ಮಡಿಕೇರಿ :
ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ಆಶ್ರಯದಲ್ಲಿ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಕರ್ತರ ಜಿಲ್ಲಾಮಟ್ಟದ ಒಳಾಂಗಣ ಕ್ರೀಡಾಕೂಟದಲ್ಲಿ ಗೋಣಿಕೊಪ್ಪಲು ಹೊಸದಿಗಂತ ವರದಿಗಾರ ಕುಪ್ಪಂಡ ದತ್ತಾತ್ರಿ ಟೇಬಲ್ ಟೆನ್ನಿಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಸಿಂಗಲ್ಸ್ ವಿಭಾಗದಲ್ಲಿ ಜನಶ್ರೀ ವರದಿಗಾರ ಕೊಳಂಬೆ ಉದಯ್ ಮೊಣ್ಣಪ್ಪ ಅವರನ್ನು ಪರಾಭವಗೊಳಿಸಿದರು. ಉದಯ್ ಮೊಣ್ಣಪ್ಪ ದ್ವಿತೀಯ ಸ್ಥಾನ ಪಡೆಯಿತು. ಸುವರ್ಣ ನ್ಯೂಸ್ ಚಾನಲ್ನ ಸತ್ಯ ಮಂಜು (ಪ್ರದೀಪ್) ತೃತೀಯ ಸ್ಥಾನ ಪಡೆದರು. ಡಬಲ್ಸ್ನಲ್ಲಿ ಕುಪ್ಪಂಡ ದತ್ತಾತ್ರಿ ವಿಜಯವಾಣಿ ವರದಿಗಾರ ಅಜ್ಜಮಾಡ ರಮೇಶ್ ಕುಟ್ಟಪ್ಪ ಜೊತೆಯಲ್ಲಿ ಸೇರಿ ಪ್ರಥಮ ಸ್ಥಾನ ಪಡೆದರು. ಅಂತಿಮ ಹಣಾಹಣಿಯಲ್ಲಿ ಟಿವಿ ೯ ವರದಿಗಾರ ಕೆ.ಬಿ. ಮಂಜುನಾಥ್- ಪ್ರಜಾವಾಣಿ ವರದಿಗಾರ ಶ್ರೀಕಾಂತ್ ಕಲ್ಲಮ್ಮನವರ್ ತಂಡವನ್ನು ಪರಾಭವಗೊಳಿಸಿ ದರು. ಪ್ರಜಾಸತ್ಯ ಸಂಪಾದಕ ಜಿ.ವಿ. ರವಿಕುಮಾರ್- ಶಕ್ತಿ ಉಪಸಂಪಾದಕ ಕಾಯಪಂಡ ಶಶಿ ಸೋಮಯ್ಯ ತಂಡ ತೃತೀಯ ಸ್ಥಾನ ಪಡೆಯಿತು.
ಕೇರಂ ಸಿಂಗಲ್ಸ್ ವಿಭಾಗದಲ್ಲಿ ಹೊಸದಿಗಂತ ಸಿದ್ದಾಪುರ ವರದಿಗಾರ ರಜಿತ್ಕುಮಾರ್- ಪ್ರಥಮ, ಟಿವಿ ೯ ವರದಿಗಾರ ಕೆ.ಬಿ. ಮಂಜುನಾಥ್- ದ್ವಿತೀಯ, ರಾಜ್ ನ್ಯೂಸ್ ವರದಿಗಾರ ಸಂಪತ್ರಾಜ್ ತೃತೀಯ ಸ್ಥಾನ ಪಡೆದರು. ಡಬಲ್ಸ್ ವಿಭಾಗದಲ್ಲಿ ಸೋಮವಾರಪೇಟೆ ಮೈಸೂರುಮಿತ್ರ ವರದಿಗಾರ ಮುರಳೀಧರ್- ಪ್ರಜಾವಾಣಿ ಸೋಮವಾರಪೇಟೆ ವರದಿಗಾರ ಡಿ.ಪಿ. ಲೋಕೇಶ್ ಪ್ರಥಮ, ಚಿತ್ತಾರ ಸಂಪಾದಕಿ ಸವಿತಾ ರೈ, ವರದಿಗಾರ ಆನಂದ ಕೊಡಗು ದ್ವಿತೀಯ, ಟಿವಿ ೯ ವರದಿಗಾರ ಕೆ.ಬಿ. ಮಂಜುನಾಥ್- ಸುವರ್ಣ ನ್ಯೂಸ್ನ ಸತ್ಯ ಮಂಜು ತೃತೀಯ ಸ್ಥಾನ ಪಡೆದಿದ್ದಾರೆ.
ಚೆಸ್ ಪಂದ್ಯಾವಳಿಯಲ್ಲಿ ಶಕ್ತಿ ಗೋಣಿಕೊಪ್ಪಲು ವರದಿಗಾರ ಟಿ.ಎಲ್. ಶ್ರೀನಿವಾಸ್, ಪ್ರೆಸ್ಕ್ಲಬ್ ಉದ್ಯೋಗಿ ಕೆ.ಆರ್. ಕೀರ್ತನ್ ದ್ವಿತೀಯ ಹಾಗೂ ಮೈಸೂರುಮಿತ್ರ ಸೋಮವಾರಪೇಟೆ ವರದಿಗಾರ ಎಸ್.ಎ. ಮುರಳೀಧರ್ ತೃತೀಯ ಸ್ಥಾನ ಪಡೆದಿದ್ದಾರೆ. ರೆಮ್ಮಿ ಸ್ಪರ್ಧೆಯಲ್ಲಿ ಟಿ.ಎಲ್. ಶ್ರೀನಿವಾಸ್ ಪ್ರಥಮ, ಸಂಪತ್ರಾಜ್ ದ್ವಿತೀಯ ಹಾಗೂ ಸತ್ಯ ಮಂಜು ತೃತೀಯ ಸ್ಥಾನ ಪಡೆದಿದ್ದಾರೆ.