ಭೂಗತ ಪಾತಕಿ ಛೋಟಾ ರಾಜನ್ ಬಂಧನ

Posted on: October 26, 2015

Chhota-Rajanನೂರಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಭಾರತೀಯ ಪೊಲೀಸರಿಂದ ರೆಡ್ ಕಾರ್ನರ್ ನೊಟಿಸ್ ಪಡೆದಿದ್ದ ಭೂಗತ ಪಾತಕಿ ಛೋಟಾ ರಾಜನ್ ನನ್ನು ಆಸ್ಟ್ರೇಲಿಯಾದಲ್ಲಿ ಇಂಡೋನೇಷ್ಯಾ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಸಿಡ್ನಿಯಲ್ಲಿರುವ ಖ್ಯಾತ ಬೀಚ್ ರೆಸಾರ್ಟ್‌ನಿಂದ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ರಾಜನ್ ತಂಗಿರುವ ಕುರಿತು ಮಾಹಿತಿ ಪಡೆದ ಇಂಡೋನೇಷ್ಯಾ ಪೊಲೀಸರು ಕೂಡಲೇ ಸಿಡ್ನಿ ಪೊಲೀಸರ ಸಹಾಯ ಪಡೆದು ಕಾರ್ಯಾಚರಣೆ ನಡೆಸಿ 55 ವರ್ಷದ ಭೂಗತ ಪಾತಕಿ ಛೋಟಾ ರಾಜನ್ ಅಲಿಯಾಸ್ ರಾಜೇಂದ್ರ ಸದಾಶಿವ ನಿಖಲ್ಜೆಯನ್ನು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ ರಾಜನ್ ತನ್ನ ಹಿಂಬಾಲಕರೊಂದಿಗೆ ಸಿಡ್ನಿಯಲ್ಲಿರುವ ಬಾಲಿ ಬೀಚ್ ರೆಸಾರ್ಟ್ ಗೆ ಆಗಮಿಸಿದ್ದನು. ಈ ವಿಚಾರ ತಿಳಿದ ಇಂಡೋನೇಷ್ಯಾ ಪೊಲೀಸರು ಕೂಡಲೇ ಸಿಡ್ನಿ ಪೊಲೀಸರನ್ನು ಸಂಪರ್ಕಿಸಿ ಬಂಧನಕ್ಕೆ ಬಲೆ ಬೀಸಿದ್ದಾರೆ. ರಾಜನ್ ರೆಸಾರ್ಟ್ ನಿಂದ ವಿಮಾನ ನಿಲ್ದಾಣಕ್ಕೆ ಬಂದಿರುವುದನ್ನು ಖಚಿತ ಪಡಿಸಿಕೊಂಡ ಪೊಲೀಸರು ನಿಲ್ದಾಣವನ್ನು ಸುತ್ತುವರೆದು ಆತನನ್ನು ಬಂಧಿಸಿದ್ದಾರೆ ಎಂದು ಸಿಡ್ನಿ ಪೊಲೀಸ್ ವಕ್ತಾರ ಹೆರಿ ವಿಯಾಂಟೋ ತಿಳಿಸಿದ್ದಾರೆ.

 

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *