ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಮಡಿಕೇರಿ ದಸರಾದಲ್ಲಿ ಪೇಟೆ ಶ್ರೀ ರಾಮ ಮಂದಿರ ಇತಿಹಾಸ

Posted on: October 17, 2015

ಮಡಿಕೇರಿ :

ನಗರದ ಅನತಿ ದೂರದಲ್ಲಿ ಕಾಲೇಜು ರಸ್ತೆ, ಹಿಲ್ಸ್ ರಸ್ತೆ ಸೇರುವ ಹೃದಯರ ಭಾಗದಲ್ಲಿ ಕಂಗೊಳಿಸುವ ದೇಗುಲವೇ ಪೇಟೆ ಶ್ರೀ ರಾಮಮಂದಿರ. ಇದರ ಇತಿಹಾಸವು ಮಡಿಕೇರಿ ದಸರಾದೊಂದಿಗೆ ಬೆಸೆದುಕೊಂಡಿದೆ. ಸುಮಾರು 180 ವರ್ಷಗಳ ಹಿಂದೆ ಮಡಿಕೇರಿಯಲ್ಲಿ ತಲೆದೋರಿದ್ದ ಸಾಂಕ್ರಾಮಿಕ ರೋಗಗಳ ನಿವಾರಣೆಗೆ ಕರಗಗಳನ್ನು ಹೊರಡಿಸುವ ನಿರ್ಧಾರವನ್ನು ಧಾರ್ಮಿಕ ಮುಖಂಡರು ಕೈಗೊಂಡು ಊರ ಒಳಗೆ ಕರೆದು ನಗರ ಪ್ರದಕ್ಷಿಣೆ ಮಾಡಿಸಿದರು. ಪೌರಾಣಿಕ ಹಿನ್ನೆಲೆಯಿಂದ ಕೂಡಿರಬೇಕು ಎಂಬ ಭಾವನೆ ಮೂಡಿತು. ಆಗ ಪಾರ್ವತಿಯು ದುಷ್ಟ ಸಂಹಾರಕ್ಕೆ ಮುನ್ನ ಮೊದಲಿಗೆ ಅಣ್ಣನೆನಿಸಿಕೊಂಡ ಶ್ರೀ ಮಹಾವಿಷ್ಣುವಿನ ಬಳಿಗೆ ಹೋಗುವ ಪೌರಾಣಿಕ ಘಟನೆಯನ್ನು ಹಿನ್ನೆಲೆಯಾಗಿರಿಸಿಕೊಂಡು ಪಾರ್ವತಿಯ ಅಂಶವೆನಿಸಿಕೊಂಡಿರುವ ನಾಲ್ಕು ಶಕ್ತಿ ದೇವತೆಗಳನ್ನು ಊರೊಳಗೆ ಮಹಾವಿಷ್ಣುವಿನ ಸ್ಥಾನಕ್ಕೆ ಬರಮಾಡಿಕೊಳ್ಳುವ ಕ್ರಮವಿಧಿಗಳನ್ನು ರೂಪಿಸಲಾಯಿತು. ಆಗಿನ ಕಾಲದಲ್ಲಿ ನಗರದ ದೊಡ್ಡಪೇಟೆಯಲ್ಲಿ ಪೂಜಾ ಸ್ಥಳವೊಂದನ್ನು ನಿರ್ಮಿಸಿ ರಾಮನ ಚಿತ್ರಪಟವನ್ನಿಟ್ಟು ಪೂಜಿಸಲಾಯಿತು. ಈ ಪಟ ಈಗಲೂ ಇದೆ. ಅಲ್ಲದೇ ನವರಾತ್ರಿ ಸಂದರ್ಭ ಕರಗ ದೇವತೆಗಳು ಇಲ್ಲಿಗೆ ಆಗಮಿಸಿ ರಾಮನಿಗೆ ಪೂಜೆ ಸಲ್ಲಿಸಿ ತಮ್ಮ ನಗರ ಪ್ರದಕ್ಷಿಣೆ ಕಾರ್ಯವನ್ನು ಆರಂಭಿಸಿ ರಾಮನಿಗೆ ಪೂಜೆಸಲ್ಲಿಸಿ ತಮ್ಮ ನಗರ ಪ್ರದಕ್ಷಿಣೆ ಕಾರ್ಯವನ್ನು ಆರಂಭಿಸುವ ಪದ್ಧತಿ ಇದೆ. ಈ ಸಂಪ್ರದಾಯವು ೧೮೦ ವರ್ಷ ಕಳೆದರೂ ಇಂದಿಗೂ ಹಾಗೇಯೇ ಮುಂದುವರೆಯುತ್ತಾ ಬಂದುತ್ತಿದೆ.

DSC06084

ದಸರಾ ಆಚರಣೆಗೊಂದು ನಿರ್ಮಾಣವಾದ ರಾಮ ಮಂದಿರವೂ ಕ್ರಮೇಣ ಪ್ರಸಿದ್ಧಿ ಪಡೆಯುತ್ತಾ ಬಂದಿತು. ಪೂಜಾ ಕೈಂಕರ್ಯಗಳು, ಭಜನೆ, ಸಮಾರಂಭಗಳು ನಡೆಯುತ್ತಿದ್ದವು. ರಾಮಮಂದಿರ ಜೊತೆಗೆ ಗಣಪತಿಯ ಪ್ರತಿಷ್ಠಾಪನೆಯೂ ಆಗಿದೆ. ಮಂದಿರದ ಜವಾಬ್ದಾರಿಯನ್ನು ನಾಯ್ಡು ಮತ್ತು ಮೊದಲಿಯರ್ ಕುಟುಂಬಸ್ಥರು ನಡೆಸುತ್ತಾ ಬಂರುತ್ತಿದ್ದಾರೆ. 1967 ರಲ್ಲಿ ದೇಗುಲದ ಗೋಪುರ ನಿರ್ಮಾಣವಾಯಿತು. 1942ರಲ್ಲಿ ಭಕ್ತಾಧಿಯೊಬ್ಬರು ಸಮರ್ಪಿಸಿದ ಬುದ್ಧನ ವಿಗ್ರಹ ಇಲ್ಲಿನ ಆಕರ್ಷಣೆಗಳಲ್ಲೊಂದಾಗಿದೆ. ಮುಂಭಾಗದಲ್ಲಿ ಸ್ಥಾಪಿತವಾಗಿರುವ ಈ ವಿಗ್ರಹ ಅಮೃತ ಶಿಲೆಯಲ್ಲಿ ನಿರ್ಮಿಸಲ್ಪಟ್ಟಿದೆ.

ನವಗ್ರಹ ಪ್ರತಿಷ್ಠನೆಯೂ ಆಗಿದ್ದು ದೇಗುಲದ ಸಂಪೂರ್ಣ ನವೀಕರಣದ ಚಿಂತನೆಯೂ ಮುಂದುವರೆದಿದೆ. ವಿಜಯದಶಮಿಯಂದು ಇಲ್ಲಿ ಪೂಜಿಸಲ್ಪಟ್ಟ ಕಳಶ ಮೆರವಣಿಗೆ ಹೊರಡುವುದರೊಂದಿಗೆ ದಸರಾಕ್ಕೆ ಅಧಿಕೃತ ಚಾಲನೆ ದೊರೆಯುತ್ತದೆ. ಅಲ್ಲಿಂದ ನಾಲ್ಕು ಕರಗ ದೇವಲಯಗಳಿಗೆ ಸಾಗಿ ಪೂಜೆ ಸ್ವೀಕರಿಸಿ ಕರಗಗಳೊಂದಿಗೆ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿತು ದಸರಾ ಉತ್ಸವಕ್ಕೆ ಇತಿಶ್ರಿ ಹಾಡಲಾಗುತ್ತದೆ. ಸಾಂಪ್ರಾದಾಯಿಕ ಆಚರಣೆಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಅಬ್ಬರದ ಪೈಪೋಟಿಯ ನಡುವೆಯೂ ಇಲ್ಲಿನ ಮಂಟಪ ಪ್ರತಿವರ್ಷ ಭಕ್ತಾಧಿಗಳನ್ನು ಆಕರ್ಷಿಸುತ್ತಿದೆ.

pete-shree-rama-mandira

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *