ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಐತಿಹಾಸಿಕ ಮಡಿಕೇರಿ ದಸರಾದಲ್ಲಿ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯ

Posted on: October 21, 2015

ಮಡಿಕೇರಿ :

ಸೌಮ್ಯ ಸ್ವರೂಪಿ ಮತ್ತು ಉಗ್ರರೂಪಿಣಿ ದೇವಿಯರು ಒಂದೆಡೆ ನೆಲೆಸಲು ಸಾಧ್ಯವೇ? ಸಾಧ್ಯ ಎಂದು ನಿರೂಪಿಸಿದೆ ಮಡಿಕೇರಿ ಶ್ರೀ ಕಂಚಿ ಕಾಮಾಕ್ಷಿಯಮ್ಮ ಸನ್ನಿಧಿ. ನಗರದ ಗೌಳಿಬೀದಿಯಲ್ಲಿರುವ ಈ ಸನ್ನಿಧಿಗೆ ಎರಡು ಶತಮಾನಗಳ ಇತಿಹಾಸ ಇದೆ. 250 ವರ್ಷಗಳ ಹಿಂದೆ ತಮಿಳುನಾಡಿನಿಂದ ಗೌಳಿ ಜನಾಂಗದವರು ಮಡಿಕೇರಿಗೆ ಬಂದು ನೆಲೆಸಿದ್ದರು.

Temple-1

ಈ ಜನಾಂಗದವರು ಎಲ್ಲಿ ನೆಲೆಸುತ್ತಾರೋ ಅಲ್ಲಿ ಕಂಚಿಕಾಮಾಕ್ಷಿಯಮ್ಮ ಮತ್ತು ಉಗ್ರ ಸ್ವರೂಪಿಣಿಯಾದ ಮುತ್ತುಮಾರಿಯಮ್ಮ ದೇವಿಯರು ಸಹ ನೆಲೆಗೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ಕಂಚಿ ಕಾಮಾಕ್ಷಿ ದೇವಿಯ ಆದಿಸ್ಥಾನ ತಮಿಳುನಾಡಿನ ಕಂಚಿಕಾಮಾಕ್ಷಿ ದೇವಿಯ ಆದಿಸ್ಥಾನ ತಮಿಳುನಾಡಿನ ಕಂಚಿ ಕಾಮಕೋಟಿ ಪೀಠ. ನಾಡಿನ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾಗಿರುವ ಈ ದೇವಿಯು ಪ್ರಜೆಗಳ ಕಷ್ಟ-ಕಾರ್ಪಣ್ಯಗಳ ನಿವಾರಕಿಯೆನಿಸಿಕೊಂಡಿದ್ದಾಳೆ. ಕೈಯಲ್ಲಿ ಗಿಣಿಯೊಂದನ್ನು ಹಿಡಿದುಕೊಂಡಿರುವುದು ಈ ಶಾಂತ ಸ್ವರೂಪಿಣಿ ವೈಶಿಷ್ಟ್ಯತೆಯಾಗಿದೆ.

ಈ ಪುರಾತನ ಸನ್ನಿಧಿಯು ಬಹಳ ಕಾಲದಿಂದ ಹಲವಾರು ಮಾರ್ಪಾಡುಗಳನ್ನು ಹೊಂದುತ್ತಾ ಬಂದು ಪ್ರಸ್ತುತ ನಗರದ ಬೃಹತ್ ದೇಗುಲಗಳಲ್ಲಿ ಒಂದೆನಿಸಿದೆ. ಗರ್ಭಗುಡಿಯಲ್ಲಿ ಪುರಾತನವಾಗಿ ಮೂಲ ವಿಗ್ರಹವಿದೆ. ಬೃಹತ್ ದೇಗುಲಕ್ಕೆ ವಿಶಿಷ್ಟವಾದ ರಾಜಗೋಪುರ ನಿರ್ಮಾಣವಾಗಿದೆ. ಈ ಗೋಪುರ ಹೋಯ್ಸಳ ಶೈಲಿಯಲ್ಲಿದ್ದು, ಒಳಗೆ ಪ್ರತ್ಯೇಕ ಗರ್ಭಗುಡಿಯೂ ಬೃಹದಾಕಾರದಲ್ಲಿದೆ. ಇತ್ತೀಚೆಗೆ ನಡೆಸಿದ ಸ್ವರ್ಣ ಪ್ರಶ್ನೆಯಲ್ಲಿನ ಸಲಹೆಯಂತೆ ದೇಗುಲದಲ್ಲಿ ಶಾಂತರೂಪಿ ಕಂಚಿ ಕಾಮಾಕ್ಷಿಯಮ್ಮ ಮತ್ತು ಉಗ್ರರೂಪಿ ಮುತ್ತು ಮಾರಿಯಮ್ಮನಿಗೆ ಪ್ರತ್ಯೇಕವಾಗಿ ಗರ್ಭಗುಡಿಗಳನ್ನು ನಿರ್ಮಿಸಲಾಗಿತ್ತು. ಉಳಿದ ಶಕ್ತಿ ದೇವತಾ ದೇಗುಲಗಳಂತೆ ಇಲ್ಲೂ ಯಾದವ ಜನಾಂಗೀಯರಿಂದಲೇ ದೇವಿಗೆ ಪೂಜೆ ಪುರಸ್ಕಾರ ಕೈಂಕರ್ಯಗಳು ನಡೆಯುತ್ತಿದೆ.

Untitled-2 IMG_7030

ಈ ದೇಗುಲದಲ್ಲಿ ವಾರ್ಷಿಕವಾಗಿ ನಡೆಯುವ ಉತ್ಸವಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಮತ್ತು ಅಯ್ಯಪ್ಪ ಸ್ವಾಮಿ ಪೂಜೆಗಳು ಸೇರಿವೆ. ಮತ್ತೊಂದು ಪ್ರಮುಖ ಉತ್ಸವ ಮಾರಿಯಮ್ಮ 2 ವರ್ಷಗಳಿಗೊಮ್ಮೆ ಏಪ್ರಿಲ್ ತಿಂಗಳಲ್ಲಿ ನಡೆಯುವ ಈ ಉತ್ಸವದ ಸಂದರ್ಭದಲ್ಲೂ ಕರಗವನ್ನು ಹೊರಡಿಸಲಾಗುತ್ತದೆ. ಇಲ್ಲಿ ವ್ಯತ್ಯಾಸವೆಂದರೆ ಕರಗವು ಹೂವಿನಿಂದ ಅಲಂಕೃತವಾಗಿರದೇ ಬೇವಿನ ಸೊಪ್ಪಿನಿಂದ ಅಲಂಕೃತವಾಗಿರುತ್ತದೆ. ಇದನ್ನು ಪಚ್ಚೆಕದಗ ಎಂದು ಕರೆಯುತ್ತಾರೆ. ಈ ಉತ್ಸವ ಮೂರು ದಿನಗಳದ್ದಾಗಿರುತ್ತದೆ. ಪ್ರತಿ ಶುಕ್ರವಾರ ವಿಶೇಷ ಪೂಜೆ ಭಜನೆಗಳು ನಡೆಯುತ್ತದೆ.

 

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *