ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಏರಿಯಾಗಿದ್ದು, ಗೃಹ ಬಳಕೆಯ ಅಡುಗೆ ಅನಿಲ ಪ್ರತಿ ಸಿಲಿಂಡರ್ ಗೆ ರು. 61.50ರಷ್ಟು ತುಟ್ಟಿಯಾಗಲಿದೆ. ದೆಹಲಿ ದರದಲ್ಲಿ 14.2 ಕೆಜಿ ವಿಭಾಗದ ಪ್ರತಿ ಅಡುಗೆ ಅನಿಲ ಸಿಲಿಂಡರ್ ಬೆಲೆ ರು. 606.50 ಆಗಲಿದೆ. ಸಬ್ಸಿಡಿ ಸಿಲಿಂಡರ್ ಬೆಲೆ ರು. 417.82 ಆಗಲಿದೆ. ಇತ್ತ ಬೆಂಗಳೂರಿನಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಸಿಲಿಂಡರ್ ದರ ರು. 621.50 ಆಗಲಿದೆ.
ಪೆಟ್ರೋಲ್, ಡೀಸೆಲ್ ನಂತೆ ವಿಮಾನದಲ್ಲಿ ಬಳಸುವ ತೈಲದ ಬೆಲೆಯನ್ನೂ ಇಳಿಸಲಾಗಿದೆ. ಎಟಿಎಫ್ ಬೆಲೆ ಶೇ. 1.2ರಷ್ಟು ಇಳಿಕೆ ಕಂಡಿದ್ದರೂ ವಿಮಾನ ನಿಲ್ದಾಣಗಳಿಂದ ವಿಮಾನ ನಿಲ್ದಾಣಕ್ಕೆ ಈ ದರ ಏರಿಳಿಯಲಿದೆ. ವಿಮಾನಗಳ ಒಟ್ಟು ಹಾರಾಟ ವೆಚ್ಚದ ಶೇ. 40ರಷ್ಟು ಇಂಧನಕ್ಕೇ ವ್ಯಯವಾಗುವ ಹಿನ್ನೆಲೆಯಲ್ಲಿ, ಬೆಲೆ ಇಳಿಕೆ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಉಲ್ಲಾಸ ತಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಬೆಲೆ ಆಧರಿಸಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರತಿ ತಿಂಗಳೂ ಅಡುಗೆ ಅನಿಲ ಮತ್ತು ವಿಮಾನ ಇಂಧನ ಬೆಲೆಯನ್ನು ನಿಗದಿಪಡಿಸುತ್ತವೆ.