ಅಪರಿಚಿತ ಪುರುಷ ಶವ ಪತ್ತೆ

Posted on: January 28, 2016

ಸಿದ್ದಾಪುರ:

ಸಮೀಪದ ಹಚ್ಚಿನಾಡು ಕಾವೇರಿ ನದಿಯಲ್ಲಿ ಅಪರಿಚಿತ ಪುರುಷ ಶವ ಪತ್ತೆಯಾಗಿದ್ದು, ೪ ದಿನಗಳ ಹಿಂದೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಕಪ್ಪು ಬಣ್ಣದ ಪ್ಯಾಂಟ್, ಬಿಳಿ ಮತು ಕಪ್ಪು ಬಣ್ಣದ ಗೆರೆಯ ಶರ್ಟ್ ಧರಿಸಿದ್ದು, ಕಿರು ಬೆರಳಿನಲ್ಲಿ ಬಂಗಾರದ ಉಂಗುರ ಇದ್ದು, ಅಂದಾಜು ೪೫ ವರ್ಷ ಪ್ರಾಯ ಇರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಸಿದ್ದಾಪುರ ಠಾಣಾಧಿಕಾರಿ ಬಿ.ಜಿ ಕುಮಾರ್ ಭೇಟಿ ನೀಡಿ ನೀರಿನಿಂದ ಶವವನ್ನು ಹೊರ ತೆಗೆದು, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಸಾಗಿಸಲಾಗಿದೆ.
ವಾರಸುದಾರರು ಇದ್ದಲ್ಲಿ 9480804950 ಸಂಪರ್ಕಿಸಲು ಬಿ.ಜಿ ಕುಮಾರ್ ತಿಳಿಸಿದ್ದಾರೆ.
IMG-20160127-WA0013

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *