ಡಿ.5 ರಂದು ಉದ್ಯೋಗ ಮೇಳ

Posted on: December 3, 2015

ಮಡಿಕೇರಿ :

Jobಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಡಿಸೆಂಬರ್ 5 ರಂದು ಬೆಳಗ್ಗೆ 10 ರಿಂದ ಮದ್ಯಾಹ್ನ 2 ಗಂಟೆಯ ವರೆಗೆ ಜಿಲ್ಲಾಡಳಿತ ಭವನದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಜಿ.ವಿ,ಕೆ- ಇ.ಎಂ.ಆರ್.ಐ-108 ಅಂಬ್ಯೂಲೆನ್ಸ್ ಸಂಸ್ಥೆಯಲ್ಲಿ ಖಾಲಿ ಇರುವ ೫೦ ಆಂಬ್ಯುಲೆನ್ಸ್ ಚಾಲಕರು, ಹಾಗೂ 50 ದಾದಿಯರ ಹದ್ದೆಗಳಿಗೆ ನೇರ ನೇಮಕಾತಿಯನ್ನು ನಡೆಸಲಿದ್ದಾರೆ.

ಸ್ಟಾಪ್ ನರ್ಸ್ ಹುದ್ದೆಗಳಿಗಾಗಿ ವಿದ್ಯಾರ್ಹತೆ ಎ.ಎನ್.ಎಂ, ಜಿ.ಎನ್.ಎಂ, ವಯೋಮಿತಿ 18 ರಿಂದ 25 ವರ್ಷ, ಆಂಬ್ಯುಲೆನ್ಸ್ ಚಾಲಕರ ಹುದ್ದೆಗಳಿಗಾಗಿ ವಿದ್ಯಾರ್ಹತೆ ಕನಿಷ್ಟ ಎಸ್.ಎಸ್.ಎಲ್.ಸಿ ಯಲ್ಲಿ ತೇರ್ಗಡೆ. ಬ್ಯಾಡ್ಜ್ ಹೊಂದಿರುವ ವಾಹನ ಚಾಲನ ಪರವಾನಗಿ ಹೊಂದಿರಬೇಕು, ವಾಹನ ಚಾಲನೆಯಲ್ಲಿ ೫ ವರ್ಷಗಳ ಅನುಭವವಿರಬೇಕು, ವಯೋಮಿತಿ ೨೫ ರಿಂದ ೩೫ ವರ್ಷಗಳಾಗಿರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಆಗಮಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ ಜಗನ್ನಾಥ್ ಅವರು ಕೋರಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *