ಬ್ರೇಕಿಂಗ್ ನ್ಯೂಸ್

ಎಸ್‌ಪಿ ವರ್ಗಾವಣೆಗೆವಿರೋಧ

Posted on: January 6, 2016

ಮಡಿಕೇರಿ:

ಟಿಪ್ಪು ಜಯಂತಿಯಂದು ಕೊಡಗುಎಸ್‌ಪಿ ವರ್ತಿಕಾ ಕಟಿಯಾರ್ ರಜೆಯಮೇಲೆ ತೆರಳಿದ್ದಾರೆ ಎಂದು ಪರಿಗಣಿಸಿರಾಜ್ಯ ಸರ್ಕಾರ ಜನವರಿ ಒಂದರಂದುಅವರನ್ನು ವರ್ಗಾವಣೆ ಮಾಡಿ ಆದೇಶಹೊರಡಿಸಿತ್ತು. ಆದರೆಎಸ್‌ಪಿವರ್ತಿಕಾ ಕಟಿಯಾರ್ ಇಲಾಖೆಯಕ್ರೀಡಾಕೂಟವೊಂದರಲ್ಲಿಭಾಗವಹಿಸಲು ಕೊಡಗಿನಪ್ರತಿನಿಧಿಯಾಗಿ ತೆರಳಿದ್ದರು. ಈ ಬಗ್ಗೆಪರಿಗಣಿಸದ ರಾಜ್ಯ ಸರ್ಕಾರ,ಏಕಾಏಕಿ ವರ್ತಿಕಾ ಕಟಿಯಾರ್ಅವರನ್ನು ವರ್ಗಾವಣೆ ಗೊಳಿಸಿದಲ್ಲದೆ,ತೆರಳಬೇಕಾಗಿರುವ ಸ್ಥಳವನ್ನುನ್ನುಸೂಚಿಸಿಲ್ಲ. ಇದರಿಂದ ಗೊಂದಲದವಾತಾವರಣ ಉಂಟಾಗಿದೆ.

DSC_8048;j

ಇನ್ನು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲುಕೊಡಗು ಎಸ್‌ಪಿ ವರ್ತಿಕಾಕಟಿಯಾರ್ ತೆರಳಿದ್ದರೂ ಟಿಪ್ಪುದಿನಾಚರಣೆಯಂದು ನಡೆಯುತ್ತಿದ್ದಸೂಕ್ಷ್ಮ ವಾತಾವರಣವನ್ನು ಪರಿಗಣಿಸಿಕೂಡಲೇ ಮಡಿಕೇರಿಗೆ ಆಗಮಿಸಿಸೂಕ್ತ ಕ್ರಮ ಕೈಗೊಂಡಿದ್ದಾರೆ. ಆಮೂಲಕ ಅನೇಕ ಜೀವಗಳ ರಕ್ಷಣೆಮಾಡಿದ್ದಾರೆ. ಒಬ್ಬರು ಮಹಿಳೆಯಾಗಿಉತ್ತಮವಾಗಿಕಾರ್ಯನಿರ್ವಹಿಸಿರುವುದನ್ನುಕೊಡಗಿನ ಜನತೆ ಮರೆಯುವುದಿಲ್ಲಎಂದು ಸ್ಥಳೀಯರುಅಭಿಪ್ರಾಯಪಟ್ಟಿದ್ದಾರೆ.

ಟಿಪ್ಪು ದಿನಾಚರಣೆಯಂದು ಎಸ್‌ಪಿವರ್ತಿಕಾ ಕಟಿಯಾರ್‌ರಂತೆ ಕೊಡಗಿನಜಿಲ್ಲಾಧಿಕಾರಿ ಮೀರ್ ಅನೀಸ್ಅಹ್ಮದ್ ಕೂಡ ರಜೆಯ ಮೇಲೆತೆರಳಿದ್ದರು. ಆದರೆ ರಾಜ್ಯ ಸರ್ಕಾರಜಿಲ್ಲಾಧಿಕಾರಿ ಮೇಲೆ ಯಾವುದೇ ಕ್ರಮಕೈಗೊಳ್ಳದೆ ವರ್ತಿಕಾ ಕಟಿಯಾರ್ಅವರನ್ನು ಮಾತ್ರ ವರ್ಗಾವಣೆಮಾಡಿದೆ. ಇದರಿಂದ ಒಂದು ಕಣ್ಣಿಗೆಸುಣ್ಣ ಒಂದು ಕಣ್ಣಿಗೆ ಬೆಣ್ಣೆಎಂಬಂತಾಗಿದೆ ಎಂಬುದುಸಾರ್ವಜನಿಕ ವಲಯದಲ್ಲಿಕೇಳಿಬರುತ್ತಿರುವ ಮಾತುಗಳು.

ಟಿಪ್ಪು ದಿನಾಚರಣೆಗೆ ಆದೇಶ ನೀಡುವಮೂಲಕ ಕೊಡಗಿನಲ್ಲಿ ವಿಷಬೀಜಬಿತ್ತುವ ಕೆಲಸ ಮಾಡಿದ್ದಸಿದ್ದರಾಮಯ್ಯ ಸರ್ಕಾರ ಇದೀಗಮತ್ತೊಮ್ಮೆ ಒಂದು ಕೋಮಿನಪರವಾಗಿ ಕಾರ್ಯನಿರ್ವಹಿಸುತ್ತಿದೆಎಂದು ಆರೋಪಿಸಿರುವಸ್ಥಳೀಯರಾದ ಪ್ರಸನ್ನಭಟ್, ವರ್ತಿಕಾಕಟಿಯಾರ್ ಅವರಿಗೆ ಸೂಕ್ತಸ್ಥಾನಮಾನ ನೀಡಬೇಕೆಂದುಆಗ್ರಹಿಸಿದ್ದಾರೆ.

One thought on “ಎಸ್‌ಪಿ ವರ್ಗಾವಣೆಗೆವಿರೋಧ

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *