ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಮಡಿಕೇರಿ ದಸರಾ ದಶಮಂಟಪ ಸಂಭ್ರಮ : ಕಂಚಿ ಕಾಮಾಕ್ಷಿ ಮತ್ತು ಕೋಟೆ ಗಣಪತಿ ದೇವಾಲಯಕ್ಕೆ ಪ್ರಥಮ

Posted on: October 24, 2015

ಮಡಿಕೇರಿ :

ವಿಜೃಂಭಣೆಯ ದಶಮಂಟಪಗಳ ಶೋಭಾ ಯಾತ್ರೆಯ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಸಂಭ್ರಮದ ತೆರೆ ಬಿದ್ದಿದೆ. ಮಂಜಿನ ಹನಿಗಳ ಮಂಜಿನಕೇರಿಯ ಮಾರ್ಗದಲ್ಲಿ ಸಾಗಿದ ವಿದ್ಯುತ್ ಅಲಂಕೃತ ದಶಮಂಟಪಗಳಲ್ಲಿ ದೇವ ಲೋಕವನ್ನೇ ಸೃಷ್ಟಿಸಿದ ವಿವಿಧ ಕಥಾಹಂದರವಿದ್ದ ಮೂರ್ತಿಗಳು ಸಾವಿರಾರು ಜನರ ಗಮನ ಸೆಳೆದವು.karavale

ಗಾಂಧಿ ಮೈದಾನದಲ್ಲಿ ಬೆಳಗಿನ ವರೆಗೆ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾವಿರಾರು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ಆಗಮಿಸಿ ಮಡಿಕೇರಿ ದಸರಾ ಜನೋತ್ಸವಕ್ಕೆ ಸಾಕ್ಷಿಯಾದರು.

ಬಹುಮಾನಿತ ಮಂಟಪಗಳು :::
ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾ ಜನೋತ್ಸವದ ದಶಮಂಟಪಗಳ ಶೋಭಾಯಾತ್ರೆಯಲ್ಲಿ ಕಂಚಿ ಕಾಮಾಕ್ಷಿ ಮತ್ತು ಕೋಟೆ ಗಣಪತಿ ದೇವಾಲಯಕ್ಕೆ ಪ್ರಥಮ ಸ್ಥಾನ ಪಡೆಯಿತು.

ಮಂಜಿನ ನಗರಿಯ ವಿಜಯದಶಮಿಯ ಇರುಳನ್ನು ಬೆಳಕನ್ನಾಗಿಸಿದ ಸಂಭ್ರಮದ ಮೆರವಣಿಗೆಯಲ್ಲಿ ಸ್ವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಶ್ರೀ ಚೌಡೇಶ್ವರಿ ಮತ್ತು ಕೋಟೆ ಮಾರಿಯಮ್ಮ ದೇವಸ್ಥಾನದ ಮಂಟಪಗಳಿಗೆ ದ್ವಿತೀಯ ಮತ್ತು ಶ್ರೀ ಕುಂದುರುಮೊಟ್ಟೆ ದೇಗುಲದ ಕಲಾಕೃತಿ ತೃತೀಯ ಬಹುಮಾನದ ಗೌರವಕ್ಕೆ ಪಾತ್ರವಾಯಿತು.pete-rama-mandira kundur-motte-(2) kundur-motte-(1) kote-mariyamma kodandarama] kote-ganapathi-(1) kote-ganapathi-(2) kote-mari DSC_3174 kanci-kamakshi DSC_3172 DSC_3171 DSC_3167P1760577P1760565

 

One thought on “ಮಡಿಕೇರಿ ದಸರಾ ದಶಮಂಟಪ ಸಂಭ್ರಮ : ಕಂಚಿ ಕಾಮಾಕ್ಷಿ ಮತ್ತು ಕೋಟೆ ಗಣಪತಿ ದೇವಾಲಯಕ್ಕೆ ಪ್ರಥಮ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *