ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಅಖಿಲ ಭಾರತ ಥಲಸೈನಿಕ್ ಕ್ಯಾಂಪ್

Posted on: February 7, 2017

9ಮಡಿಕೇರಿ: ನವ ದೆಹಲಿಯಲ್ಲಿ ನಡೆದ ಅಖಿಲ ಭಾರತ ಥಲಸೈನಿಕ್ ಕ್ಯಾಂಪ್ ನಲ್ಲಿ(ಟಿ.ಎಸ್.ಸಿ) ಜೂನಿಯರ್ ರೈಫಲ್ ಶೂಟಿಂಗ್ .೨೨ ವಿಭಾಗದಲ್ಲಿ ಕೊಡಗಿನ ಎನ್.ಸಿ.ಸಿ ಹತ್ತೊಂಬತ್ತನೇ ಬೆಟಾಲಿಯನ್ ನ ಮಡಿಕೇರಿಯ ಭಾರತೀಯ ವಿದ್ಯಾಭವನದ ಒಂಬತ್ತನೇ ತರಗತಿಯ ವಿದ್ಯಾರ್ಥಿ ಪುತ್ತರಿರ.ಎಂ. ನಂಜಪ್ಪ ಸ್ಪರ್ದಿಸಿ ಎಲ್ಲರ ಮೆಚ್ಚುಗೆ ಪಾತ್ರನಾಗಿದ್ದಾನೆ.
೨೦೧೬ ನೇ ಸಾಲಿನಲ್ಲಿ ಮಡಿಕೇರಿಯಲ್ಲಿ ನಡೆದ ಎನ್.ಸಿ.ಸಿ. ಕ್ಯಾಂಪ್ ಸೆಲೆಕ್ಷನಿನಲ್ಲಿ ಮೊದಲನೆಯ ಸ್ಥಾನವನ್ನು ಗಳಿಸಿ, ನಂತರ ೨೦೧೬ ನೆಯ ಮೇ ತಿಂಗಳಲ್ಲಿ ಮೂಡಬಿದೆರೆಯ ಅಳ್ವಸಲ್ಲಿ ನಡೆದ ಟಿ.ಎಸ್.ಸಿ. ಒಂದನೆ ಝೋನೆಲ್ ಕ್ಯಾಂಪಿನಲ್ಲಿ ಕೊಡಗು, ಉಡುಪಿ, ಮಂಗಳೂರು, ಶಿವಮೊಗ್ಗ ಜಿಲ್ಲೆಯ ಸ್ಪರ್ದಿಗಳ ಜೊತೆಯಲ್ಲಿ ಸ್ಪರ್ದಿಸಿ ಮೊದಲನೆಯ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾನೆ.
ನಂತರದ ದಿನಗಳಲ್ಲಿ ನಡೆದ ಶಿವಮೊಗ್ಗದ ಟಿ.ಎಸ್.ಸಿ. ಎರಡನೆಯ ಕ್ಯಾಂಪಿನ ರೈಫಲ್ ಶೂಟಿಂಗಿನಲ್ಲಿ ಇನ್ನು ಹಲವಷ್ಟು ಜಿಲ್ಲೆಗಳ ಎನ್.ಸಿ.ಸಿ. ಸ್ಪರ್ದಿಗಳ ಜೊತೆಯಲ್ಲಿ ಸ್ಪರ್ದಿಸಿ ಅಲ್ಲಿಯೂ ಪ್ರಥಮ ಸ್ಥಾನ ಗಳಿಸಿಕೊಂಡು ನಂತರದ ದಿನಗಳಲ್ಲಿ ಬೆಳ್ಳಾರಿ, ವಿಜಾಪುರ, ಗೋವಾ ರಾಜ್ಯದಲ್ಲಿ ನಡೆದ ಸ್ಪರ್ದೆಗಳಲ್ಲಿಯೂ ಭಾಗವಹಿಸಿ ಕರ್ನಾಟಕ ಹಾಗು ಗೋವಾ ಡೈರೆಕ್ಟೊರೇಟ್ ಅನ್ನು ಪ್ರತಿನಿಧಿಸಿ, ನವದೆಹಲಿಯಲ್ಲಿ ನಡೆದ ನ್ಯಾಷನಲ್ ಲೆವೆಲ್ಲಿನ ಆಲ್ ಇಂಡಿಯಾ ಟಿ.ಎಸ್.ಸಿ. ಯನ್ನು ಪ್ರತಿನಿಧಿಸಿ ಎರಡನೆಯ ಸ್ಥಾನವನ್ನು ಗಿಟ್ಟಿಸಿಕೊಂಡು ಕರ್ನಾಟಕಕ್ಕೆ ಹಾಗು ಕೊಡಗು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾನೆ.
ಈತನ ಪ್ರತಿಭೆಯನ್ನು ಗಮನಿಸಿದ ಜಿಲ್ಲಾಡಳಿತವು ಈ ವರ್ಷದ ಮಡಿಕೇರಿಯ ಕೋಟೆಯ ಆವರಣದಲ್ಲಿ ನಡೆದ ರಾಜ್ಯಯೋತ್ಸವ ಸಮಾರಂಭದಲ್ಲಿ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಈತನಿಗೆ ಶಾಲು ಹೊದಿಸಿ ಸನ್ಮಾನಿ ಗೌರವಿಸಿದರು.
ಈತ ಚೆಟ್ಟಳ್ಳಿಯ ನಿವಾಸಿ ಕಾಫೀ ಬೆಳೆಗಾರರಾದ ಪುತ್ತರಿರ ರಾಜೇಶ್ ಮುತ್ತಪ್ಪ ಮತ್ತು ವನಿತಾ ಮುತ್ತಪ್ಪನವರ ಪುತ್ರನಾಗಿದ್ದಾನೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *