ಡಿ.26 ರಂದು ಜಿಲ್ಲಾ ಮಟ್ಟದ ಬ್ಯಾಡ್‌ಮಿಂಟನ್ ಪಂದ್ಯಾವಳಿ

Posted on: December 2, 2015

ಮಡಿಕೇರಿ :
badmintonಕೊಡಗು ಬ್ಯಾಡ್‌ಮಿಂಟನ್ ಅಕಾಡೆಮಿ ವತಿಯಿಂದ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ಬ್ಯಾಡ್‌ಮಿಂಟನ್ ಪಂದ್ಯಾವಳಿಯನ್ನು ಡಿ.26 ರಂದು ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪಿ.ಜಿ.ಪಾಪನ್ ಕುಮಾರ್ ತಿಳಿಸಿದರು.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಂದ್ಯಾವಳಿಯಲ್ಲಿ ಕೊಡಗಿನ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ 5 ವರ್ಷದ, 10, 13, 15, 17 ಮತ್ತು 20 ವರ್ಷ ವಯೋಮಾನದ ಬಾಲಕ ಬಾಲಕಿಯರು ಮಾತ್ರ ಆಡಲು ಅವಕಾಶವಿದ್ದು, ವಿದ್ಯಾರ್ಥಿಗಳು ಶಾಲಾ ಹಾಗೂ ಕಾಲೇಜಿನಲ್ಲಿ ಓದುತ್ತಿರುವ ಬಗ್ಗೆ ಅಸಲಿ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಪ್ರವೇಶ ಪತ್ರದೊಂದಿಗೆ ಲಗತ್ತಿಸುವಂತೆ ಅವರು ತಿಳಿಸಿದರು.

ಕಳೆದ ಬಾರಿ 85 ವಿದ್ಯಾರ್ಥಿಗಳು ಆಗಮಿಸಿದ್ದು, ಈ ಬಾರಿ ಸುಮಾರು ೧೫೦ ವಿದ್ಯಾರ್ಥಿಗಳು ಭಾಗವಹಿಸುವರೆಂದು ನಿರೀಕ್ಷಿಸಲಾಗಿದೆ.ವಿಜೇತರರಿಗೆ ಆಕರ್ಷಕ ನೆನಪಿನ ಕಾಣಿಕೆ ಹಾಗೂ ಪ್ರಶಂಸನಾ ಪತ್ರಗಳನ್ನು ನೀಡಲಾಗುವುದು ಎಂಬ ಮಾಹಿತಿ ನೀಡಿದರು.

ಪ್ರವೇಶ ಪತ್ರ ಸ್ವೀಕರಿಸಲು ಡಿ.23 ಕೊನೆಯ ದಿನವಾಗಿದ್ದು, ಅಂದು ಸಂಜೆ 5 ಗಂಟೆ ಒಳಗೆ ಖುದ್ದಾಗಿ ಪಾಪನ್ ಕುಮಾರ್ ತರಬೇತುದಾರರಿಗೆ ಕೊಡಬೇಕು. ಇವರು ಪ್ರತಿ ದಿನ ಸಂಜೆ.4 ರಿಂದ 6 ಗಂಟೆವರೆಗೆ ಒಳಾಂಗಣ ಕ್ರೀಡಾಂಗಣದಲ್ಲಿರುತ್ತಾರೆ. ತಡವಾಗಿ ಬಂದ ಪ್ರವೇಶ ಪತ್ರವನ್ನು ತಿರಸ್ಕರಿಸಲಾಗುವುದು ಎಂದು ತಿಳಿಸಿದರು. ಸಂಪರ್ಕಿಸಬಹುದಾದ ಮೊ.ನಂ.9449118642, 9482930517.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *