ರಷ್ಯಾ ವಿಮಾನ ಪತನ : 224 ಮಂದಿ ಸಾವನ್ನಪ್ಪಿರುವ ಶಂಕೆ

Posted on: October 31, 2015

Pಈಜಿಪ್ಟ್‌ನಿಂದ ರಷ್ಯಾಕ್ಕೆ ತೆರಳುತ್ತಿದ್ದ ರಷ್ಯಾ ವಿಮಾನ ಸಿನಾಯ್ ಪೆನಿನ್ ಸುಲಾ ಪ್ರದೇಶದಲ್ಲಿ ಪತನವಾಗಿರುವ ಘಟನೆ ಶನಿವಾರ ನಡೆದಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಿಬ್ಬಂದಿ ಸೇರಿ 224 ಮಂದಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಈಜಿಪ್ಟ್‌ನ ಶರ್ಮ್ ಎಲ್ ಶೇಕ್ ರೆಡ್ ಸೀ ರೆಸಾರ್ಟ್ ನಿಂದ ಟೇಕ್ ಆಫ್ ಆದ ರಷ್ಯಾ ವಿಮಾನ ನಂತರ ಏರ್ ಟ್ರಾಫಿಕ್ ಕಂಟ್ರೋಲರ್ ಸಂಪರ್ಕ ಕಳೆದುಕೊಂಡಿರುವುದಾಗಿ ವರದಿ ತಿಳಿಸಿದೆ. ರಷ್ಯಾ ವಿಮಾನ ಸಿನಾಯ್ ಪ್ರದೇಶದಲ್ಲಿ ಪತನವಾಗಿರುವುದನ್ನು ಈಜಿಪ್ಟ್ ಪ್ರಧಾನಿ ಶರೀಫ್ ಇಸ್ಮಾಯಿಲ್ ಖಚಿತಪಡಿಸಿದ್ದಾರೆ.

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *