ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ವಿಜಯ ದಶಮಿಯಂದು ಜಗಮಗಿಸಲಿರುವ ದಶ ಮಂಟಪಗಳ ಶೋಭಾಯಾತ್ರೆ

Posted on: October 22, 2015

ಮಡಿಕೇರಿ :

ಪ್ರಸಕ್ತ ವರ್ಷದ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಕ್ಷಣಗಣನೇ ಇದ್ದು ಈ ಬಾರಿಯ ದಸರಾದ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ನಗರದ 10 ಮಂಟಪಗಳು ವಿಭಿನ್ನ ಶೈಲಿಯ ಕಥಾ ಸಾರಾಂಶಗಳನ್ನು ಹೊಂದಿವೆ.

ಪೇಟೆ ಶ್ರೀ ರಾಮ ಮಂದಿರ :::
ಕಾಲೇಜು ರಸ್ತೆಯಲ್ಲಿರುವ ಪೇಟೆ ಶ್ರೀ ರಾಮ ಮಂದಿರ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿಯ ಉತ್ಸವದಲ್ಲಿ ಶ್ರೀ ಮಹಾವಿಷ್ಣುವಿನ ದಶಾವತಾರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿದೆ ಮಂಟಪ ನಿರ್ಮಾಣಕ್ಕೆ ಒಂದು ಟ್ರ್ಯಾಕ್ಟರ್‌ಅನ್ನು ಅಳವಡಿಸಲಾಗುತ್ತಿದ್ದು, ಬೆಂಗಳೂರಿನ ಕಲಾವಿದ ವೆಂಕಟೇಶ್ ಮತ್ತು ತಂಡ ಕಲಾಕೃತಿಗಳನ್ನು ಅಚ್ಚುಕಟ್ಟಾಗಿ ತಯಾರಿಸುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಒ.ಎನ್.ಬಾಬು ತಿಳಿಸಿದ್ದಾರೆ. ಒಟ್ಟು 5 ಲಕ್ಷ ವೆಚ್ಚದಲ್ಲಿ ಹೊರಡಿಸಲಾಗುತ್ತಿರುವ ಮಂಟಪವನ್ನು ಪಾರಾಣೆಯ ಬಾವಲಿ ಗ್ರಾಮದ ಬ್ಯಾಂಡ್‌ಸೆಟ್ ಮುನ್ನಡೆಸಲಿದೆ ಎಂದು ಅವರು ತಿಳಿಸಿದರು.

Z-Pet-Ramamandira

ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ :::
ತನ್ನ ೪೨ನೇ ವರ್ಷದ ದಸರಾ ಉತ್ಸವ ಆಚರಣೆಗೆ ಸಜ್ಜಾಗುತ್ತಿರುವ ರಾಜಸೀಟ್ ಬಳಿಯ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಈ ಬಾರಿ ‘ಮಣಿಕಂಠನಿಂದ ಮಹಿಷಿಯ ಸಂಹಾರ’ ಕಥಾ ಸಾರಾಂಶವನ್ನು ಹೊಂದಿದೆ. ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದ್ದು ಒಟ್ಟು 22 ಕಲಾಕೃತಿಗಳನ್ನು ಬಳಸಲಾಗುತ್ತಿದೆ. ಮೈಸೂರಿನ ಕಲಾವಿದರು ಕಲಾಕೃತಿಗಳನ್ನು ತಯಾರಿಸುತ್ತಿದ್ದಾರೆ. 14 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು ಕೇರಳದ ಚಂಡೆ ವಾದ್ಯ ಮಂಟಪವನ್ನು ಮುನ್ನಡೆಸಲಿದೆ.

Z-KunduruMotte

ದಂಡಿನ ಮಾರಿಯಮ್ಮ ದೇವಾಲಯ :::
ನಗರಸಭೆ ಹಿಂಬಾಗದ ಕೆ.ಇ.ಬಿ ಬಳಿಯಿರುವ ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಈ ಬಾರಿ ೮೫ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದ್ದು ಈ ಬಾರಿ ‘ಶ್ರೀ ಮಹಾವಿಷ್ಣುವಿನಿಂದ ಮಧುಖೈಟಭರ ಸಂಹಾರ’ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದ್ದು ಇದಕ್ಕಾಗಿ ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ರತಿಕೇಶನ್ ತಿಳಿಸಿದರು.  ಮಂಟಪದಲ್ಲಿ 20 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು ಮೈಸೂರಿನ ಕಲಾವಿದ ಮಾದಪ್ಪ ಅಂಡ್‌ಸನ್ಸ್ ಕಲಾಕೃತಿಗಳನ್ನು ತಯಾರಿಸುತ್ತಿದ್ದಾರೆ. ಒಟ್ಟು ೧೫ ಲಕ್ಷ ರೂ. ವೆಚ್ಚದಲ್ಲಿ ಮಂಟಪವನ್ನು ಹೊರ ತರಲಾಗುತ್ತಿದೆ ಎಂದು ಎಂ. ರತಿಕೇಶನ್ ಮಾಹಿತಿ ನೀಡಿದರು.

Z-Dandina-Mariyamma

ದೇಚೂರು ಶ್ರೀ ರಾಮಮಂದಿರ ದೇವಾಲಯ ::::
ಕಳೆದ ೯೬ ವರ್ಷಗಳಿಂದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ದೇಚೂರು ಶ್ರೀ ರಾಮ ಮಂದಿರ ದೇವಾಲಯ ಈ ಬಾರಿ ‘ರಾಮಾಂಜನೆಯ ಯುದ್ಧ’ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಇ. ಮೋಹನ್ ಕುಮಾರ್ ತಿಳಿಸಿದ್ದಾರೆ. ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದ್ದು ದಿಂಡಿಗಲ್‌ನ ಎ.ವಿ.ಲೈಟಿಂಗ್ಸ್‌ನವರು ಧ್ವನಿವರ್ಧಕ ಹಾಗೂ ಸ್ಟುಡಿಯೋ ಸೆಟ್ಟಿಂಗ್ ಅನ್ನು ಮಡಿಕೇರಿ ಸ್ವಾಗತ ಡೆಕೋರೇಟರ್‍ಸ್‌ನವರು ಮಾಡಲಿದ್ದಾರೆ. ಮಂಗಳೂರಿನ ಬಾಲು ಆರ್ಟ್ಸ್ ನವರು ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಒಟ್ಟು ೮.೫೦ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಮಾಡಲಾಗುತ್ತಿದೆ ಎಂಬ ಮಾಹಿತಿ ನೀಡಿದರು.

Z-Deechuru-Ramamandira

ಶ್ರೀ ಕೋಟೆ ಮಹಾಗಣಪತಿ ದೇವಾಲಯ :::
ಶ್ರೀ ಕೋಟೆ ಮಹಾಗಣಪತಿ ದೇವಾಲಯ ದಸರಾ ಮಂಟಪ ಸಮಿತಿ ಈ ಬಾರಿ ಗಣೇಶ ಪುರಾಣದ ೪ನೇ ಸಂಪುಟದಿಂದ ಆಯ್ದ ಗಜಾನನ ಹಾಗೂ ಸಿದ್ಧಿಬುದ್ಧಿ ದೇವಿಯರಿಂದ ನರಾಂತಕ-ದೇವಾಂತಕರ ಸಂಹಾರ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುತ್ತಿದೆ. ಮಂಟಪಕ್ಕೆ ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ಒಟ್ಟು ೧೮ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಒಟ್ಟು ರೂ.೧೮ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದ್ದು ಪುತ್ತೂರಿನ ಮುತ್ತು ವಾದ್ಯ ತಂಡ ಮಂಟಪವನ್ನು ಮುನ್ನಡೆಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ಎಸ್.ಎ.ವಿನಾಯಕ್ ತಿಳಿಸಿದರು.

Z-Kote-Ganapathi

ಶ್ರೀ ಚೌಡೇಶ್ವರಿ ದೇವಾಲಯ :::
೫೩ನೇ ವರ್ಷದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಶ್ರೀ ಚೌಡೇಶ್ವರಿ ದೇವಾಲಯ ಈ ಬಾರಿ ‘ಶಿವಪುರಾಣದಿಂದ ಆಯ್ದ ಶಿವನಿಂದ ಅಂಧಕಾಸುರನ ವಧೆ’ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲಾಗುವುದು.
ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದ್ದು ಮಡಿಕೇರಿಯ ಪೂಜಾ ಎಲೆಕ್ಟ್ರಾನಿಕ್ಸ್ ನಜೀರ್ ತಂಡ ಅರ್‌ಜಿಬಿ ತಂತ್ರಜ್ಞಾನದ ಮಲ್ಟಿಕಲರ್ ಲೈಟಿಂಗ್ ಬೋರ್ಡ್ ಅನ್ನು ಅಳವಡಿಸಲಿದೆ. ೧೮ ಕಲಾಕೃತಿಗಳನ್ನು ಬಳಸಲಾಗುತ್ತಿದ್ದು ಉದುಬೂರಿನ ಮಹದೇವಪ್ಪ ಅಂಡ್ ಸನ್ಸ್‌ನವರು ಕಲಾಕೃತಿಗಳನ್ನು ತಯಾರಿಸಲಿದ್ದಾರೆ. ಒಟ್ಟು ೧೫ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರ ತರಲಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷ ಅನಿಲ್ ಪಿ.ಕೆಂಚೆಟ್ಟಿ ತಿಳಿಸಿದ್ದಾರೆ.

Z -Chwdeshwari

ಕೋಟೆ ಮಾರಿಯಮ್ಮ ದೇವಾಲಯ ::::
ಪೆನ್ಸನ್ ಲೇನ್‌ನ ಕೋಟೆ ಮಾರಿಯಮ್ಮ ದೇವಾಲಯ ಸಮಿತಿ ೪೦ನೇ ವರ್ಷದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಬಾರಿ ಶಿವ ಮಹಾ ಪುರಾಣದಿಂದ ಆಯ್ದ ತುಳಸಿ ಮಹಾತ್ಮೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.
ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಲಾಗುತ್ತಿದ್ದು, ಉಟ್ಟು ೧೬ ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತ್ತಿದೆ. ೧೯ ಕಲಾಕೃತಿಗಳನ್ನು ಬಳಸಲಗುತ್ತಿದೆ. ಎಂದು ಸಮಿತಿಯ ಅಧ್ಯಕ್ಷರುಗಳಾದ ಎಂ.ಎಸ್.ದಿನೇಶ್, ಪ್ರಸಾದ್ ಆಚಾರ್ಯ ತಿಳಿಸಿದ್ದಾರೆ.

Z-Kote-Mariyamma

ಕೋದಂಡ ರಾಮ ದೇವಾಲಯ :::
ಕಳೆದ ಬಾರಿ ತೃತೀಯ ಬಹುಮಾನ ಪಡೆದ ಕೊಂದಂಡ ರಾಮ ದೇವಾಲಯ ಈ ಬಾರಿ ೪೧ನೇ ವರ್ಷದ ಉತ್ಸವ ಆಚರಣೆ ನಡೆಸುತ್ತಿದ್ದು ಈ ಬಾರಿ ಶಿವ ಪುರಾಣದಿಂದ ಆಯ್ದ ದಕ್ಷಯಜ್ಞ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಹೆಚ್, ಎನ್. ಪದ್ಮನಾಭ ತಿಳಿಸಿದ್ದಾರೆ.

Z-Kodananda-Rama

ಕರವಲೆ ಭಗವತಿ :::
ಶ್ರೀ ಕರವಲೆ ಭಗವತಿ ದೇವಾಲಯ ದಸರಾ ಸಮಿತಿಯು ೨೦ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗಿದ್ದು ಈ ಬಾರಿ ಯಡಿಯೂರು ಶ್ರೀಗಳ ಆಶೀರ್ವಾದದೊಂದಿಗೆ ಲಂಕಾ ಸಂಗ್ರಾಮದಿಂದ ಆಯ್ದ ಹನುಮಾನ್ ಮಹಾತ್ಮೆ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ತೆಕ್ಕಡೆ ಕಾಶಿ ಕಾವೇರಪ್ಪ ತಿಳಿಸಿದ್ದಾರೆ.

Z-Karavale-Bhagavathi

ಶ್ರೀ ಕಂಚಿಕಾಮಾಕ್ಷಿ ದೇವಾಲಯ ::::
ನಗರದ ಗೌಳಿಬೀದಿಯ ಕಂಚಿಕಾಮಾಕ್ಷಿ ದೇವಾಲಯದ ದಸರಾ ಉತ್ಸವದಲ್ಲಿ ವಿಭಿನ್ನತೆಗೆ ಹೆಸರಾಗಿರುವ ಶ್ರೀ ಕಂಚಿಕಾಮಾಕ್ಷಿ ದೇವಾಲಯ ದಸರಾ ಮಂಟಪ ಸಮಿತಿ ೫೨ನೇ ವರ್ಷದ ಉತ್ಸವ ಆಚರಣೆಗೆ ಸಿದ್ದವಾಗುತ್ತಿದ್ದು ಈ ಬಾರಿ ‘ಶ್ರೀ ಕೊಲ್ಲೂರು ಮೂಕಾಂಬಿಕಾ ಮಹಿಮೆ’ ಕಥಾ ಸಾರಾಂಶವನ್ನು ಮಂಟಪದಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಜಿ.ಆರ್. ರಾಜೀವ್ ಕುಮಾರ್ ತಿಳಿಸಿದ್ದಾರೆ.

Z-Kanchi-Kamakshi

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *