ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಅರ್ಜಿ ಆಹ್ವಾನ

Posted on: February 9, 2017

ಮಡಿಕೇರಿ:- ಆಯುಷ್ ಇಲಾಖಾ ವತಿಯಿಂದ ಥೆರಪಿಸ್ಟ್/ಮಸಾಜಿಸ್ಟ್ ಸೇವೆ ನಿರ್ವಹಿಸಲು ಮಾರ್ಚ್, ೦೧ ರಿಂದ ತರಬೇತಿಯನ್ನು ಆಯೋಜಿಸಲಾಗಿದ್ದು, ಈ ತರಬೇತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳಿಗೆ ಮಾರ್ಗಸೂಚಿಗಳು ಇಂತಿದೆ:-ಈ ತರಬೇತಿಯು ೩ ತಿಂಗಳ ಅವಧಿಯುಳ್ಳದಾಗಿದ್ದು, ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಇಲಾಖಾ ವತಿಯಿಂದ ಪ್ರಮಾಣ ಪತ್ರ ನೀಡಲಾಗುವುದು. ತರಬೇತಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಮತ್ತು ಸರ್ಕಾರದ ವತಿಯಿಂದ ಯಾವುದೇ ಹಣಕಾಸಿನ ಸಹಾಯ ನೀಡಲಾಗುವುದಿಲ್ಲ. ತರಬೇತಿ ನಂತರ ಅಭ್ಯರ್ಥಿಗಳು ಅವಶ್ಯಕತೆಗನುಗುಣವಾಗಿ ಸರ್ಕಾರಿ/ಖಾಸಗಿ ಆಯುಷ್ ಆಸ್ಪತ್ರೆಗಳಲ್ಲಿ ಥೆರಪಿಸ್ಟ್/ಮಸಾಜಿಸ್ಟ್‌ಗಳಾಗಿ ಕರ್ತವ್ಯ ನಿರ್ವಹಿಸಲು ಅವಕಾಶಗಳು ಲಭ್ಯವಾಗುತ್ತದೆ. ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ಕನಿಷ್ಟ ೧೦ನೇ ತರಗತಿ ಪಾಸ್/ಫೇಲ್ ಅರ್ಹತೆಯನ್ನು ಹೊಂದಿರಬೇಕು. ತರಬೇತಿಯನ್ನು ಕರ್ನಾಟಕದ ೪ ಸ್ಥಳಗಳಲ್ಲಿ ತಲಾ ೩೦ ಅಭ್ಯರ್ಥಿಗಳಿಗೆ (೧೫ ಪುರುಷರ, ೧೫ ಮಹಿಳೆಯರು) ಆಯೋಜಿಸಲಾಗುವುದು. ತರಬೇತಿ ನಂತರ ಉದ್ಯೋಗವನ್ನು ಕಲ್ಪಿಸಲು ಇಲಾಖೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ತರಬೇತಿಗೆ ಆಯ್ಕೆಯಾಗುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಆಯ್ಕೆಗೊಂಡ ಸ್ಥಳಗಳಲ್ಲಿ ಹಾಜರಾಗಿ ಊಟ, ವಸತಿ ಮತ್ತು ಇತರರ ಸೌಲಭ್ಯಗಳನ್ನು ತಾವೇ ವ್ಯವಸ್ಥೆ ಮಾಡಿಕೊಳ್ಳುವುದು. ಸರ್ಕಾರವು ಯಾವುದೇ ವೆಚ್ಚ ಭರಿಸುವುದಿಲ್ಲ. ಅಭ್ಯರ್ಥಿಯ ವಯೋಮಿತಿ ಕನಿಷ್ಟ ೧೮ ರಿಂದ ಗರಿಷ್ಟ ೩೫ರ ಮಿತಿಯೊಳಗಿರಬೇಕು. ಅಭ್ಯರ್ಥಿಯು ಉತ್ತಮ ಆರೋಗ್ಯ ಸ್ಥಿತಿಯನ್ನು ಹೊಂದಿದ್ದು, ದೈಹಿಕ ಸಾಮರ್ಥ್ಯವುಳ್ಳವರಾಗಿರಬೇಕು.
ಒಂದು ಜಿಲ್ಲೆಯಲ್ಲಿ ಒಟ್ಟು ೨ ಪುರುಷ ಹಾಗೂ ೨ ಮಹಿಳಾ ಒಟ್ಟು ೪ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಿ ಕಳುಹಿಸಿಕೊಡಲಾಗುವುದು. ಹೆಚ್ಚುವರಿ ಪಟ್ಟಿಯನ್ನು ಮಾಡಲಾಗುವುದು.
ತರಬೇತಿ ಆಯೋಜಿಸಲಾಗುವ ಸ್ಥಳವು ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಮೈಸೂರಿನಲ್ಲಿ ತರಬೇತಿಯನ್ನು ನೀಡಲಾಗುವುದು. ಈ ತರಬೇತಿಯು ಮಾರ್ಚ್, ೦೧ ರಿಂದ ಪ್ರಾರಂಭವಾಗುವುದರಿಂದ ಆಸಕ್ತ ಅಭ್ಯರ್ಥಿಗಳು ಜರೂರಾಗಿ ತಮ್ಮ ಅರ್ಜಿಯನ್ನು ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ, ಮಹದೇವಪೇಟೆ, ಶ್ರೀ ಚೌಡೇಶ್ವರಿ ದೇವಾಲಯದ ಹತ್ತಿರ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿಗೆ ಸಲ್ಲಿಸುವುದು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಆಯುಷ್ ಕಚೇರಿಯ ದೂರವಾಣಿ ಸಂ:೦೮೨೭೨-೨೨೦೨೨೮ರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಅವರು ತಿಳಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *