ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ಕಿಡ್ನಿ ಸ್ಟೋನ್‌ಗೆ ಶಾಶ್ವತ ಪರಿಹಾರ

Posted on: February 27, 2017

387858_112203862228520_100003167214502_72270_497739299_nಕಿಡ್ನಿಯಲ್ಲಿ ಸ್ಟೋನ್ ಅಂದಾಗ ಬಹಳ ಜನರು ಕೋಸು, ಟೊಮೇಟೊ ಸೇವಿಸುವುದರಿಂದ ಉಂಟಾಗುತ್ತದೆ ಎಂದು ಹೇಳುತ್ತಾರೆ. ಇವುಗಳು ಕೇವಲ ಪ್ರೇರೇಪಿತ ಅಂಶಗಳು. ಕಿಡ್ನಿಯಲ್ಲಿ ಹರಳುಗಳು ಏಕೆ ಉಂಟಾಗುತ್ತವೆ? ಯಾರಲ್ಲಿ ಉಂಟಾಗುತ್ತದೆ? ಮೊದಲಾದವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.

ಪ್ರಸ್ತುತ ಆಧುನಿಕ ಪ್ರಪಂಚದಲ್ಲಿ ಕಿಡ್ನಿ ಸ್ಟೋನ್ ಸಾಮಾನ್ಯ ಸಮಸ್ಯೆಯಾಗಿದೆ. ಪ್ರಪಂಚದಲ್ಲಿ ಶೇ.10-15 ರಷ್ಟು ಜನರು ಈ ಸಮಸ್ಯೆಗೆ ಗುರಿಯಾಗುತ್ತಾರೆ. ಭಾರತದಲ್ಲಿ ಶೇ.5-7 ಮಿಲಿಯನ್ ಜನರು ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಮುಖ್ಯವಾಗಿ 20 ರಿಂದ 55 ವರ್ಷದ ಮಧ್ಯ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದರಲ್ಲಿ ಸ್ತ್ರೀಯರಿಗಿಂತ ಪುರುಷರಲ್ಲಿ 2-3 ಪಟ್ಟು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ನಮ್ಮ ಶರೀರದಲ್ಲಿ ಮೂತ್ರಪಿಂಡಗಳು ತುಂಬಾ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇವು ರಕ್ತವನ್ನು ಹಾಳುವ ಮಾಡುವ ಕೆಟ್ಟ ಪದಾರ್ಥಗಳನ್ನು ಬೇರ್ಪಡಿಸಿ, ಮೂತ್ರದ ಮೂಲಕ ಶರೀರದಿಂದ ಹೊರ ಹಾಕಿ ಲವಣಗಳ ಸಮತೋಲನವನ್ನು ಕಾಪಾಡುತ್ತದೆ. ಯಾವಾಗ ಮೂತ್ರದಲ್ಲಿ ಅಧಿಕವಾಗಿರುವ ಲವಣಗಳು ಸ್ಫಟಿಕ ರೂಪದಲ್ಲಿ ಮಾರ್ಪಟ್ಟು ಘನ ವಸ್ತುವಾಗಿ ಪರಿವರ್ತನೆಯಾಗುತ್ತವೆಯೋ ಆತನಿಗೆ ಕಿಡ್ನಿ ಹರಳುಗಳು ಏರ್ಪಡುತ್ತವೆ. ಮೂತ್ರ ವ್ಯವಸ್ಥೆಯ ಭಾಗವಾದ ಮೂತ್ರಪಿಂಡ, ಮೂತ್ರನಾಳ, ಮೂತ್ರಕೋಶ ಹೀಗೆ ಎಲ್ಲ ಭಾಗದಲ್ಲೂ ಹರಳುಗಳು ಏರ್ಪಡಬಹುದು. ಆದರೆ ಇವೆಲ್ಲವನ್ನೂ ಸಮಾನ್ಯವಾಗಿ ‘ಕಿಡ್ನಿ ಸ್ಟೋನ್’ ಅಂತ ಕರೆಯುತ್ತಾರೆ.

ಕಾರಣಗಳು

ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ ಮತ್ತು ಕೆಲವೊಂದು ಕಾರಣಗಳಿಂದ ಕಿಡ್ನಿ ಸ್ಟೋನ್ ಏರ್ಪಡುವ ಸಾಧ್ಯತೆ ಇದೆ. ಮುಖ್ಯವಾಗಿ ಅಧಿಕ ಪ್ರಮಾಣದಲ್ಲಿ ಕ್ಯಾಲ್ಷಿಯಂ, ಯೂರಿಕ್ ಆಮ್ಲ, ಸಿಸ್ಟಿನಂತಹ ಕರಗದಿರುವ ಪದಾರ್ಥಗಳು ಮೂತ್ರದ ಮೂಲಕ ವಿಸರ್ಜನೆಯಾಗದಿರುವುದರಿಂದ ಸ್ಟೋನ್ ಏರ್ಪಡುತ್ತದೆ. ಕೆಲವರಲ್ಲಿ ಮೂತ್ರಕೋಶದ ಸೋಂಕು, ಮೂತ್ರನಾಳದಲ್ಲಿ ಅಡಚಣೆ ಉಂಟಾಗುವುದು, ಹೈಪರ್ ಪ್ಯಾರಾಥೈರಾಯ್ಡಿಸಂ, ಒಂದೇ ಕಡೆ ಹೆಚ್ಚು ಸಮಯ ಕುಳಿತು ಕೆಲಸ ಮಾಡುವುದು, ಶರೀರದಲ್ಲಿ ವಿಟಮಿನ್ ಎ ಪ್ರಮಾಣ ಕಡಿಮೆಯಾಗುವುದು ಇನ್ನಿತರ ಕಾರಣಗಳಿಂದ ಕಿಡ್ನಿಯಲ್ಲಿ ಹರಳುಗಳು ಏರ್ಪಡುತ್ತವೆ.

ಲಕ್ಷಣಗಳು

ವಿಪರೀತವಾದ ಹೊಟ್ಟೆನೋವು, ಸೊಂಟ ನೋವು, ವಾಂತಿ, ಮೂತ್ರದಲ್ಲಿ ಉರಿತ ಇವು ಪ್ರಮುಖ ಲಕ್ಷಣಗಳು. ಕೆಲವರಲ್ಲಿ ಹರಳುಗಳಿಂದಾಗಿ ಒಂದು ಕಡೆ ಸೊಂಟ ನೋವು, ಜ್ವರ, ಮೂತ್ರದಲ್ಲಿ ಉರಿತ ಕಾಣಿಸಿಕೊಳ್ಳುತ್ತದೆ. ಇದನ್ನೇ ರೀನಲ್ ಕೋಲಿಕ್ ಅಂತಾರೆ. ಕೆಲವರಲ್ಲಿ ಮೂತ್ರನಾಳದಲ್ಲಿ ಹರಳುಗಳು ಏರ್ಪಡುತ್ತವೆ. ಇದರಿಂದ ಬರುವ ನೋವನ್ನು ಯುರೆಟರಿಕ್ ಕೋಲಿಕ್ ಅಂತಾರೆ. ಬೆನ್ನು ಮತ್ತು ಹೊಟ್ಟೆಯ ನಡುವೆ ಇರುವ ಭಾಗದಲ್ಲಿ ವಿಪರೀತವಾದ ನೋವು ಏರ್ಪಟ್ಟು ಅಲ್ಲಿಂದ ಕೊಬ್ಬೊಟ್ಟೆಗೆ ಹರಡುತ್ತದೆ. ನೋವಿನ ಜತೆಗೆ ವಾಂತಿ, ಜ್ವರ, ಮೂತ್ರದಲ್ಲಿ ಉರಿತ, ಮೂತ್ರದಲ್ಲಿ ರಕ್ತ, ಕೀವು ಕೂಡ ಕಾಣಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಯಾವುದೇ ರೀತಿಯ ಲಕ್ಷಣಗಳು ಮತ್ತು ನೋವು ಕಾಣಿಸಿಕೊಳ್ಳದೇ ಉತ್ಪತ್ತಿಯಾಗುವ ಹರಳುಗಳನ್ನು ಸೈಲೆಂಟ್ ಸ್ಟೋನ್ ಎಂದು ಕರೆಯುತ್ತಾರೆ.

ರೋಗ ಪತ್ತೆ ಪರೀಕ್ಷೆಗಳು

  • ಮೂತ್ರ ಪರೀಕ್ಷೆ: ಮೂತ್ರದಲ್ಲಿ ಹಾನಿಕರವಾದ ಬ್ಯಾಕ್ಟೀರಿಯಾ ಇತರ ಸೂಕ್ಷ್ಮ ಜೀವಿಗಳು, ರಕ್ತ ಕಣಗಳು, ಕ್ರಿಸ್ಟಲ್‌ಗಳು ಇವೆಯೇ ಎಂದು ಪರೀಕ್ಷಿಸುವುದು.
  • ರಕ್ತ ಪರೀಕ್ಷೆ: ರಕ್ತದಲ್ಲಿ ಬಿಳಿ ರಕ್ತ ಕಣಗಳ ಪ್ರಮಾಣ, ಸೀರಂ, ಕ್ಯಾಲ್ಷಿಯಂ ಪ್ರಮಾಣವನ್ನು ಪರೀಕ್ಷಿಸುವುದು.
  • ಎಕ್ಸ್‌ರೇ, ಕೆಯುಬಿ, ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್, ಸಿಸ್ಟೋಸ್ಕೋಪಿ ಪರೀಕ್ಷೆಗಳಿಂದ ರೋಗವನ್ನು ಪರೀಕ್ಷಿಸಬಹುದು.

ಮುಂಜಾಗ್ರತೆ

ದಿನಕ್ಕೆ ಕನಿಷ್ಠ 2 ರಿಂದ 3 ಲೀ. ನೀರು ಕುಡಿಯಬೇಕು. ಆಹಾರದಲ್ಲಿ ಉಪ್ಪು 5 ಗ್ರಾಂ, ಮಾಂಸಾಹಾರ 170 ರಿಂದ 250 ಗ್ರಾಂ ಮೀರದಂತೆ ಸೇವಿಸಬೇಕು. ವಿಟಮಿನ್ ಸಿ, ಕ್ಯಾಲ್ಷಿಯಂ ಸಪ್ಲಿಮೆಂಟ್‌ಗಳು, ಮುಖ್ಯವಾಗಿ ಕೆಲವು ಮಾತ್ರೆಗಳನ್ನು ವೈದ್ಯರ ಸಲಹೆಯ ಮೇರೆಗೇ ತೆಗೆದುಕೊಳ್ಳಬೇಕು. ಆಹಾರದಲ್ಲಿ ದಿನಕ್ಕೆ 1000 ದಿಂದ 1200 ಮಿ.ಗ್ರಾಂ ಕ್ಯಾಲ್ಷಿಯಂ ಇರುವ ಹಾಗೆ ಸೇವಿಸಬೇಕು. ತಂಪು ಪಾನೀಯಗಳನ್ನು ಸೇವಿಸಬಾರದು.

ಹೋಮಿಯೋಕೇರ್ ಚಿಕಿತ್ಸೆ

ಹೋಮಿಯೋಕೇರ್ ಇಂಟರ್‌ನ್ಯಾಷನಲ್‌ನಲ್ಲಿ ಜೆನೆಟಿಕ್ ಕಾನ್ಸ್ಟಿಟ್ಯೂಷನ್ ವೈದ್ಯ ಪದ್ಧತಿಯಿಂದ ಕಿಡ್ನಿಯಲ್ಲಿ ಹರಳುಗಳನ್ನು ತೊಲಗಿಸಬಹುದು. ರೋಗಲಕ್ಷಣಗಳ ಜತೆ ಮಾನಸಿಕ, ಶಾರೀರಿಕ ಲಕ್ಷಣಗಳನ್ನು ಕೂಡ ಪರಿಗಣನೆಗೆ ತೆಗೆದುಕೊಂಡು ಚಿಕಿತ್ಸೆ ಕೊಡಲಾಗುವುದು. ಶಸ್ತ್ರಚಿಕಿತ್ಸೆಯ ನಂತರ ಕೂಡ ಕಿಡ್ನಿಯಲ್ಲಿ ಹರಳುಗಳು ಬರುವ ಸಾಧ್ಯತೆ ಶೇ.50 ರಷ್ಟು ಇದೆ. ಆದರೆ, ಹೋಮಿಯೋಕೇರ್ ಇಂಟರ್‌ನ್ಯಾಷನಲ್ ವೈದ್ಯರಿಂದ ಕಿಡ್ನಿಯಲ್ಲಿ ಲವಣಗಳ ಸಮತೋಲನವನ್ನು ಕಾಪಾಡಿ ಕಿಡ್ನಿಯಲ್ಲಿ ಮತ್ತೆ ಹರಳುಗಳು ಏರ್ಪಡದಂತೆ ಸಂಪೂರ್ಣವಾಗಿ ವಾಸಿ ಮಾಡಬಹುದು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *