ಭಾಗಮಂಡಲ ಶಾಲೆಯಲ್ಲಿ ನೆಹರು ಜಯಂತಿ

Posted on: November 23, 2015

ಮಡಿಕೇರಿ :

ಭಾಗಮಂಡಲ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ವ ಶಿಕ್ಷಣ ಅಭಿಯಾನ ವತಿಯಿಂದ ನವೆಂಬರ್ 14 ರಂದು ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರ್‌ಲಾಲ್ ನೆಹರುರವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ದಾನಿಗಳ ಕೊಡುಗೆಯೊಂದಿಗೆ ವಿಶಿಷ್ಠತೆಯಲ್ಲಿ ಮಕ್ಕಳಿಂದಲೇ ಯಶಸ್ವಿಯಾಗಿ ಆಚರಿಸಲಾಯಿತು. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕಲಿಕೆಗೆ ಪೂರಕವಾದ ವಸ್ತುರೂಪದಲ್ಲಿ ಕೊಡುಗೆಯನ್ನು ದಾನಿಗಳಾದ ಮಡಿಕೇರಿ ಸಾಹಿ ಇಂಜಿನಿಯರಿಂಗ್ ವರ್ಕ್ಸ್‌ನ ಟಿ.ಎಂ.ಮದನ್ ಕುಮಾರ್ ನಾಮಫಲಕ, ಮಡಿಕೇರಿ ಅರುಣ್ ಸ್ಟೋರ್‍ಸ್ ಅವರು ಮೂರು ಪ್ಯಾನಲ್ ಫಲಕ, ಮುಕ್ಕಾಟೀರ ಎಂ.ಅಚ್ಚಯ್ಯ ಅವರು ತೆರೆದ ಗ್ರಂಥಾಲಯ ರ್‍ಯಾಕ್ಸ್, ಕಣಂಜ ತೀರ್ಥಕುಮಾರ್ ಹಾಗೂ ತಲಕಾವೇರಿ ರಾಜೇಶ್ವರಿ ಅವರು ಎಲ್.ಇ.ಡಿ ಟಿ.ವಿ, ಹಾಗೂ ಭಾಗಮಂಡಲ ಗುತ್ತಿಗೆದಾರರಾದ ಸಿ.ಆರ್,. ಜಯನ್ ಅವರು ಶೋಕೇಶ್ ಅನ್ನು ಧಾನವಾಗಿ ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕುಯ್ಯಮುಡಿ ಮನೋಜ್ ಕುಮಾರ್, ಉಪಾಧ್ಯಕ್ಷರಾದ ಎಚ್.ಆರ್ ಸುಮಲತ, ಸದಸ್ಯರಾದ ಕೆ.ಎಂ.ಅರ್ಜುನ, ಭಾಗಮಂಡಲ ಸಿ.ಆರ್.ಪಿ. ಶ್ರೀಧರ್, ಹೇಮಾಜಯನ್, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

bhagamandala

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *