ವಿವಿಧ ಅಪ್ರೆಂಟಿಷಿಪ್ ತರಬೇತಿಗೆ ಅರ್ಜಿ ಆಹ್ವಾನ

Posted on: December 3, 2015

ಮಡಿಕೇರಿ :

Aಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಬೆಂಗಳೂರು, ಇವರು ಐ.ಟಿ.ಐ. ಪಾಸಾದ ಅಭ್ಯರ್ಥಿಗಳಿಂದ ಟ್ರೇಡ್ ಅಪ್ರೆಂಟಿಷಿಪ್ ತರಬೇತಿಗಾಗಿ ಅರ್ಜಿಗಳನ್ನು ಅಹ್ವಾನಿಸಿದ್ದಾರೆ. ಟ್ರೇಡ್ ಅಪ್ರೆಂಟಿಷಿಪ್ ತರಬೇತಿಗಾಗಿ ಫಿಟ್ಟರ್-420 ಹುದ್ದೆಗಳು, ಟರ್ನರ್-60 ಹುದ್ದೆಗಳು, ಮೆಷಿನಿಷ್ಟ-50 ಹುದ್ದೆಗಳು, ಎಲೆಕ್ಟ್ರಿಷಿಯನ್-60 ಹುದ್ದೆಗಳು, ವೆಲ್ಡೆರ್-30 ಹುದ್ದೆಗಳು, ಕಾರ್ಪೆಂಟರ್-10 ಹುದ್ದೆಗಳು, ಫೌಂಡ್ರಿಮನ್-20 ಹುದ್ದೆಗಳು ಹಾಗೂ ಶೀಟ್ ಮೆಟಲ್ ವರ್ಕರ್-30 ಹುದ್ದೆಗಳು. ಅಪ್ರೆಂಟಿಷಿಪ್ ತರಬೇತಿ ಅವಧಿ 1 ವರ್ಷ ಹಾಗೂ ಕಾರ್ಪೆಂಟರ್, ಫೌಂಡ್ರಿಮನ್ ಹಾಗೂ ಶೀಟ್ ಮೆಟಲ್ ವರ್ಕರ್ ವೃತ್ತಿಗಳಿಗೆ 2 ವರ್ಷಗಳಾಗಿರುತ್ತದೆ.

ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಷ್ಯವೇತನವನ್ನು ನೀಡಲಾಗುತ್ತದೆ. ಆರ್ಹ ಅಭ್ಯರ್ಥಿಗಳು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಇಲ್ಲಿ ಅರ್ಜಿ ಪಡೆದುಕೊಳ್ಳಬಹುದು. ಭರ್ತಿ ಮಾಡಿ ಅರ್ಜಿಗಳನ್ನು ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಡಿಕೇರಿ, ಇವರಿಗೆ ಸಲ್ಲಿಸಲು ಕೊನೆಯ ದಿನ ಡಿಸೆಂಬರ್ 11 ಆಗಿರುತ್ತದೆ.

ಅರ್ಜಿಯೊಂದಿಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಐ.ಟಿ.ಐ.ಅಂಕಪಟ್ಟಿ, ಮೀಸಲಾತಿ ಪ್ರಮಾಣಪತ್ರ (ಅನ್ವಯವಾಗುವವರಿಗೆ ಮಾತ್ರ), ವಿಕಲಚೇತನ ಪ್ರಮಾಣಪತ್ರ (ಅನ್ವಯವಾಗುವವರಿಗೆ ಮಾತ್ರ) ಹಾಗೂ ಮಾಜಿ ಸೈನಿಕ ಪ್ರಮಾಣಪತ್ರಗಳನ್ನು (ಅನ್ವಯವಾಗುವವರಿಗೆ ಮಾತ್ರ) ಸಲ್ಲಿಸಬೇಕಾಗಿರುತ್ತದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ ಜಗನ್ನಾಥ್ ತಿಳಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *