ಚೆಟ್ಟಳ್ಳಿಯ ಪುತ್ತರಿರ ಕುಟುಂಬದಲ್ಲಿ ನಡೆದ ಪುತ್ತರಿ ನಮ್ಮೆ

Posted on: November 27, 2015

ಮಡಿಕೇರಿ:
ಕೊಡಗಿನ ಸಾಂಪ್ರಯಾಯಿಕ ದೊಡ್ಡ ಹಬ್ಬವೆಂದೇ ಕರೆಯಲ್ಪಡುವ ಹುತ್ತರಿ ಹಬ್ಬವನ್ನು ಕೊಡಗಿನಾದ್ಯಂತ ಸಂಭ್ರಮಿಸಿದಂತೆ ಚೆಟ್ಟಳ್ಳಿಯ ಪುತ್ತರಿರ ಕುಟುಂಬದ ಐನ್ ಮನೆಯಲ್ಲಿ ಆಚರಿಸಲಾಯಿತು.DSC_0832
ಸಂಜೆ ೭ಗಂಟೆಗೆ ಪುತ್ತರಿರ ಕುಟುಂಬದವರೆಲ್ಲ ಸಾಂಪ್ರದಾಯದ ಉಡುಪಿನೊಂದಿಗೆ ಕುಟುಂಬದ ಐನ್ ಮನೆಯಲ್ಲಿ ಸೇರಿ ದೇವರ ದೀಪಕ್ಕೆ ನಮಸ್ಕರಿಸಿ ಕುಟುಂಬದ ಹಿರಿಯರ ಆರ್ಶೀವಾದ ಪಡೆದರು. ಪ್ರತೀ ವರ್ಷದ ಸಂಪ್ರದಾಯದಂತೆ ಕೊಡಗಿನ ಕುಲದೇವರಾದ ಇಗ್ಗುತಪ್ಪ ದೇವನೆಲೆಯಲ್ಲಿ ನೆರೆಕಟ್ಟುವ ಹಾಗು ಗದ್ದೆಗಳಲ್ಲಿ ಕದುರುತೆಗೆದ ನಂತರ ರಾತ್ರಿ 7.40ಕ್ಕೆ ಐನ್‌ಮನೆಯ ಮುಂದಿನ ಹಟ್ಟಿಯಲ್ಲಿ ಕುಟುಂಬದ ಪುರುಷರೆಲ್ಲ ಪೊಲಿ ಪೊಲಿಯೇ ಬಾ..ಇಗ್ಗುತಪ್ಪಂಡ ಭಂಡಾರಕಟ್ಟ್ ಪೊಲಿಯೇ ಬಾ…ಬೈತೂರಪ್ಪಂಡ ಭಂಡಾಕೆಟ್ಟ್ ಪೊಲಿಯೇ ಬಾ..ಕಾವೇರಮ್ಮೆರ ಭಂಡಾರಕೆಟ್ಟ್ ಪೊಲಿಯೇ ಬಾ..ಎಂದು ದೇವರನ್ನು ಕರೆಯುತ್ತ 3 ತರಹದ ಎಲೆ ಹಾಗು ಒಂದು ವಿಶೇಷತರನಾದ ಬಳ್ಳಿಯನ್ನಿಟ್ಟು ನಾರಿನ ಬಳ್ಳಿಯಲ್ಲಿ ನೆರೆ ಕಟ್ಟಲಾಯಿತು.

ಫಲಹಾರವಾದನಂತರ ದೇವರ ನೆಲೆಯಲ್ಲಿ ಎಲ್ಲರು ನಿಂತು ಕದುರು ತೆಗೆಯಲು ಹೋಗುವ ಬಗ್ಗೆ ಹಿರಿಯರು ಮಾತನಾಡಿ ದೇವರ ದೀಪವನಿಡಿದು ಬಿಳಿಯ ಕುಪ್ಪಸ ತೊಟ್ಟ ಪುತ್ತರಿರ ಸುಧೀರ್‌ಗಣಪತಿ ಕುತ್ತಿಯನ್ನು ಹೆಗಲಮೇಲೆ ಹಿಡಿದ ದುಡಿಕೊಟ್ಟ್ ಹಾಡಿನೊಂದಿಗೆ ಕಲ್ಲೋಣಿಯಲ್ಲಿ ಗದ್ದೆಗೆ ತೆರಳಿ 8.40ಕ್ಕೆ ಸರಿಯಾಗಿ ಗದ್ದೆಯಲ್ಲಿ ಬೆಳೆದ ಭತ್ತದ ಕದಿರನ್ನು ಕುಯಿದು ಪೊಲಿ ಪೊಲಿಯೇ….ಬಾ… ಇಗ್ಗುತಪ್ಪಂಡ ಭಂಡಾರಕಟ್ಟ್ ಪೊಲಿಯೇ ಬಾ…ಬೈತೂರಪ್ಪಂಡ ಭಂಡಾಕೆಟ್ಟ್ ಪೊಲಿಯೇ ಬಾ..ಕಾವೇರಮ್ಮೆರ ಭಂಡಾರಕೆಟ್ಟ್ ಪೊಲಿಯೇ ಬಾ..ಎಂದು ದೇವರನ್ನು ಕರೆಯುತ್ತ ಐನ್‌ಗಳಿಗೆ ತೆರಳಿ ದೇವರನೆಲೆಗೆ ನಮಸ್ಕರಿಸಿ ಕನ್ನಿಕೋಂಬರೆಯಲ್ಲಿ ಹಲವು ವಿಧಿವಿಧಾನವನ್ನು ಮುಗಿಸಿ 9.40ಕ್ಕೆ ಕುಟುಂಬದರೆಲ್ಲ ಸೇರಿ ವಿಶೇಷ ಭೋಜನವನ್ನು ಮಾಡಿ ಮನೆಗಳಿಗೆ ತೆರಳಿ ಕದುರನ್ನು ದೇವರನೆಲೆಯಾದ ನೆಲ್ಲಕ್ಕಿಗೆ, ಕನ್ನಿಕಂಬಕ್ಕೆ, ಪಾಯಸದ ಪಾತ್ರೆಗೆ ಹಾಗು ವಾಹನಗಳಿಗೆ ಕಟ್ಟಲಾಯಿತು.
ಮಾರನೆಯದಿನದಿಂದ ಸಂಪ್ರದಾಯದಂತೆ ಚೆಟ್ಟಳ್ಳಿಯ ಹಲವು ಕುಟುಂಬಗಳು ಸೇರಿ ಆಯಾಯ ಕುಟುಂಬದ ಐನ್‌ನೆಗಳಲ್ಲಿ ಮನೆಪಾಟ್ ಹಾಗು ನಿಗಧಿಪಡಿಸಿದ ದಿನದಂದು ಊರೊರ್ರ್‍‌ಮೆ ಯನ್ನು ಏರ್ಪಡಿಸುವರು. DSC_0790 DSC_0751 DSC_0621

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *