾಗಿ ಮನೆಯಿಂದ ಹೊರಗೆ ಓಡಿ ಬಂದರು. ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಭೂಕಂಪನಕ್ಕೆ ಮೂವರು ಬಲಿಯಾಗಿದ್ದು, 15 ಜನರು ಗಾಯಗೊಂಡಿದ್ದಾರೆ.

ರಿಕ್ಟರ್ ಮಾಪನದಲ್ಲಿ ಕಂಪದ ತೀವ್ರತೆ 7.5ರಷ್ಟು ದಾಖಲಾಗಿದೆ. ಇದರ ಕೇಂದ್ರ ಬಿಂದು ಆಫ್ಘಾನಿಸ್ತಾನದ ಈಶಾನ್ಯ ದಿಕ್ಕಿನಲ್ಲಿ ಕಾಬೂಲಿನಿಂದ 250 ಕಿ. ಮೀ. ದೂರದಲ್ಲಿ ಮತ್ತು 213.5 ಕಿ. ಮೀ ಆಳದಲ್ಲಿ ಕೇಂದ್ರೀಕೃತವಾಗಿತ್ತು. ಪಾಕಿಸ್ತಾನದಲ್ಲಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಆಫ್ಘಾನಿಸ್ತಾನದಲ್ಲಿ 31ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *