ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿ ಪ್ರಕಟ

Posted on: December 1, 2015

N2015 ಮತ್ತು 2016ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿ ಪ್ರಕಟವಾಗಿದ್ದು, ಮುಂಬರುವ ಮಾರ್ಚ್ 11ರಿಂದ ಪರೀಕ್ಷೆಗಳು ಆರಂಭಗೊಳ್ಳಲಿವೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಯಿತು. ಮುಂಬರುವ ಮಾರ್ಚ್ 11 2016ರಿಂದ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಮಾರ್ಚ್ 28 2016ರಂದು ಮುಕ್ತಾಯಗೊಳ್ಳಲಿದೆ ಎಂದು ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.

ಬಹುತೇಕ ಎಲ್ಲ ಪರೀಕ್ಷೆಗಳು ಬೆಳಗ್ಗೆ 9 ರಿಂದ ಆರಂಭವಾಗಲಿದ್ದು, ಕರ್ನಾಟಿಕ್ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತ ಪರೀಕ್ಷೆಗಳು ಮಧ್ಯಾಹ್ನ 2 ರಿಂದ ಸಂಜೆ 5.15ರವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.

 

ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಇಂತಿದೆ:
ಮಾರ್ಚ್ 11 2016- ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
ಮಾರ್ಚ್ 12-ಇತಿಹಾಸ, ಗಣಕ ವಿಜ್ಞಾನ
ಮಾರ್ಚ್ 14-ಭೂಗೋಳ ಶಾಸ್ತ್ರ, ಗಣಿತ
ಮಾರ್ಚ್ 15-ರಾಜ್ಯಶಾಸ್ತ್ರ, ಬೇಸಿಕ್ ಮ್ಯಾಥ್ಸ್
ಮಾರ್ಚ್ 16-ಅರ್ಥಶಾಸ್ತ್ರ ಮತ್ತು ಭೂ ಗರ್ಭಶಾಸ್ತ್ರ
ಮಾರ್ಚ್ 17-ಮನಃಶಾಸ್ತ್ರ, ಭೌತಶಾಸ್ತ್ರ
(ಕರ್ನಾಟಿಕ್ ಸಂಗೀತ,
ಹಿಂದೂಸ್ತಾನಿ ಸಂಗೀತ
ಮಧ್ಯಾಹ್ನ.2.00ರಿಂದ ಸಂಜೆ.5.15)
ಮಾರ್ಚ್ 18-ತರ್ಕಶಾಸ್ತ್ರ, ಶಿಕ್ಷಣ
ಮಾರ್ಚ್ 19-ಐಚ್ಛಿಕ ಕನ್ನಡ, ಸಂಖ್ಯಾಶಾಸ್ತ್ರ, ಗೃಹವಿಜ್ಞಾನ
ಮಾರ್ಚ್ 21-ವ್ಯವಹಾರ ಅಧ್ಯಯನ, ರಾಸಾಯನಶಾಸ್ತ್ರ
ಮಾರ್ಚ್ 22-ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 23-ಹಿಂದಿ, ತೆಲುಗು
ಮಾರ್ಚ್ 24-ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ
ಮಾರ್ಚ್ 26-ಆಂಗ್ಲಭಾಷೆ
ಮಾರ್ಚ್ 28-ಕನ್ನಡ, ತಮಿಳು, ಮಲೆಯಾಳಂ, ಅರೇಬಿಕ್

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *