ಬ್ರೇಕಿಂಗ್ ನ್ಯೂಸ್
ವಿರಾಜಪೇಟೆ ಕಾಂಗ್ರೆಸ್ ಅಭ್ಯರ್ಥಿ ಚೆಪ್ಪುಡೀರ ಅರುಣ್ ಮಾಚಯ್ಯ ನಾಮ ಪಾತ್ರ ಸಲ್ಲಿಕೆ , ಮತ್ತಿಕಾಡು ಶ್ರೀ ದಂಡಿನ ಮಾರಿಯಮ್ಮ ದೇವಸ್ಥಾನದ ನವೀಕರಣ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮ ಕಲಶೋತ್ಸವ , ಮತದಾರರ ಜಾಗೃತಿ ಕಾರ್ಯಕ್ರಮ; ಇನ್ನಷ್ಟು ಚುರುಕುಗೊಳಿಸಲು ಮಿಶ್ರ ಸೂಚನೆ , ಸಮಾಜವಾದಿ ಪಕ್ಷದಿಂದ ಕಿಶನ್ ಉತ್ತಪ್ಪ ಕಣಕ್ಕೆ , ಏಳನೇ ವರ್ಷದ ಐರಿ ಕುಟುಂಬದ ಕ್ರಿಕೇಟ್ ಹಬ್ಬಕ್ಕೆ ಅದ್ದೂರಿ ಚಾಲನೆ , ಮತದಾನದ ಮಹತ್ವ ಕುರಿತ ಜಾಗೃತಿ ಅಭಿಯಾನಕ್ಕೆ ಚಾಲನೆ , ಯಾವುದೇ ಅನುಮತಿ ಪಡೆಯದೆ ಕೊರೆದ ಬೋರ್‍ವೆಲ್ ಗ್ರಾಮ ಪಂಚಾಯತಿಗೆ ಮಾಹಿತಿಯೇ ಇಲ್ಲ! , ಏ.27 ರಂದು ರಾಹುಲ್ ಗಾಂಧಿ ಗೋಣಿಕೊಪ್ಪಕ್ಕೆ ಭೇಟಿ , ವಿಜಯನಗರ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಿಂಗ್ ನಿಂದ 117 ಕೋಟಿ ಆಸ್ತಿ ಘೋಷಣೆ , ಚೆಟ್ಟಳ್ಳಿಯಲ್ಲಿ ಮತದಾರರ ಜಾಗೃತಿ ಅಭಿಯಾನ ,

ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ವಿನಯ ಸದ್ಗುಣಗಳನ್ನು ಬೆಳಸಿಕೊಳ್ಳಬೇಕು : ಬೀನಾ ಬೊಳಮ್ಮ

Posted on: November 5, 2015

ನಾಪೋಕ್ಲು :

ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ವಿನಯ ಸದ್ಗುಣಗಳನ್ನು ಬೆಳೆಸಿ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅಲ್ಲಾರಂಡ ಬೀನಾ ಬೊಳ್ಳಮ್ಮ ಹೇಳಿದರು. ಸಮೀಪದ ಎಮ್ಮೆಮಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆದ ನಾಪೋಕ್ಲು ಕ್ಲಸ್ಟರ್ ವ್ಯಾಪ್ತಿಯ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

npk-2

ಒಂದು ಉತ್ತಮ ಸಮಾಜ ನಿರ್ಮಾಣಗೊಳ್ಳಲು ಮಕ್ಕಳನ್ನು ವ್ಯವಸ್ಥಿತವಾಗಿ ರೂಪಿಸುವ ಜವಾಬ್ದಾರಿ ಇಡೀ ಸಮಾಜದ್ದಾಗಿದೆ. ಹಲವು ಜನಾಂಗ ಸಂಸ್ಕೃತಿಯನ್ನು ಒಳಗೊಂಡ ದೇಶದಲ್ಲಿ ಎಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ರೂಢಿಸಿಕೊಳ್ಳಬೇಕು. ವಿಶಾಲ ಮನೋಭಾವನೆಯನ್ನು ಬೆಳೆಸಿಕೊಂಡು ಮಾನವೀಯತೆಯನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದರು.

ಪ್ರತಿಭಾಕಾರಂಜಿ ವಿದ್ಯಾರ್ಥಿಗಳಲ್ಲಿರುವ ಕಲೆ ಸಂಸ್ಕೃತಿ ಆಚಾರ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ಒದಗಿಸುತ್ತದೆ. ವಿದ್ಯೆ ಕಲಿತು ಕಲಿಸುವಂತಾಗಬೇಕು ಎಂದರು. ತಾಲೂಕು ಪಂಚಾಯಿತಿ ಸದಸ್ಯ ನೆರವಂಡ ಉಮೇಶ್ ಮಾತನಾಡಿ ಸಮಾಜದಲ್ಲಿಂದು ಮಾನವೀಯತೆ, ಪ್ರೀತಿ, ಅನುಕಂಪಗಳು ಮಾಯವಾಗಿ ದ್ವೇಷ ಅಸೂಯೆ ತಾಂಡವವಾಡುತ್ತಿದೆ. ಇವುಗಳನ್ನು ಬದಿಗೊತ್ತಿ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಮುಂದಾಗಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ರಾಮಸ್ವಾಮಿಗೌಡ ಮಾತನಾಡಿ ಮಕ್ಕಳ ಸಾಂಸ್ಕೃತಿಕ ಜ್ಞಾನ ಹೆಚ್ಚಿಸಲು ಪ್ರತಿಭಾಕಾರಂಜಿ ಸ್ಪರ್ಧೆಗಳು ಸಹಕಾರಿ ಇವು ಸಮುದಾಯದ ಸಹಭಾಗಿತ್ವದಲ್ಲಿ ಕೈಗೊಳ್ಳುವ ಕಾರ್‍ಯಕ್ರಮವಾಗಿದೆ ಎಂದರು.

ಸಮಾರಂಭದಲ್ಲಿ ನಾಪೋಕ್ಲು ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ಸಿ.ಎನ್.ಉದಯ ಅವರನ್ನು ಸನ್ಮಾನಿಸಲಾಯಿತು. ಎಮ್ಮೆಮಾಡು ಗ್ರಾಮಪಂಚಾಯಿತಿ ಅಧ್ಯಕ್ಷ ನೆರೋಟ್ ಆಲಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಸರ್ಕಾರಿ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಮುಸ್ತಾಫಾ, ಶಾಲಾ ಮುಖ್ಯ ಶಿಕ್ಷಕ ಲೋಕೇಶ್, ಎಸ್‌ಎಸ್‌ವಿ ಶಾಲೆಯ ಅಧ್ಯಕ್ಷ ಅಜೀಜ್, ಮುಖ್ಯ ಶಿಕ್ಷಕ ಅಬ್ದುಲ್‌ರಹಿಮಾನ್ ಉಪಸ್ಥಿತರಿದ್ದರು. ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ಪಿ.ಆರ್. ಅಯ್ಯಪ್ಪ ಸ್ವಾಗತಿಸಿದರು. ಮಾರುತಿಅರೆರಾ ಕಾರ್‍ಯಕ್ರಮ ನಿರೂಪಿಸಿದರು. ಅಬ್ದುಲ್‌ರಹಿಮಾನ್ ವಂದಿಸಿದರು.

npk-3 npk-1

 

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *