‘ಕರ್ನಾಟಕ ಪ್ರವಾಸ ದರ್ಶನ’ ಕಾರ್ಯಕ್ರಮಕ್ಕೆ ಚಾಲನೆ

Posted on: November 21, 2015

ಸಿದ್ದಾಪುರ :

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ‘ಕರ್ನಾಟಕ ಪ್ರವಾಸ ದರ್ಶನ’ ಕಾರ್ಯಕ್ರಮಕ್ಕೆ ವಿರಾಜಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪಾಡುರಂಗ ಚಾಲನೆ ನೀಡಿದರು.

ಸರಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆಯ ಪರಿಶಿಷ್ಠ ಜಾತಿ, ಪಂಗಡ, ಅಲ್ಪಸಂಖ್ಯಾಂತ ವರ್ಗಗಳ 203 ವಿದ್ಯಾರ್ಥಿಗಳು ಪ್ರವಾಸದಲ್ಲಿ ಪಾಲ್ಗೊಂಡಿದ್ದರು. ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ, ಶ್ರವಣ ಬೆಳಗೊಳ, ಹಾಸನ, ಹಳೆಬೀಡು, ಬೇಲೂರು, ಶಿವಮೊಗ್ಗ, ಜೋಗ ಜಲಪಾತ, ಮುರುಡೇಶ್ವರ. ಮಣಿಪಾಲ್, ಉಡುಪಿ, ಪಿಳಗುಳ, ಧರ್ಮಸ್ಥಳ, ಸುಬ್ರಮಣ್ಯ, ಕೊಡಗು ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ. ಸಿಆರ್‌ಪಿಗಳಾದ ಟಿ.ಕೆ. ವಾಮನ, ಜೀವನ್, ಸತೀಶ್, ಶಿಕ್ಷಕರಾದ ಪ್ರವೀಣ್, ಈಶ್ವರಿ, ಮಹೇಶ್, ಮಂgಜುನಾಥ್, ದೇವರಾಜು ಗೌಡ, ಮಧುಸೂದನ್, ಸತೀಶ್ ಸೇರಿದಂತೆ ಮತ್ತಿತರರು ಪ್ರವಾಸದಲ್ಲಿ ಪಾಲ್ಗೊಂಡಿದ್ದರು.

Tour-2 Tour-3

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *