ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ನವಣೆ ರೊಟ್ಟಿ

Posted on: February 27, 2017
Bajra-Rotisಬೇಕಾಗುವ ಪದಾರ್ಥಗಳು
  • ನವಣೆಯಲ್ಲಿ ಮಾಡಿದ ಹಿಟ್ಟು – 2 ಬಟ್ಟಲು
  • ಉಪ್ಪು- ರುಚಿಗೆ ತಕ್ಕಷ್ಟು
  • ಬಿಸಿ ನೀರು – 1.5 ಬಟ್ಟಲು
  • ಬಟರ್ ಪೇಪರ್ – 2
  • ಎಣ್ಣೆ/ತುಪ್ಪ – ಸ್ವಲ್ಪ
ಮಾಡುವ ವಿಧಾನ…
  • ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ನವಣೆಯಲ್ಲಿ ಮಾಡಿಕೊಂಡ ಹಿಟ್ಟನ್ನು ಹಾಕಬೇಕು. ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
  • ನಂತರ ಬಿಸಿ ನೀರನ್ನು ಹಾಕಿಕೊಂಡು ಸ್ವಲ್ಪ-ಸ್ವಲ್ಪವಾಗಿ ಹಿಟ್ಟಿನ ರೀತಿಯಲ್ಲಿ ಕಲಸಿಕೊಳ್ಳಬೇಕು. ಚಪಾತಿ ಹಿಟ್ಟಿನಂತೆ ಸ್ವಲ್ಪ ಮೃದುವಾಗಿ ಬಂದ ನಂತರ ಕವರ್ ವೊಂದಕ್ಕೆ ಹಾಕಿ 15-20 ನಿಮಿಷ ನೆನೆಯಲು ಬಿಡಬೇಕು.
  • ನಂತರ ಬಟರ್ ಪೇಪರ್ ಮೇಲೆ ಸ್ವಲ್ಪ ತುಪ್ಪವನ್ನು ಹಾಕಿ ಹಿಟ್ಟನ್ನು ಬಾಲಿನಂತೆ ಉಂಡೆ ಮಾಡಿಕೊಂಡು ಅದರ ಮೇಲಿಡಬೇಕು. ಮತ್ತೊಂದು ಬಟರ್ ಪೇಪರ್ ತೆಗೆದುಕೊಂಡು ಅದಕ್ಕೆ ತುಪ್ಪ ಸವರಿ ಉಂಡೆಯ ಮೇಲಿಟ್ಟು ಚಪಾತಿಯಂತೆ ತಟ್ಟಬೇಕು.
  • ಒಲೆಯ ಮೇಲೆ ತವಾ ಇಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಎರಡೂ ಬದಿಯಲ್ಲಿ ಕೆಂಪಗೆ ಸುಟ್ಟರೆ, ರುಚಿಕರವಾದ ನವಣೆ ರೊಟ್ಟಿ ತಿನ್ನಲು ಸಿದ್ಧವಾಗುತ್ತದೆ. ಕಡಲೆಬೀಜ ಚಟ್ನಿಯೊಂದಿಗೆ ತರಕಾರಿ ಪಲ್ಯ ಹಾಕಿ ತಿಂದರೆ ನವಣೆ ರೊಟ್ಟಿಯ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *